ಪಾಕ್ ಕ್ರಿಕೆಟಿಗರಿಗೆ ಬೋಲ್ಡ್ ಆದ ಭಾರತೀಯ ನಟಿಯರು ಇವರು

Suvarna News   | Asianet News
Published : Oct 09, 2020, 05:19 PM IST

ಟೀಂ ಇಂಡಿಯಾದ ಆಟಗಾರರು ಹಾಗೂ ಬಾಲಿವುಡ್‌ ನಟಿಯರ ನಡುವಿನ ಸಂಬಂಧ ಹಳೆಯದು. ಭಾರತದ ಫೇಮಸ್‌ ನಟಿಯರ ಹೆಸರು ಪಾಕಿಸ್ತಾನಿ ಕ್ರಿಕೆಟಿಗರ ಜೊತೆಯೂ ಕೇಳಿ ಬಂದಿವೆ. ಪಾಕಿಸ್ತಾನದ ಕ್ರಿಕೆಟಿಗರೊಂದಿಗೆ ಪ್ರೀತಿಯಲ್ಲಿ ಸಿಲುಕಿದ ಭಾರತೀಯ ಮಹಿಳಾ ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿ ಸುಶ್ಮಿತಾ ಸೇನ್‌, ಜೀನತ್‌ ಅಮನ್‌, ರೀನಾ ರಾಯ್‌ ಮೊದಲಾದವುರು ಇದ್ದಾರೆ. 

PREV
16
ಪಾಕ್ ಕ್ರಿಕೆಟಿಗರಿಗೆ ಬೋಲ್ಡ್ ಆದ ಭಾರತೀಯ ನಟಿಯರು ಇವರು

ಭಾರತದ ಫೇಮಸ್‌ ನಟಿಯರ ಹೆಸರು ಪಾಕಿಸ್ತಾನಿ ಕ್ರಿಕೆಟಿಗರ ಜೊತೆಯೂ ಕೇಳಿ ಬಂದಿವೆ. ಸುಶ್ಮಿತಾ ಸೇನ್- ರೀನಾ ರಾಯ್ ಪಾಕಿಸ್ತಾನಿ ಕ್ರಿಕೆಟಿಗರಿಗೆ ಮರುಳಾದ ಭಾರತೀಯ ಸುಂದರಿಯರು. 

26

ಸುಶ್ಮಿತಾ ಸೇನ್ ಮತ್ತು ವಾಸಿಮ್ ಅಕ್ರಮ್: 
ಡ್ಯಾನ್ಸ್ ರಿಯಾಲಿಟಿ ಶೋನ ಸೆಟ್‌ಗಳಲ್ಲಿ ಭೇಟಿಯಾದ ಈ ಇಬ್ಬರು ಶೂಟಿಂಗ್ ಸಮಯದಲ್ಲಿ ಪರಸ್ಪರ ಹತ್ತಿರವಾದರು. ಆ ಸಮಯದಲ್ಲಿ ವಾಸಿಮ್ ಹುಮಾಳನ್ನು ಮದುವೆಯಾಗಿದ್ದ ಕಾರಣ ಬ್ಯೂಟಿ ಕ್ವೀನ್‌ಗೆ ಕಮ್ಮಿಟ್‌ ಆಗಲು ಸಾಧ್ಯವಾಗಲಿಲ್ಲ. 2009 ರಲ್ಲಿ ಅವರ ಹೆಂಡತಿಯ ಮರಣದ ನಂತರ, ಸೇನ್ ಮತ್ತು ಅಕ್ರಮ್ ಮತ್ತೆ ಹತ್ತಿರ ಬಂದರು ಹಾಗೂ ಇಬ್ಬರೂ ಲೀವ್‌ -ಇನ್ ರಿಲೆಷನ್‌ಶಿಪ್‌ಗೆ ಪ್ಲಾನ್‌ ಮಾಡಿದ್ದಾರೆ ಎಂದು ವರದಿಗಳು ಬಂದವು.

36

ಜೀನತ್ ಅಮನ್ ಮತ್ತು ಇಮ್ರಾನ್ ಖಾನ್:
70ರ ದಶಕದಲ್ಲಿ, ಇಮ್ರಾನ್ ಖಾನ್ ಮತ್ತು ಜೀನಾತ್ ಅಮನ್ ಕಪಲ್‌ಗಳು ಎಂಬ ವದಂತಿಗಳು ಹಬ್ಬಿದ್ದವು, ಆದರೆ ಯಾವುದೇ ಅಧಿಕೃತ ದೃಢವಾಗಲಿಲ್ಲ. ಇಬ್ಬರೂ ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲೂ ನ್ಯೂಸ್‌ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡರು. ಮದುವೆಯ ರೂಮರ್‌  ಹರಡಲು ಪ್ರಾರಂಭಿಸಿದಾಗ,  ಬೇರೆಯಾದರು. ಇಮ್ರಾನ್ ತಂಡದ ಭಾರತ ಟೂರ್‌ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು.

46

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್: 
ದೀರ್ಘಕಾಲದವರೆಗೆ ಡೇಟಿಂಗ್ ಮಾಡಿದ ನಂತರ, ಸಾನಿಯಾ ಮಿರ್ಜಾ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು. ಕಪಲ್‌ ಈಗ ಗಂಡು ಮಗುವನ್ನು ಹೊಂದಿದ್ದಾರೆ. 

56

ರೀನಾ ರಾಯ್ ಮತ್ತು ಮೊಹ್ಸಿನ್ ಖಾನ್: 
ಮೊಹ್ಸಿನ್ ಖಾನ್ ಜೊತೆ ಇರಲು ರೀನಾ ರಾಯ್ ತಮ್ಮ ವೃತ್ತಿಜೀವನವನ್ನು ತೊರೆದರು. ಆದರೆ, ಲಂಡನ್‌ನಲ್ಲಿ ವಾಸಿಸುವುದು ಮತ್ತು ಅವರ ಲೈಫ್ಸ್ಟೈಲ್‌ಗೆ ಹೊಂದಿಕೊಳ್ಳುವುದು ನಟಿಗೆ ಸಾಧ್ಯವಾಗಲಿಲ್ಲ. ನಂತರ ಇಬ್ಬರು ಬೇರೆಯಾದರು.

66

ಅಮೃತಾ ಅರೋರಾ ಮತ್ತು ಉಸ್ಮಾನ್ ಅಫ್ಜಲ್: 
ಅಮೃತಾ ಅರೋರಾ ಶಕೀಲ್ ಲಡಾಕ್‌ನನ್ನು ಮದುವೆಯಾಗುವ ಬಹಳ ಹಿಂದೆಯೇ ಪಾಕಿಸ್ತಾನಿ ಪ್ಲೇಯರ್‌ ಉಸ್ಮಾನ್ ಅಫ್ಜಲ್ ಜೊತೆ ಡೇಟಿಂಗ್ ಸುದ್ದಿ ಬಂದಿತ್ತು. ಅಮೃತಾ ಮತ್ತು ಉಸ್ಮಾನ್ ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಗುರುತಿಸಿಕೊಂಡರು.  'ಇದು ನನ್ನ ವ್ಯಕ್ತಿ ಎಂದು ನನಗೆ ಖಾತ್ರಿಯಿದೆ. ನಮ್ಮಿಬ್ಬರಿಗೂ ಸರಿಯಾದ ಸಮಯ ಬಂದಾಗಲೆಲ್ಲಾ ನಾವು ಅದನ್ನು ಕಾನೂನುಬದ್ಧಗೊಳಿಸುತ್ತೇವೆ' ಎಂದು ಡಿಎನ್‌ಎಗೆ ನೀಡಿದ ಸಂದರ್ಶನದಲ್ಲಿ ಅಮೃತಾ ಹೇಳಿದ್ದರು.

click me!

Recommended Stories