ಧೋನಿ ಮಗಳು ಸಾಕ್ಷಿಯ ಪುಟ್ಟ ಕೈಯಲ್ಲಿ ದೊಡ್ಡ ಟ್ರೋಫಿ, ಇಂಟರ್‌ನೆಟ್‌ನಲ್ಲಿ ಕ್ಯೂಟೆಸ್ಟ್ ಫೋಟೋ

First Published Oct 16, 2021, 1:51 PM IST
  • ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ IPLನ ಕ್ಯೂಟೆಸ್ಟ್ ಫೊಟೋ
  • ಪುಟ್ಟ ಕೈಗಳಲ್ಲಿ ದೊಡ್ಡ ಟ್ರೋಫಿ
  • ಧೋನಿಯ ಮುದ್ದು ಮಗಳ ಫೊಟೋ ಎಲ್ಲೆಡೆ ವೈರಲ್

ಸೋಷಿಯಲ್ ಮಿಡಿಯಾದಲ್ಲಿ ನಿನ್ನೆಯಿಂದ ಮುದ್ದಾದ ಫೋಟೋ ಒಂದು ವೈರಲ್ ಆಗಿದೆ. ಇಂಟರ್‌ನೆಟ್‌ನಲ್ಲಿ ಇಂದು ನೀವು ನೋಡಬಹುದಾದ ಅತ್ಯಂತ ಮುದ್ದಿನ ಫೊಟೋ ಇದು ಎಂಬ ಕ್ಯಾಪ್ಶನ್ ಜೊತೆ ಫೋಟೊ ವೈರಲ್ ಆಗಿದ್ದು ಬೇರೆ ಯಾರದ್ದೂ ಅಲ್ಲ, ಧೋನಿ ಮಗಳು ಜೀವಾಳದ್ದು(Ziva)

ಪತ್ನಿ ಸಾಕ್ಷಿ ಮತ್ತು ಮಗಳು ಜೀವಾ ನಿರಂತರವಾಗಿ ಮಹೇಂದ್ರ ಸಿಂಗ್ ಧೋನಿಗೆ ಬೆಂಬಲ ನೀಡುತ್ತಾ ಹುರಿದುಂಬಿಸಿದ್ದು ಎಲ್ಲರಿಗೂ ಗೊತ್ತು. ನಿರಂತರವಾಗಿ ಧೋನಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದರು ಅಮ್ಮ ಮತ್ತು ಮಗಳು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಂದು ಐಪಿಎಲ್(IPL) ಗೆಲುವನ್ನು ಮುಡಿಗೇರಿಸಿಕೊಂಡಾಗ ಧೋನಿ ಪತ್ನಿ ಹಾಗೂ ಮಗಳು ಫುಲ್ ಖುಷಿಯಾಗಿದ್ದರು.

ಈ ಬಾರಿ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಸೋತ ನಂತರ, ಸಿಎಸ್‌ಕೆ ಮೊದಲು ಬ್ಯಾಟ್ ಮಾಡಲು ಕೇಳಿತು. ಧೋನಿ ಐಪಿಎಲ್ ಟ್ರೋಫಿಯನ್ನು ನಾಲ್ಕನೇ ಬಾರಿಗೆ ಎತ್ತಿದ್ದಾರೆ.

ತಂಡ ಗೆಲ್ಲುತ್ತಲೇ ಮೈದಾನಕ್ಕೆ ಬಂದ ಸಾಕ್ಷಿ ಹಾಗೂ ಮಗಳು ಜೀವಾ ಧೋನಿಯನ್ನು ಹಗ್ ಮಾಡಿ ಸಂಭ್ರಮಿಸಿದ್ದಾರೆ. ಐಪಿಎಲ್ ಗೆದ್ದ ಖುಷಿಯಲ್ಲಿ ಮಗಳು ಹಾಗೂ ಪತ್ನಿಯೊಂದಿಗೆ ಸಂಭ್ರಮಿಸಿದ್ದಾರೆ ಧೋನಿ.

ಅಪ್ಪ ಅಮ್ಮ ಹಗ್ ಮಾಡಬೇಕಾದರೆ ತಾನೂ ಅವರನ್ನು ಹಗ್ ಮಾಡಿ ತಂದೆ ಗೆದ್ದ ಖುಷಿಯನ್ನು ಸಂಭ್ರಮಿಸಿದ ಜೀವಾ ಫೊಟೋ ಈಗ ಎಲ್ಲೆ ವೈರಲ್ ಆಗಿದೆ.

IPL 2021; ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK; ಧೋನಿ ಸೈನ್ಯಕ್ಕೆ 4ನೇ ಟ್ರೋಫಿ!

ಈ ಹಿಂದೆ ಜೀವಾ ಕ್ರಿಕೆಟ್ ನೋಡುತ್ತಾ ಎರಡು ಕೈಗಳನ್ನು ಮುಗಿದು ತಂದೆಯ ಗೆಲುವಿಗಾಗಿ ಪ್ರಾರ್ಥಿಸಿದ ಫೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅಂತೂ ಜೀವಾ ಪ್ರಾರ್ಥನೆ ಫಲ ಕೊಟ್ಟಿದೆ ಅಂತಾಯ್ತು

ದೊಡ್ಡ ಟ್ರೋಫಿಯನ್ನು ತನ್ನ ಪುಟ್ಟ ಕೈಗಳಿಂದ ಎತ್ತಿಕೊಂಡು ಜೀವ ಸಂಭ್ರಮಿಸುತ್ತಿರೋ ಫೋಟೋ ಇಂಟರ್‌ನೆಟ್‌ನಲ್ಲಿ ಓಡಾಡುತ್ತಿದೆ. ಮೈದಾನದಲ್ಲಿ ಧೋನಿಯ ಪುಟ್ಟ ರಾಜಕುಮಾರಿಯನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ

ಐಪಿಎಲ್ ಟ್ರೋಫಿಯನ್ನು ಕೈಯಲ್ಲಿ ಹಿಡಿದು ದಿಟ್ಟಿಸಿ ನೋಡುತ್ತಿರೋ ಜೀವಾಳ ಕ್ಯೂಟ್‌ನೆಸ್‌ ಓವರ್‌ಲೋಡೆಡ್ ಫೊಟೋ ಒಂದು ಇಂದಿನ ದಿನ ನೀವು ನೋಡೋ ಕ್ಯೂಟೆಸ್ಟ್ ಫೋಟೊ ಅಲ್ವಾ ?

click me!