India vs Pakistan 2026 Match Date: ಮುಂದಿನ ವರ್ಷ ಟಿ20 ವಿಶ್ವಕಪ್ 2026 ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಯಾವಾಗ, ಎಲ್ಲಿ ಮುಖಾಮುಖಿಯಾಗಲಿವೆ ಎಂಬುದರ ಕಂಪ್ಲೀಟ್ ಡೀಟೈಲ್ಸ್.
ಐಸಿಸಿ ಟಿ20 ವಿಶ್ವಕಪ್ 2024 ಗೆದ್ದ ನಂತರ, ಭಾರತ ತಂಡದ ದೃಷ್ಟಿ 2026ರ ವಿಶ್ವಕಪ್ ಮೇಲಿದೆ. ಈ ಸರಣಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿವೆ. ಬಹುನಿರೀಕ್ಷಿತ ಭಾರತ-ಪಾಕ್ ಪಂದ್ಯದ ವಿವರ ಇಲ್ಲಿದೆ.
25
ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ?
ಪುರುಷರ ಟಿ20 ವಿಶ್ವಕಪ್ 2026ರಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿದೆ. ಏಷ್ಯಾಕಪ್ 2025ರ ಸೋಲಿನ ನಂತರ ಪಾಕ್ ತಂಡ ಮೊದಲ ಬಾರಿಗೆ ಭಾರತವನ್ನು ಎದುರಿಸಲಿದೆ.
35
ಟಿ20 ವಿಶ್ವಕಪ್ 2026ರಲ್ಲಿ ಭಾರತದ ವೇಳಾಪಟ್ಟಿ
ಭಾರತದ ಗುಂಪಿನಲ್ಲಿ ಪಾಕಿಸ್ತಾನ, ಅಮೆರಿಕ, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ಇವೆ.
ಟಿ20 ವಿಶ್ವಕಪ್ 2026ರಲ್ಲಿ 20 ತಂಡಗಳು 5 ಗುಂಪುಗಳಲ್ಲಿ ಸ್ಪರ್ಧಿಸಲಿವೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಕ್ಕೆ ಹೋಗಲಿವೆ. ನಂತರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ಅಹಮದಾಬಾದ್‌ನಲ್ಲಿ ನಡೆಯಲಿದೆ.
55
ಐಸಿಸಿ ಟಿ20 ವಿಶ್ವಕಪ್ 2026 ತಂಡಗಳು
ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಇಟಲಿ, ನೆದರ್ಲ್ಯಾಂಡ್ಸ್, ನಮೀಬಿಯಾ, ಜಿಂಬಾಬ್ವೆ, ನೇಪಾಳ, ಓಮನ್ ಮತ್ತು ಯುಎಇ.