ಇಂಗ್ಲೆಂಡ್‌ನ ಆ ಒಬ್ಬ ಆಟಗಾರ ಡೇಂಜರ್! ಅವನನ್ನು ತಡೆದರೆ ಟೀಂ ಇಂಡಿಯಾಗೆ ಫೈನಲ್ ಟಿಕೆಟ್ ಕನ್ಫರ್ಮ್ ಎಂದ ಸನ್ನಿ!

Published : Mar 04, 2026, 09:06 AM IST

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಮ್ಯಾಚ್ ಮಾರ್ಚ್ 05ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಸುನಿಲ್ ಗವಾಸ್ಕರ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

PREV
16
ಇಂಗ್ಲೆಂಡ್ ಸವಾಲಿಗೆ ಟೀಂ ಇಂಡಿಯಾ ರೆಡಿ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ, ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್ ತಂಡದಲ್ಲಿರುವ ಒಬ್ಬ ಆಟಗಾರ ಭಾರತದ ಗೆಲುವಿನ ಅವಕಾಶಕ್ಕೆ ಅಡ್ಡಿಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಅವನನ್ನು ಕಟ್ಟಿಹಾಕಿದರೆ ಮಾತ್ರ ಭಾರತ ಮುನ್ನಡೆಯಲು ಸಾಧ್ಯ ಎಂದು ಅವರು ಹೇಳಿದ್ದಾರೆ.

26
ವಿಲ್ ಜಾಕ್ಸ್ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದ ಸನ್ನಿ

ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜಾಕ್ಸ್ ಈ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ. ಈ ವಿಶ್ವಕಪ್‌ನಲ್ಲಿ ಈಗಾಗಲೇ ನಾಲ್ಕು ಬಾರಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಗೆದ್ದಿರುವ ಜಾಕ್ಸ್, ಭಾರತಕ್ಕೆ ದೊಡ್ಡ ಸವಾಲಾಗಲಿದ್ದಾರೆ. ಏಳು ಪಂದ್ಯಗಳಲ್ಲಿ 191 ರನ್ ಗಳಿಸಿ, ಏಳು ವಿಕೆಟ್ ಪಡೆದಿರುವ ಜಾಕ್ಸ್, ಇಂಗ್ಲೆಂಡ್ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಾಂಖೆಡೆ ಪಿಚ್‌ನಲ್ಲಿ ಸ್ವಲ್ಪ ಟರ್ನ್ ಸಿಕ್ಕರೂ, ಜಾಕ್ಸ್ ಬೌಲಿಂಗ್‌ನಲ್ಲಿ ಅಪಾಯಕಾರಿಯಾಗಬಲ್ಲರು ಎಂದು ಗವಾಸ್ಕರ್ ಎಚ್ಚರಿಸಿದ್ದಾರೆ.

36
ಏಳನೇ ಕ್ರಮಾಂಕದಲ್ಲಿ ಜಾಕ್ಸ್ ಬ್ಯಾಟಿಂಗ್

"ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವ ವಿಲ್ ಜಾಕ್ಸ್ ಇಂಗ್ಲೆಂಡ್‌ಗೆ ದೊಡ್ಡ ಪ್ಲಸ್ ಪಾಯಿಂಟ್. ಇದು ಭಾರತಕ್ಕೆ ಶಿವಂ ದುಬೆ ನೀಡುವ ಆತ್ಮವಿಶ್ವಾಸದಂತೆ" ಎಂದು ಗವಾಸ್ಕರ್ ಹೇಳಿದ್ದಾರೆ. ಭಾರತ ತಂಡದ ಎಡಗೈ ಬ್ಯಾಟರ್‌ಗಳಿಗಿಂತ ಬಲಗೈ ಬ್ಯಾಟರ್‌ ಜಾಕ್ಸ್ ಹೆಚ್ಚು ಅಪಾಯಕಾರಿ ಎಂದು ಗವಾಸ್ಕರ್ ಎಚ್ಚರಿಸಿದ್ದಾರೆ. ಚಾಂಪ್ಸ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

46
ಶಂಜು ಸ್ಯಾಮ್ಸನ್ ಗುಣಗಾನ ಮಾಡಿದ ಸನ್ನಿ

ವೆಸ್ಟ್ ಇಂಡೀಸ್ ವಿರುದ್ಧ 97 ರನ್ ಗಳಿಸಿ ಅಜೇಯರಾಗಿ ಉಳಿದ ಸಂಜು ಸ್ಯಾಮ್ಸನ್ ಅವರ ಫಾರ್ಮ್ ಭಾರತಕ್ಕೆ ದೊಡ್ಡ ಬಲ ಎಂದು ಗವಾಸ್ಕರ್ ಹೊಗಳಿದ್ದಾರೆ. ಸಂಜು, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಬಲಗೈ ಬ್ಯಾಟರ್‌ಗಳು ವಿಲ್ ಜಾಕ್ಸ್ ಅವರನ್ನು ಹೇಗೆ ಎದುರಿಸುತ್ತಾರೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ ಎಂದು ಅವರು ಹೇಳಿದ್ದಾರೆ. ಸಂಜು ಫಾರ್ಮ್‌ನಲ್ಲಿದ್ದರೆ ಭಾರತ ಫೈನಲ್ ತಲುಪುವುದು ಖಚಿತ ಎಂದಿದ್ದಾರೆ.

56
ಈ ಹಿಂದಿನ ದಾಖಲೆಗಳು ಈ ಮ್ಯಾಚ್ ಮೇಲೆ ಪರಿಣಾಮ ಬೀರಲ್ಲ

1987 ಮತ್ತು 2016ರ ಸೆಮಿಫೈನಲ್‌ಗಳಲ್ಲಿ ವಾಂಖೆಡೆ ಮೈದಾನದಲ್ಲಿ ಭಾರತ ಸೋತ ಇತಿಹಾಸವಿದೆ. ಆದರೆ, ಆ ದಾಖಲೆಗಳು ಈಗಿನ ತಂಡದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಗವಾಸ್ಕರ್ ಸ್ಪಷ್ಟಪಡಿಸಿದ್ದಾರೆ. "ಇದು ಹೊಸ ತಂಡ, ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್‌ಗೆ ತಲುಪುವ ಎಲ್ಲಾ ಸಾಮರ್ಥ್ಯ ಈ ತಂಡಕ್ಕಿದೆ. ಒತ್ತಡವನ್ನು ನಿಭಾಯಿಸಿದವರೇ ಗೆಲ್ಲುತ್ತಾರೆ" ಎಂದು ಅವರು ಹೇಳಿದ್ದಾರೆ.

66
ಹೊರಗಿನ ಕಮೆಂಟ್‌ ನಿರ್ಲಕ್ಷಿಸಲು ಸಲಹೆ

ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, ಭಾರತದ ಸೆಮಿಫೈನಲ್ ಪ್ರವೇಶವನ್ನು ಟೀಕಿಸಿದ್ದಾರೆ. ಭಾರತ ಉತ್ತಮವಾಗಿ ಆಡುತ್ತಿಲ್ಲ, ಫೀಲ್ಡಿಂಗ್ ಕಳಪೆಯಾಗಿದೆ ಎಂದಿದ್ದಾರೆ. ಬುಮ್ರಾ ಬಿಟ್ಟು ಉಳಿದ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ ಎಂದು ಅಮೀರ್ ಹೇಳಿದ್ದಾರೆ. ಆದರೆ ಗವಾಸ್ಕರ್, ಭಾರತ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ಇಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಇಂಗ್ಲೆಂಡ್ ಪಂದ್ಯದತ್ತ ಗಮನಹರಿಸಲು ಸೂಚಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories