T20 World Cup 2024: ಆಫ್ಘಾನ್ ಎದುರಿನ ಮಹತ್ವದ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ; 2 ಮೇಜರ್ ಚೇಂಜ್?

First Published | Jun 20, 2024, 1:19 PM IST

ಕಿಂಗ್ಸ್‌ಟನ್ ಓವಲ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೂಪರ್ 8 ಹಂತದಲ್ಲಿ ಮೊದಲ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸಂಭಾವ್ಯ ತಂಡ ಪ್ರಕಟವಾಗಿದ್ದು, ಎರಡು ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

1. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಗ್ರೂಪ್ ಹಂತದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು. ಆದರೆ, ಸೂಪರ್ 8 ಹಂತದಲ್ಲಿ ದೊಡ್ಡ ಮೊತ್ತ ಸಿಡಿಸಿ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ.
 

2. ರೋಹಿತ್ ಶರ್ಮಾ:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಕಳೆದ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಲು ಎದುರು ನೋಡುತ್ತಿದ್ದಾರೆ. ಹಿಟ್‌ಮ್ಯಾನ್ ಸಿಡಿದರೆ, ಆಫ್ಘಾನ್‌ಗೆ ಉಳಿಗಾಲವಿಲ್ಲ.
 

Tap to resize

3. ರಿಷಭ್ ಪಂತ್:

ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಪರ ಜವಾಬ್ದಾರಿಯುತ ಬ್ಯಾಟಿಂಗ್ ತೋರಿದ ಆಟಗಾರನೆಂದರೆ ಅದು ರಿಷಭ್ ಪಂತ್. ಮೂರನೇ ಕ್ರಮಾಂಕದಲ್ಲಿ ಪಂತ್ ಮತ್ತೊಮ್ಮೆ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
 

4. ಸೂರ್ಯಕುಮಾರ್ ಯಾದವ್:

ವಿಶ್ವ ನಂ.1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಯುಎಸ್‌ಎ ಎದುರು ಆಕರ್ಷಕ ಅರ್ಧಶತಕ ಸಿಡಿಸಿ ಫಾರ್ಮ್ ಕಂಡುಕೊಂಡಿದ್ದಾರೆ. ಸೂರ್ಯ ಫಾರ್ಮ್‌ಗೆ ಬಂದರೆ ಎಷ್ಟು ಡೇಂಜರಸ್ ಬ್ಯಾಟರ್ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

5. ಸಂಜು ಸ್ಯಾಮ್ಸನ್:

ಗ್ರೂಪ್‌ ಹಂತದಲ್ಲಿ ಶಿವಂ ದುಬೆಗೆ ಅವಕಾಶ ನೀಡಲಾಗಿತ್ತು. ಯುಎಸ್‌ಎ ಎದುರಿನ ಪಂದ್ಯ ಹೊರತುಪಡಿಸಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ದುಬೆ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

6. ಹಾರ್ದಿಕ್ ಪಾಂಡ್ಯ:

ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಮಾರಕ ದಾಳಿ ನಡೆಸಿ ಆಸರೆಯಾಗುತ್ತಿದ್ದಾರೆ. ಪಾಂಡ್ಯ ಬ್ಯಾಟಿಂಗ್‌ನಲ್ಲಿ ಉತ್ತಮ ಫಿನಿಶರ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

7. ರವೀಂದ್ರ ಜಡೇಜಾ:

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಗ್ರೂಪ್ ಹಂತದಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ. ಹೀಗಿದ್ದೂ ಜಡ್ಡುಗೆ ಮತ್ತೊಮ್ಮೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ.

8. ಅಕ್ಷರ್ ಪಟೇಲ್:

ಒಂದು ಕಡೆ ಜಡೇಜಾ ವೈಪಲ್ಯ ಅನುಭವಿಸಿದರೂ ಮತ್ತೊಂದು ತುದಿಯಲ್ಲಿ ಅಕ್ಷರ್ ಪಟೇಲ್ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

9. ಕುಲ್ದೀಪ್ ಯಾದವ್:

ವೆಸ್ಟ್ ಇಂಡೀಸ್‌ನಲ್ಲಿ ಸ್ಪಿನ್ ಸ್ನೇಹಿ ಪಿಚ್ ಇರುವುದರಿಂದ ತಜ್ಞ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಹೀಗಾದಲ್ಲಿ ಬಹುತೇಕ ಸಿರಾಜ್ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗಿ ಬರಬಹುದು.

10. ಆರ್ಶದೀಪ್ ಸಿಂಗ್:

ಟೀಂ ಇಂಡಿಯಾ ಎಡಗೈ ವೇಗಿ ಆರ್ಶದೀಪ್ ಸಿಂಗ್, ಮಾರಕ ದಾಳಿ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದು, ಆರಂಭದಲ್ಲೇ ವಿಕೆಟ್ ಕಬಳಿಸಿ ತಂಡಕ್ಕೆ ನೆರವಾಗುತ್ತಿದ್ದಾರೆ
 

11. ಜಸ್ಪ್ರೀತ್ ಬುಮ್ರಾ:

ಟೀಂ ಇಂಡಿಯಾದ ವೇಗದ ದಾಳಿಯನ್ನು ಮುನ್ನಡೆಸುತ್ತಿರುವ ಬುಮ್ರಾ, ಮತ್ತೊಮ್ಮೆ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ರೆಡಿಯಾಗಿದ್ದಾರೆ.

Latest Videos

click me!