ICC T20 World Cup: ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕಿದ ಬಹುಮಾನದ ಮೊತ್ತವೆಷ್ಟು..?

First Published | Nov 15, 2021, 2:55 PM IST

ಬೆಂಗಳೂರು: ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ (ICC T20 World Cup) ಆರೋನ್‌ ಫಿಂಚ್ (Aaron Finch) ನೇತೃತ್ವದ ಆಸ್ಟ್ರೇಲಿಯಾ (Australia Cricket Team) ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದುಬೈನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇದರ ಜತೆಗೆ ಭಾರೀ ಮೊತ್ತದ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಇನ್ನೊಂದೆಡೆ ನಮೀಬಿಯಾ, ಸ್ಕಾಟ್ಲೆಂಡ್‌  ತಂಡಗಳು ಪಡೆದಷ್ಟೇ ಹಣವನ್ನು ಟೀಂ ಇಂಡಿಯಾ (Team India) ಪಡೆದುಕೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಅಸ್ಟ್ರೇಲಿಯಾ ಸೇರಿದಂತೆ ಯಾವೆಲ್ಲಾ ತಂಡಗಳು ಎಷ್ಟು ಮೊತ್ತವನ್ನು ಪಡೆದುಕೊಂಡಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಅಕ್ಟೋಬರ್ 17ರಿಂದ ನವೆಂಬರ್‌ 14ರ ವರೆಗೆ ನಡೆದ ಚುಟುಕು ಕ್ರಿಕೆಟ್ ಸಂಗ್ರಾಮದಲ್ಲಿ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಅಗಿ ಹೊರಹೊಮ್ಮಿದೆ.

2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟಾರೆ 5.6 ಮಿಲಿಯನ್ ಡಾಲರ್(ಸುಮಾರು 42 ಕೋಟಿ) ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಈ ಪೈಕಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು 13.1 ಕೋಟಿ ರುಪಾಯಿ ಬಹುಮಾನವನ್ನು ತನ್ನ ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Latest Videos


ಸೂಪರ್ 12 ಹಂತ ಪ್ರವೇಶಿಸಿದ ಎಲ್ಲಾ ತಂಡಗಳಿಗೆ 52 ಲಕ್ಷ ರುಪಾಯಿ ಬಹುಮಾನ ನೀಡಲು ತೀರ್ಮಾನಿಸಲಾಗಿತ್ತು. ಇದರ ಜತೆ ಸೂಪರ್‌ 12 ಹಂತದಲ್ಲಿ ಒಂದು ಗೆಲುವಿಗೆ ತಲಾ 30 ಲಕ್ಷ ನೀಡಲಾಗಿದೆ.

Team India

ಇದೇ ನಿಯಮದಾನುಸಾರ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಸೂಪರ್‌ 12 ಹಂತಕ್ಕೆ ನೇರ ಅರ್ಹತೆ ಪಡೆದಿದ್ದರಿಂದ 52 ಲಕ್ಷ ರುಪಾಯಿ ಹಾಗೂ ಮೂರು ಪಂದ್ಯಗಳಲ್ಲಿ ಜಯಿಸಿದ್ದರಿಂದ ಒಟ್ಟು 30 ಲಕ್ಷ ರುಪಾಯಿ ಸೇರಿ ಒಟ್ಟಾರೆ 1.42 ಕೋಟಿ ರುಪಾಯಿ ಬಹುಮಾನವನ್ನು ಗಳಿಸಿದೆ.

ಇನ್ನು ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಸೂಪರ್ 12 ಹಂತಕ್ಕೆ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲವಾದ ಓಮಾನ್, ಪಪುವಾ ನ್ಯೂಗಿನಿ, ಐರ್ಲೆಂಡ್ ಹಾಗೂ ನೆದರ್ಲೆಂಡ್‌ ತಂಡಗಳು ತಲಾ 30 ಲಕ್ಷ ರುಪಾಯಿ ಪಡೆದವು. ಇನ್ನು ಅರ್ಹತಾ ಸುತ್ತಿನಲ್ಲಿ ಪ್ರತಿ ಗೆಲುವು ದಾಖಲಿಸಿದ ತಂಡಗಳು ತಲಾ 30 ಲಕ್ಷ ರುಪಾಯಿ ಪಡೆದವು. 
 

ಚಾಂಪಿಯನ್‌ ಆಸ್ಟ್ರೇಲಿಯಾಗೆ ಒಲಿದ 13.1 ಕೋಟಿ ರುಪಾಯಿ
ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಏಕೈಕ ಸೋಲು ಕಂಡಿತ್ತು. ಫೈನಲ್‌ನಲ್ಲಿ ಚಾಂಪಿಯನ್ ಆದ ಬಹುಮಾನ ಮೊತ್ತ 11.9 ಕೋಟಿ ರುಪಾಯಿ ಹಾಗೂ ಸೂಪರ್‌ 12 ಹಂತದಲ್ಲಿ 4 ಗೆಲುವು ಸಾಧಿಸಿದ್ದರಿಂದ 1.2 ಕೋಟಿ ಸಹಿತ ಒಟ್ಟು 13.1 ಕೋಟಿ ರುಪಾಯಿ ಬಹುಮಾನ ಜಯಿಸಿತು.
 

ರನ್ನರ್ ಅಪ್‌ ನ್ಯೂಜಿಲೆಂಡ್‌ಗೆ 7.15 ಕೋಟಿ ರುಪಾಯಿ
ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು ಬಲಾಢ್ಯ ತಂಡಗಳನ್ನು ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡುವ ಮೂಲಕ 7.15 ಕೋಟಿ ರುಪಾಯಿಗಳನ್ನು ತನ್ನದಾಗಿಸಿಕೊಂಡಿದೆ.

ಸೆಮೀಸ್‌ನಲ್ಲಿ ಸೋಲುಂಡ ಪಾಕಿಸ್ತಾನಕ್ಕೆ 4.5 ಕೋಟಿ ರುಪಾಯಿ
ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದೆಂದು ಗುರುತಿಸಿಕೊಂಡಿದ್ದ ಪಾಕಿಸ್ತಾನ ತಂಡವು ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ಎದುರು ರೋಚಕ ಸೋಲು ಕಂಡಿತ್ತು. ಸೂಪರ್‌ 12 ಹಂತದಲ್ಲಿ ಐದೂ ಪಂದ್ಯ ಗೆದ್ದಿದ್ದರಿಂದ ಪಾಕಿಸ್ತಾನ ತಂಡವು 4.5 ಕೋಟಿ ರುಪಾಯಿಗಳನ್ನು ತನ್ನದಾಗಿಸಿಕೊಂಡಿತು.

ಇಂಗ್ಲೆಂಡ್‌ಗೆ ಸಿಕ್ಕಿದ್ದು 4.2 ಕೋಟಿ ರುಪಾಯಿ
ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸಿ 4.2 ಕೋಟಿ ರುಪಾಯಿಗಳನ್ನು ತನ್ನದಾಗಿಸಿಕೊಂಡಿತು. ಸೂಪರ್‌ 12 ಹಂತದಲ್ಲಿ ಇಂಗ್ಲೆಂಡ್ ಒಂದು ಸೋಲು ಕಂಡಿತ್ತು.

ಶ್ರೀಲಂಕಾ ತಂಡಕ್ಕೆ 2.02 ಕೋಟಿ ರುಪಾಯಿ
ದಶುನ್ ಶನಕ ನೇತೃತ್ವದ ಶ್ರೀಲಂಕಾ ತಂಡವು ಈ ಬಾರಿ ಅರ್ಹತಾ ಸುತ್ತಿನ ಪಂದ್ಯಗಳನ್ನಾಡಿ ಸೂಪರ್ 12 ಹಂತ ಪ್ರವೇಶಿಸಿತ್ತು. ಹೀಗಾಗಿ ಒಟ್ಟಾರೆ ಪಂದ್ಯಗಳ ಗೆಲುವಿನ ಆಧಾರದಲ್ಲಿ ಲಂಕಾ 2.02 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಂಡಿತು. 
 

ದಕ್ಷಿಣ ಆಫ್ರಿಕಾ ತಂಡಕ್ಕೆ ದಕ್ಕಿದ್ದು 1.72 ಕೋಟಿ ರುಪಾಯಿ
ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಸೂಪರ್‌ 12 ಹಂತದಲ್ಲಿ ಆಡಿದ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಸಹಾ ನೆಟ್‌ ರನ್‌ರೇಟ್‌ ಆಧಾರದಲ್ಲಿ ಕೂದಲೆಳೆ ಅಂತರದಲ್ಲಿ ಸೆಮೀಸ್‌ಗೇರುವ ಅವಕಾಶ ಕೈಚೆಲ್ಲಿ ಕೊಂಡಿತು. ಹೀಗಾಗಿ ಹರಿಣಗಳ ಪಡೆ 1.72 ಕೋಟಿ ರುಪಾಯಿಗಳನ್ನು ತನ್ನದಾಗಿಸಿಕೊಂಡಿತು.

ನಮೀಬಿಯಾ, ಭಾರತ ಹಾಗೂ ಸ್ಕಾಟ್ಲೆಂಡ್‌ಗೆ ತಲಾ 1.42 ಕೋಟಿ ರುಪಾಯಿ
ಟೀಂ ಇಂಡಿಯಾ ಸೂಪರ್ 12 ಹಂತದಲ್ಲಿ 3 ಗೆಲುವು ಸಾಧಿಸಿದರೆ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಒಟ್ಟಾರೆ ಮೂರೂ ತಂಡಗಳು ತಲಾ 1.42 ಕೋಟಿ ರುಪಾಯಿಗಳನ್ನು ಪಡೆದವು. 

ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಕ್ಕೆ ತಲಾ 1.12 ಕೋಟಿ ರುಪಾಯಿ
ಬಾಂಗ್ಲಾದೇಶ ತಂಡವು ಅರ್ಹತಾ ಸುತ್ತಿನ ಪಂದ್ಯದಲ್ಲಿ 2 ಗೆಲುವು ಸಾಧಿಸಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿತ್ತು. ಆದರೆ ಸೂಪರ್ 12 ಹಂತದಲ್ಲಿ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ ಆಫ್ಘಾನಿಸ್ತಾನ ತಂಡವು ಸೂಪರ್ 12 ಹಂತಕ್ಕೆ ನೇರ ಅರ್ಹತೆಗಿಟ್ಟಿಸಿಕೊಂಡಿತ್ತು. ಆದರೆ ಟೂರ್ನಿಯಲ್ಲಿ ಕೇವಲ 2 ಗೆಲುವುಗಳನ್ನಷ್ಟೇ ದಾಖಲಿಸಿತ್ತು. ಹೀಗಾಗಿ ಈ 2 ತಂಡಗಳು ತಲಾ 1.12 ಕೋಟಿ ರುಪಾಯಿ ಬಹುಮಾನಗಳನ್ನು ಪಡೆದವು.
 

West Indies

ವೆಸ್ಟ್ ಇಂಡೀಸ್‌ಗೆ ಸಿಕ್ಕಿದ್ದು ಕೇವಲ 82 ಲಕ್ಷ ರುಪಾಯಿ
2016ರ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಸೂಪರ್ 12 ಹಂತದಲ್ಲಿ ಕೇವಲ ಒಂದೇ ಗೆಲುವು ಸಾಧಿಸುವುದರೊಂದಿಗೆ ಕೇವಲ 82 ಲಕ್ಷ ರುಪಾಯಿಗಳಿಗೆ ತೃಪ್ತಿಪಟ್ಟುಕೊಂಡಿತು.

ওমান না ভারত-পাক?

ಓಮಾನ್, ಐರ್ಲೆಂಡ್ ತಂಡಗಳಿಗೆ 60 ಲಕ್ಷ, ನೆದರ್ಲ್ಯಾಂಡ್‌ ಹಾಗೂ ಪಪುವಾ ನ್ಯೂಗಿನಿ ತಂಡಗಳಿಗೆ ತಲಾ 30 ಲಕ್ಷ ರುಪಾಯಿ: ಅರ್ಹತಾ ಸುತ್ತಿನಲ್ಲಿ ತಲಾ ಒಂದೊಂದು ಪಂದ್ಯ ಜಯಿಸಿದ್ದರಿಂದ ಓಮಾನ್ ಹಾಗೂ ಐರ್ಲೆಂಡ್ ತಂಡಗಳು ತಲಾ 60 ಲಕ್ಷ ಪಡೆದರೆ, ನೆದರ್‌ಲ್ಯಾಂಡ್ ಹಾಗೂ ಪಪುವಾ ನ್ಯೂಗಿನಿ ತಲಾ 30 ಪಡೆದವು.

click me!