T20 World Cup ಮದುವೆ ವಿಚಾರದಲ್ಲಿ ಅಚ್ಚರಿಯ ಹೇಳಿಕೆ ಕೊಟ್ಟ ರಶೀದ್ ಖಾನ್‌..!

First Published Oct 21, 2021, 7:28 PM IST

ದುಬೈ: ಆಫ್ಘಾನಿಸ್ತಾನ ಕ್ರಿಕೆಟ್ ತಂಡದ (Afghanistan Cricket Team) ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ (Rashid Khan) ತಮ್ಮ ಅಮೋಘ ಸ್ಪಿನ್ ಬೌಲಿಂಗ್ ಮೂಲಕ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಐಸಿಸಿ ಟಿ20 ಟೂರ್ನಿಯಲ್ಲಿ ಆಫ್ಘಾನಿಸ್ತಾನ ಪರ ಮಿಂಚಲು ರಶೀದ್‌ ಖಾನ್ ಎದುರು ನೋಡುತ್ತಿದ್ದಾರೆ. ಇದೇ ವೇಳೆ ರಶೀದ್ ಖಾನ್‌ ವಿವಾಹದ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ರಶೀದ್ ಖಾನ್ ಏನಂದ್ರು ನೀವೇ ನೋಡಿ.
 

ರಶೀದ್ ಖಾನ್ ತಮ್ಮ ಮನೋಜ್ಞ ಲೆಗ್ ಸ್ಪಿನ್‌, ಗೂಗ್ಲಿ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಹಲವಾರು ಬಾರಿ ಕಂಗಾಲು ಮಾಡಿದ್ದಾರೆ. ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳು ರಶೀದ್ ಖಾನ್ ಪ್ರತಿಭೆಗೆ ತಲೆದೂಗಿದ್ದಾರೆ. 

ಶ್ರೀಲಂಕಾ, ಬಾಂಗ್ಲಾದೇಶ ತಂಡಗಳನ್ನು ಹಿಂದಿಕ್ಕಿ 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಆಫ್ಘಾನಿಸ್ತಾನ ನೇರ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಸೂಪರ್ 12 ಹಂತದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ.

ಸೂಪರ್‌ 12 ಹಂತದ ಪಂದ್ಯಕ್ಕೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳ ಪೈಕಿ ಆಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಮೊದಲ ಪಂದ್ಯದಲ್ಲಿ 41 ರನ್‌ಗಳ ಅಂತರದ ಸೋಲು ಕಂಡಿತ್ತು. ಆದರೆ ಎರಡನೇ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್ ವಿರುದ್ದ ಭರ್ಜರಿ ಗೆಲುವು ಸಾಧಿಸಿ ತಾನೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್ ಎನ್ನುವುದನ್ನು ಸಾಬೀತು ಮಾಡಿದೆ. 

ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ತಮ್ಮ ವಿವಾಹದ ಕುರಿತಂತೆ ಹರಿದಾಡುತ್ತಿದ್ದ ಗಾಳಿ ಸುದ್ದಿಗಳಿಗೆ ಲೆಗ್ ಸ್ಪಿನ್ನರ್ ರಶೀದ್‌ ಖಾನ್‌ ತೆರೆ ಎಳೆದಿದ್ದಾರೆ
 

ಆಫ್ಘಾನಿಸ್ತಾನ ಕ್ರಿಕೆಟ್ ತಂಡವು ವಿಶ್ವಕಪ್ ಜಯಿಸಿದ ಬಳಿಕವಷ್ಟೇ ತಾವು ವಿವಾಹವಾಗುವುದಾಗಿ ರಶೀದ್ ಖಾನ್‌ ಹೇಳಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಈ ವಿಚಾರದ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. 

ಈ ಗಾಳಿಸುದ್ದಿ ತಮ್ಮ ಕಿವಿಗೆ ಬೀಳುತ್ತಿದ್ದಂತೆಯೇ ನಿಜಕ್ಕೂ ಆಘಾತವಾಯಿತು. ಪ್ರಾಮಾಣಿಕವಾಗಿ ಹೇಳುತ್ತೇನೆ ವಿಶ್ವಕಪ್ ಗೆದ್ದ ಬಳಿಕ ನಾನು ಮದುವೆಯಾಗುತ್ತೇನೆ ಎಂದು ನಾನು ಹೇಳಿಯೇ ಇಲ್ಲ ಎಂದು ನ್ಯೂಸ್‌ 18ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಮುಂದಿನ ಕೆಲವು ವರ್ಷಗಳಲ್ಲಿ ಮೂರು ವಿಶ್ವಕಪ್ ಟೂರ್ನಿಗಳು ಜರುಗಲಿವೆ(2021ರ ಟಿ20 ವಿಶ್ವಕಪ್, 2022ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್). ಹೀಗಾಗಿ ನನ್ನ ಆದ್ಯತೆಯೇನಿದ್ದರೂ ಕ್ರಿಕೆಟ್‌ ಕಡೆಯೇ ಹೊರತು, ಮದುವೆಯಲ್ಲ ಎಂದು ರಶೀದ್ ಖಾನ್ ಹೇಳಿದ್ದಾಗಿ ತಿಳಿಸಿದ್ದಾರೆ. 
 

ಇದೇ ವೇಳೆ ಟಿ20 ಕ್ರಿಕೆಟ್‌ನ ಐದು ಡೇಂಜರಸ್ ಬ್ಯಾಟ್ಸ್‌ಮನ್‌ಗಳನ್ನು ರಶೀದ್‌ ಖಾನ್ ಹೆಸರಿಸಿದ್ದು, ವಿರಾಟ್ ಕೊಹ್ಲಿ, ಕೀರನ್ ಪೊಲ್ಲಾರ್ಡ್, ಕೇನ್ ವಿಲಿಯಮ್ಸನ್‌, ಎಬಿ ಡಿವಿಲಿಯರ್ಸ್‌ ಹಾಗೂ ಹಾರ್ದಿಕ್‌ ಪಾಂಡ್ಯ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು ಎಂದಿದ್ದಾರೆ.

click me!