ಐಪಿಎಲ್ ಹರಾಜು 2021: ಈ ಮೂರು ತಂಡಗಳು ಶಕೀಬ್ ಅಲ್ ಹಸನ್ ಖರೀದಿಸಬಹುದು..!
First Published | Feb 2, 2021, 12:37 PM ISTಬೆಂಗಳೂರು: ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಬರೋಬ್ಬರಿ ಒಂದು ವರ್ಷ ನಿಷೇಧ ಶಿಕ್ಷೆಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಬಕ್ಕಿಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದರು ಎನ್ನುವ ಮಾಹಿತಿ ಮುಚ್ಚಿಟ್ಟ ಕಾರಣಕ್ಕೆ ಶಕೀಬ್ ಅವರನ್ನು ಐಸಿಸಿ ಒಂದು ವರ್ಷಗಳ ಕಾಲ ನಿಷೇಧಕ್ಕೆ ಗುರಿಪಡಿಸಿತ್ತು.
ಇತ್ತೀಚೆಗಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಶಕೀಬ್ 6 ವಿಕೆಟ್ ಹಾಗೂ 113 ರನ್ ಗಳಿಸುವ ಮೂಲಕ ತಮ್ಮ ಆಲ್ರೌಂಡ್ ಪ್ರದರ್ಶನವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ಫೆಬ್ರವರಿ 18ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ 3 ಫ್ರಾಂಚೈಸಿಗಳು ಶಕೀಬ್ ಅಲ್ ಹಸನ್ ತಮ್ಮ ತೆಕ್ಕೆಗೆ ಸೆಳೆಯಲು ಎದುರು ನೋಡುತ್ತಿದೆ