ಸೌತ್‌ ನಟಿಯೊಂದಿಗೆ ಖಾಸಗಿ ಜೆಟ್‌ನಲ್ಲಿ ವಿರಾಟ್ ಕೊಹ್ಲಿ? ಫೋಟೋ ವೈರಲ್‌!

ಐಪಿಎಲ್ 14ನೇ ಸೀಸನ್‌ ಶುರುವಾಗಿದ್ದು, ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಅದ್ಭುತ ಗೆಲುವು ದಾಖಲಿಸಿದೆ. ಇದೇ ಉತ್ಸಾಹದಲ್ಲಿ ತಂಡದ ಎಲ್ಲ ಆಟಗಾರರು ತಮ್ಮ ಮುಂದಿನ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಆರ್‌ಸಿಬಿ ಕ್ಯಾಪ್ಟನ್ ವಿರಾಟ್‌ ಕೊಹ್ಲಿ  ಸೌತ್‌ ನಟಿ ತಮನ್ನಾ ಭಾಟಿಯಾ ಅವರೊಂದಿಗೆ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಆದರೆ ಈ ಫೋಟೋದ ಹಿಂದಿನ ಸತ್ಯವೇನು?

ಇತ್ತೀಚೆಗೆ, ನಟಿ ತಮನ್ನಾ ಭಾಟಿಯಾ ತನ್ನ ಖಾಸಗಿ ಜೆಟ್ ಒಳಗಿನಫೋಟೋವನ್ನುಹಂಚಿಕೊಂಡಿದ್ದಾರೆ.
'ಬ್ರೇಕ್‌ಫಾಸ್ಟ್‌ಪ್ಲೀಸ್' ಕ್ಯಾಪ್ಷನ್‌ ನೀಡಿರುವ ಈ ಫೋಟೋದಲ್ಲಿ ನಟಿ ಕೈಯಲ್ಲಿ ಬಹಳಷ್ಟು ತಿಂಡಿಗಳಿವೆ.

ಆದರೆ, ಈ ಫೋಟೋದಲ್ಲಿ ತಮನ್ನಾ ಅವರ ಹಿಂದೆ ಕಾಣುವ ವ್ಯಕ್ತಿಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಟೀಮ್‌ ಇಂಡಿಯಾ ಹಾಗೂ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯಂತೆ ಕಾಣುತ್ತಿದ್ದಾರೆ ಆ ವ್ಯಕ್ತಿ.
ತಮನ್ನಾ ಅವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತಿದ್ದು,ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
'ಹಿಂದೆ ವಿರಾಟ್ ಕೊಹ್ಲಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದಾರೆ?' ಎಂದು ಕೇಳಿದ್ದಾರೆ.
ಈ ಫೋಟೋ ನೋಡಿ ಫ್ಯಾನ್ಸ್‌ ಐಪಿಎಲ್ ಬಿಟ್ಟು, ವಿರಾಟ್‌ ತಮನ್ನಾ ಜೊತೆ ಏನು ಮಾಡುತ್ತಿದ್ದಾರೆ? ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಆದರೆ ಫೋಟೋದಲ್ಲಿರುವ ವ್ಯಕ್ತಿ ವಿರಾಟ್ ಕೊಹ್ಲಿ ಅಲ್ಲ. ತಮನ್ನಾ ಅವರ ಮೇಕಪ್ ಕಲಾವಿದ ಫ್ಲೋರಿಯನ್ ಹರ್ರೆಲ್.
ಇತ್ತೀಚೆಗೆ ತಮನ್ನಾ ತಮ್ಮ ಮೊದಲ ವೆಬ್ ಸರಣಿಯು 11th Hour ಪ್ರಮೋಷನ್‌ಗಾಗಿ ಮೇಕಪ್ ಆರ್ಟಿಸ್ಟ್‌ ಫ್ಲೋರಿಯನ್ ಹರ್ರೆಲ್ ಮತ್ತು ಫ್ರೆಂಡ್‌ ನೀಲಂ ಜೊತೆ ಹೈದರಾಬಾದ್‌ಗೆ ತೆರಳಿದ್ದರು.
ಅದೇ ಸಮಯದಲ್ಲಿ, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದೊಂದಿಗೆ ನೆಕ್ಟ್‌ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಏಪ್ರಿಲ್ 14ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ ಆರ್‌ಸಿಬಿ.

Latest Videos

click me!