ಆಸ್ಪ್ರೇಲಿಯಾ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ಯಾರೂ ಊಹಿಸಿರಲಿಲ್ಲ. ಕಾರಣ ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ಗೂ ಮುನ್ನ ಸತತ 5 ಟಿ20 ಸರಣಿಗಳನ್ನು ಸೋತಿತ್ತು.
ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್‌ಇಂಡೀಸ್ ಹಾಗೂ ಬಾಂಗ್ಲಾದೇಶ ಪ್ರವಾಸಗಳಲ್ಲಿ ಟಿ20 ಸರಣಿಗಳನ್ನು ಕೈಚೆಲ್ಲಿದ್ದ ಆಸೀಸ್, ತವರಿನಲ್ಲಿ ಭಾರತಕ್ಕೆ ಶರಣಾಗಿತ್ತು. ಈ ಮೂಲಕ ವಿಶ್ವ ರಾರಯಂಕಿಂಗ್‌ನಲ್ಲಿ ಕಾಂಗರೂ ಪಡೆ 7ನೇ ಸ್ಥಾನಕ್ಕೆ ಕುಸಿದಿತ್ತು.
ಆದರೆ ವಿಶ್ವಕಪ್‌ಗಳನ್ನು ಗೆದ್ದು ಅಭ್ಯಾಸವಿರುವ ಆಸೀಸ್, ಈ ಟೂರ್ನಿಯಲ್ಲೂ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿತು. ಸೂಪರ್-12 ಹಂತದಲ್ಲಿ ಉತ್ತಮ ನೆಟ್ ರನ್‌ರೇಟ್ ಕಾಯ್ದುಕೊಂಡು ಗುಂಪಿನಲ್ಲಿ 2ನೇ ಸ್ಥಾನ ಪಡೆಯಿತು.
ಸೂಪರ್ 12 ಹಂತದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಎದುರು ಆಘಾತಕಾರಿ ಸೋಲು ಕಂಡಿದ್ದು ಬಿಟ್ಟರೆ ಉಳಿದ್ಯಾವ ತಂಡದೆದುರು ತಲೆಬಾಗಿರಲಿಲ್ಲ. ಸಮೀಸ್‌ನಲ್ಲೂ ಅಮೋಘ ಪ್ರದರ್ಶನ ತೋರಿತು.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಸೆಮೀಸ್‌ನಲ್ಲಿ ಪಾಕಿಸ್ತಾನದ ಅಜೇಯ ಓಟಕ್ಕೆ ತೆರೆ ಎಳೆಯಿತು. ಫೈನಲ್‌ನಲ್ಲಿ ಕಿವೀಸ್ ವಿರುದ್ಧ ಸಾಂಘಿಕ ಆಟವಾಡಿ ಕಾಂಗರೂ ಪಡೆ ಚಾಂಪಿಯನ್ ಆಯಿತು.
ಫೈನಲ್‌ನಂತಹ ಒತ್ತಡದ ಪಂದ್ಯದಲ್ಲಿ ಜೊತೆಯಾಟಗಳು ಬಹಳ ಮುಖ್ಯ. ಆಸ್ಪ್ರೇಲಿಯಾ ಆರಂಭದಲ್ಲೇ ಫಿಂಚ್ ವಿಕೆಟ್ ಕಳೆದುಕೊಂಡಾಗ ತಂಡಕ್ಕೆ ಜೊತೆಯಾಟವೊಂದರ ಅಗತ್ಯವಿತ್ತು. ಆರಂಭಿಕ ವಿಕೆಟ್ ಪತನದ ಕುರಿತಂತೆ ಆಸೀಸ್ ಆತಂಕಕ್ಕೆ ಒಳಗಾಗಲಿಲ್ಲ.
ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ 2ನೇ ವಿಕೆಟ್‌ಗೆ 4.2 ಓವರಲ್ಲಿ 50 ರನ್ ಜೊತೆಯಾಟವಾಡಿ, ಕಿವೀಸ್ ಮೇಲುಗೈ ಸಾಧಿಸದಂತೆ ಎಚ್ಚರ ವಹಿಸಿದರು. ಪವರ್-ಪ್ಲೇನಲ್ಲಿ ಆಸೀಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದ್ದರೆ ಗುರಿ ಬೆನ್ನತ್ತುವುದು ಕಷ್ಟವಾಗುವ ಸಾಧ್ಯತೆ ಇತ್ತು.
डेविड वॉर्नर
ಟೂರ್ನಿಯುದ್ದಕ್ಕೂ ಅಬ್ಬರದ ಪ್ರದರ್ಶನ ತೋರಿದ ಡೇವಿಡ್ ವಾರ್ನರ್, ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇನ್ನು ಆಡಂ ಜಂಪಾ. ಮಿಚೆಲ್ ಮಾರ್ಶ್, ಮ್ಯಾಥ್ಯೂ ವೇಡ್ ಸೇರಿದಂತೆ ಹಲವು ಆಟಗಾರರು ಆಸೀಸ್ ಚಾಂಪಿಯನ್ ಆಗುವಲ್ಲಿ ತನ್ನದೇ ಆದ ಮಹತ್ವದ ಕಾಣಿಕೆ ನೀಡಿದ್ದಾರೆ.