ವಿಂಡೀಸ್ ಸ್ಪಿನ್ನರ್, ಸುನಿಲ್ ನರೈನ್ ಅವರ ಮಾರಕ ಸ್ಪಿನ್‌ಗಾಗಿ ವರ್ಲ್ಡ್ ಫೇಮಸ್.
undefined
ಮಿಸ್ಟರಿ ಸ್ಪಿನ್ನರ್ ಎಂದು ಕರೆಯಲ್ಪಡುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ.
undefined
ಪ್ರಸ್ತುತ ಸುನಿಲ್ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಯಶಸ್ಸು ಗಳಿಸಿದ್ದಾರೆ. ಅವರು ತಮ್ಮ ಪತ್ನಿ ನಂದಿತಾ ಕುಮಾರ್ (ಅಂಜೆಲಿಯಾ) ಅವರೊಂದಿಗೆ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ
undefined
ಮಗನ ಮೊದಲ ಫೋಟೋವನ್ನುಹಂಚಿಕೊಳ್ಳಲು ನರೈನ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೋರೆ ಹೋಗಿದ್ದಾರೆ.
undefined
'ನಮ್ಮ ಹೃದಯದಲ್ಲಿ ಖಾಲಿಯಿದ್ದ ಜಾಗವನ್ನು ನೀನು ತುಂಬುವೆ; ನಾವು ದೇವರ ಎಲ್ಲಾ ಒಳ್ಳೆಯತನ ಮತ್ತು ಅನುಗ್ರಹವನ್ನು ಒಂದು ಸಣ್ಣ ಮುಖದಲ್ಲಿ ನೋಡಿದ್ದೇವೆ. ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ - ಅಪ್ಪ ಮತ್ತು ಅಮ್ಮ ' ಎಂದು ಪೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
undefined
2013 ರಲ್ಲಿ ಅಂಜೆಲಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನರೈನ್ ಏಳು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.
undefined
ದಂಪತಿಗಳು ತಮ್ಮ ಮಗನ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.
undefined
ನರೈನ್ ಪ್ರಸ್ತುತ ಅಬುಧಾಬಿ ಟಿ 10 ಲೀಗ್‌ನಲ್ಲಿ ಆಡುತ್ತಿದ್ದು ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ, ಅವರು ನಾಲ್ಕು ಪಂದ್ಯಗಳನ್ನು ಆಡಿದ್ದಾರೆ ಮತ್ತು 10.00 ರ ಎಕಾನಮಿಯಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದು ಸದ್ಯಕ್ಕೆ ತಮ್ಮ ತಂಡಕ್ಕೆ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ.
undefined
ಐಪಿಎಲ್ 2021 ಕ್ಕೆ ನರೇನ್ ಅವರನ್ನು ಕೆಕೆಆರ್ ತಂಡ ಉಳಿಸಿಕೊಂಡಿದೆ. ಈ ಫ್ರ್ಯಾಂಚೈಸ್‌ನೊಂದಿಗೆ ಸುನಿಲ್ ಅಪಾರ ಯಶಸ್ಸನ್ನು ಕಂಡಿದ್ದಾರೆ. 119 ಇನ್ನಿಂಗ್‌ಗಳಲ್ಲಿ 127 ವಿಕೆಟ್‌ಗಳನ್ನು ಗಳಿಸಿರುವ ಇವರು 6.78 ರ ಎಕಾನಮಿ ಹೊಂದಿದ್ದಾರೆ. ಸಾಂದರ್ಭಿಕವಾಗಿ ಓಪನಿಂಗ್ ಬ್ಯಾಟ್ಸ್‌ಮ್ಯಾನ್ ಆಗಿ ಆಡುವ ಸುನೀಲ್ 66 ಇನ್ನಿಂಗ್ಸ್‌ಗಳಲ್ಲಿ 16.83 ರ ಸರಾಸರಿಯಲ್ಲಿ 892 ರನ್ ಗಳಿಸಿದ್ದಾರೆ ಮತ್ತು ನಾಲ್ಕು ಅರ್ಧಶತಕಗಳನ್ನು ಒಳಗೊಂಡಂತೆ 164.27 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
undefined
ವಿಂಡೀಸ್ ಪರ ಅವರು 100 ಕ್ಕೂ ಹೆಚ್ಚು ಪಂದ್ಯಗಳಲ್ಲಿ 160 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಅವರು ದೇಶೀಯ ಸರ್ಕ್ಯೂಟ್‌ನಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ಪರ ಆಡುತ್ತಾರೆ ಹಾಗೂ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಿಂದ ಆಡಿದ್ದಾರೆ.
undefined