'ಪಾಠ ಶುರು ಮಾಡಿದ ಮೇಸ್ಟ್ರು'  ಟೀಂ ಇಂಡಿಯಾಕ್ಕೆ ಧೋನಿ ಮೆಂಟರಿಂಗ್ ಶುರು!

First Published | Oct 17, 2021, 11:16 PM IST

ದುಬೈ(ಅ. 17)   ಟಿ೦ಟ್ವೆಂಟಿ ವಿಶ್ವ ಕಪ್ ಗೆ ವೇದಿಕೆ ಸಿದ್ಧವಾಗಿದ್ದು (T20 World Cup ) ಮೆಂಟರ್ ಆಗಿ  ಮಹೇಂದ್ರ ಸಿಂಗ್ ಧೋನಿ(MS Dhoni) ತಮ್ಮ ಕಾರ್ಯ ಶುರು ಹಚ್ಚಿಕೊಂಡಿದ್ದಾರೆ. ಬಿಸಿಸಿಐ (BCCI)ಪೋಟೋ ಗಳನ್ನು ಬಿಡುಗಡೆ ಮಾಡಿದೆ.

ದುಬೈ ನಲ್ಲಿ  ಆರಂಭವಾಗಿರುವ ಟಿ-ಟ್ವೆಂಟಿ ಕಪ್ ಮೇಲೆ ಎಲ್ಲರ ನಿರೀಕ್ಷೆ ಇದೆ. ಐಪಿಎಲ್ ಗೆದ್ದು ಹುಮ್ಮಸ್ಸಿನಲ್ಲಿರುವ ಮಹೇಂದ್ರ ಸಿಂಗ್ ಧೋನಿ ಮೆಂಟರ್ ಆಗಿ ಹೊಸ ಜವಾಬ್ದಾರಿ ನಿರ್ವಹಿಸಲು ಆರಂಭಿಸಿದ್ದಾರೆ.

ಸೀಮಿತ ಓವರ್ ಮಾದರಿಗೆ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ನಂತರ ಗುಡ್ ಬೈ ಹೇಳಲಿದ್ದೇನೆ ಎಂದು ಈಗಾಗಲೇ ತಿಳಿಸಿದ್ದಾರೆ. ಈ ನಡುವೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ್  ಮಾತು ಕೇಳಿ ಬಂದಿದೆ.

Tap to resize

ರಾಜನನಿಗೆ ಅದ್ದೂರಿ ಸ್ವಾಗತ ಕೋರುತ್ತಿದ್ದೇವೆ ಎಂದು ಬಿಸಿಸಿಐ ಬರೆದುಕೊಂಡಿದೆ.  ಟೀಂ ಇಂಡಿಯಾಕ್ಕೆ ಧೋನಿ ಮರಳಿದ್ದು ಹೊಸ ಪಾತ್ರ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.

ಟೀಂ ಇಂಡಿಯಾದ ಇಸ್ಟಾ ಹ್ಯಾಂಡಲ್ ಸಹ ಪೋಟೋ ಶೇರ್ ಮಾಡಿಕೊಂಡಿದ್ದು ಎಂಎಸ್ ಎಂದಾದರೂ ನಮ್ಮನ್ನು ಬಿಟ್ಟು ಹೋಗಿದ್ರಾ.. ಇಲ್ಲವೇ   ಇಲ್ಲ ಎಂದು ಹೇಳಿದೆ.

ಟಿ-ಟ್ವೆಂಟಿ ವಿಶ್ವಕಪ್ ಭಾರತ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಪಾಕಿಸ್ತಾನವನ್ನು ಮೊದಲನೇ ಹಂತದಲ್ಲಿಯೇ ಭಾರತ ಎದುರಿಸಲಿದ್ದು ಅಕ್ಟೋಬರ್  24  ರ ಪಂದ್ಯಕ್ಕೆ ಇಡೀ  ಜಗತ್ತು ಕಾದಿದೆ.


ಕೊರೋನಾ ಕಾರಣಕ್ಕೆ ಭಾರತದಲ್ಲಿ ಅರ್ಧಕ್ಕೆ ನಿಂತಿದ್ದ ಐಪಿಎಲ್ ಪಂದ್ಯಾವಳಿಯನ್ನು ದುಬೈನಲ್ಲಿ ಪೂರ್ಣಗೊಳಿಸಲಾಯಿತು. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆದ್ದಿತ್ತು.

Latest Videos

click me!