ಇಂಡೋ-ಪಾಕ್ ವಿಶ್ವಕಪ್ ಫೈಟ್: ಇದೇ ತಂಡ ವಿನ್ ಆಗುತ್ತೆ ಎಂದು 5 ಕೋಟಿ ಬೆಟ್ ಕಟ್ಟಿದ ಈ ಸೆಲಿಬ್ರಿಟಿ ..!

First Published Jun 9, 2024, 4:39 PM IST

ನ್ಯೂಯಾರ್ಕ್‌: ಇಂದು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಕ್ರೇಝ್ ಮುಗಿಲುಮುಟ್ಟಿದ್ದು, ಬೆಟ್ಟಿಂಗ್ ಕೂಡಾ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಈ ಖ್ಯಾತ ಸೆಲಿಬ್ರಿಟಿ, ಈ ತಂಡವೇ ಇಂದು ಮ್ಯಾಚ್ ಗೆಲ್ಲಲಿದೆ ಎಂದು ಸುಮಾರು 5 ಕೋಟಿ ರುಪಾಯಿ ಬೆಟ್ಟಿಂಗ್ ಕಟ್ಟಿದ್ದಾನೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ನ್ಯೂಯಾರ್ಕ್‌ನ ನಾಸೌ ಕೌಂಟಿ ಇಂಟರ್‌ನ್ಯಾಷನಲ್ ಸ್ಟೇಡಿಯಂ ಆತಿಥ್ಯ ವಹಿಸಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಇಂದು ಸಂಜೆ ಭಾರತೀಯ ಕಾಲಮಾನ 8 ಗಂಟೆಯಿಂದ ಆರಂಭವಾಗಲಿದ್ದು, ಬದ್ದ ಎದುರಾಳಿಗಳ ನಡುವಿನ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Latest Videos


ಒಂದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ, ಇದೀಗ ಸತತ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡವು ಯುಎಸ್‌ಎ ಎದುರು ಸೋತು, ಇದೀಗ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ.

ಇಂದಿನ ಪಂದ್ಯದ ಸೋಲು ಗೆಲುವುಗಳ ಫಲಿತಾಂಶ ಪಾಕಿಸ್ತಾನ ತಂಡದ ಸೂಪರ್ 8 ಹಾದಿಯನ್ನು ತೀರ್ಮಾನಿಸಲಿದೆ. ಬಾಬರ್ ಅಜಂ ಪಡೆಯ ಇನ್ನೊಂದು ಸೋಲು ಪಾಕಿಸ್ತಾನದ ಪಯಣವನ್ನು ಗ್ರೂಪ್‌ ಹಂತದಲ್ಲೇ ಕೊನೆಗೊಳ್ಳುವಂತೆ ಮಾಡಲಿದೆ.

ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ಎದುರು ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ ಪಾಕಿಸ್ತಾನ ತಂಡ. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಭಾರತದ ಎದುರು ಅಷ್ಟೇನೂ ಉತ್ತಮವಾಗಿಲ್ಲ.

ಇದುವರೆಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 8 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ 7 ಬಾರಿ ಜಯಿಸಿದರೆ, ಪಾಕಿಸ್ತಾನಕ್ಕೆ ಸಿಕ್ಕಿದ್ದು ಕೇವಲ ಒಂದು ಗೆಲುವು ಮಾತ್ರ.

ಇನ್ನು ಇದೆಲ್ಲದರ ನಡುವೆ ಇಂಡೋ-ಪಾಕ್ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ಭರಾಟೆ ಕೂಡಾ ಜೋರಾಗಿದೆ. ಭಾರತ-ಪಾಕ್‌ ಪಂದ್ಯ ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಕ್ರಿಕೆಟ್‌ ಗೊತ್ತಿಲ್ಲದವರಿಂದಲೂ ಉಭಯ ತಂಡಗಳ ಮೇಲೆ ಕೋಟ್ಯಂತರ ರೂ. ಹಣ ಹೂಡಿಕೆ ಮಾಡುತ್ತಿದ್ದಾರೆ.

Image: Instagram

ಬೆಟ್ಟಿಂಗ್‌ ಆ್ಯಪ್‌ಗಳಲ್ಲಿ ಭಾರತವೇ ಗೆಲುವಿನ ಫೇವರಿಟ್‌ ಎಂದು ಪ್ರದರ್ಶಿಸಲಾಗುತ್ತಿದೆ. ಈ ನಡುವೆ ಅಮೆರಿಕದ ಖ್ಯಾತ ರ್‍ಯಾಪ್‌ ಗಾಯಕ ಡ್ರೇಕ್‌ ಅಬ್ರಹಾರಂ ಪಾಕ್‌ ವಿರುದ್ಧ ಭಾರತ ಗೆಲ್ಲಲಿದೆ ಎಂದು 6.5 ಲಕ್ಷ ಡಾಲರ್‌(5.42 ಕೋಟಿ ರು.) ಬೆಟ್‌ ಹಾಕಿದ್ದಾರೆ. 

ಈ ವಿಷಯವನ್ನು ಸ್ವತಃ ಅವರೇ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ಅವರು ಇತ್ತೀಚೆಗೆ 17ನೇ ಆವೃತ್ತಿಯ ಐಪಿಎಲ್‌ ಫೈನಲ್‌ಗೂ ಮುನ್ನ ಕೆಕೆಆರ್‌ ಗೆಲ್ಲಲಿದೆ ಎಂದು ₹2 ಕೋಟಿ ಬೆಟ್ ಕಟ್ಟಿದ್ದರು.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ? ಹಾಗೂ ಟೀಂ ಇಂಡಿಯಾ ಪರ ಯಾರು ಚೆನ್ನಾಗಿ ಪ್ರದರ್ಶನ ನೀಡಬಹುದು ಎನ್ನುವುದನ್ನು ಕಮೆಂಟ್ ಮೂಲಕ ತಿಳಿಸಿ.

click me!