ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯಕ್ಕೆ ಹುಳಿ ಹಿಂಡಿದ ಆಯೆಷಾ ಒಮರ್ ಯಾರು ಗೊತ್ತಾ..?

First Published | Nov 11, 2022, 5:33 PM IST

ನವದೆಹಲಿ(ನ.11): ಭಾರತದ ತಾರಾ ಟೆನಿಸ್ ಪಟು, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಅನುಭವಿ ಆಟಗಾರ ಶೋಯೆಬ್ ಮಲಿಕ್ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದೆ. ಸುಂದರವಾಗಿ ಸಾಗುತ್ತಿದ್ದ ತಾರಾ ಕ್ರೀಡಾಜೋಡಿಯ ಮಧ್ಯ ಇದೀಗ ಬಿರುಗಾಳಿಯಂತೆ ಆಯೆಷಾ ಒಮರ್ ಎಂಟ್ರಿಯಾಗಿದ್ದು, ಕೆಲ ಮೂಲಗಳ ಪ್ರಕಾರ ಈಗಾಗಲೇ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಡೈವರ್ಸ್‌ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಸಾನಿಯಾ-ಮಲಿಕ್ ದಾಂಪತ್ಯ ಜೀವನದ ಜತೆ ಥಳುಕು ಹಾಕಿಕೊಂಡಿರುವ ಆಯೆಷಾ ಒಮರ್ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
 

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಅಖ್ತರ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಗೆ ಇಜಾನ್ ಎನ್ನುವ ಸುಂದರ ಗಂಡು ಮಗು ಕೂಡಾ ಇದೆ.
 

ಇದೀಗ ಈ ತಾರಾ ಜೋಡಿ ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಹಾಕಲು ಮುಂದಾಗಿದ್ದಾರೆ. ಪಾಕಿಸ್ತಾನದ ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಶೋಯೆಬ್ ಮಲಿಕ್ ಅವರು ಸಾನಿಯಾ ಮಿರ್ಜಾ ಅವರನ್ನು ವಂಚಿಸಿದ್ದಾರೆ. ಸದ್ಯ ಮಲಿಕ್ ಇನ್ನೋರ್ವ ಯುವತಿಯ ಜತೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.

Tap to resize

ಈ ವಿಷಯ ತಿಳಿದ ನಂತರ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಮೊದಲಿನಂತಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಈ ದಾಂಪತ್ಯ ಜೀವನ ಬಿರುಕು ಬಿಡಲು ಕಾರಣವೇನು ಎನ್ನುವುದನ್ನು ಹೊಡುಕಿ ಹೊರಟಾಗ ಕೇಳಿ ಬಂದ ಹೆಸರೇ ಆಯೆಷಾ ಒಮರ್.
 

ಆಯೆಷಾ ಒಮರ್ ಪಾಕಿಸ್ತಾನ ಮೂಲದ ಮಾಡೆಲ್, ನಟಿ ಹಾಗೂ ಯೂಟ್ಯೂಬರ್ ಆಗಿ ಪ್ರಖ್ಯಾತಿ ಗಳಿಸಿದ್ದಾರೆ. ಆಯೆಷಾ ಪಾಕಿಸ್ತಾನದ ಖ್ಯಾತ ಸಿನಿಮಾಗಳಾದ 'ಕರಾಚಿ ಸೆ ಲಾಹೋರ್'(2015), ಯಲ್ಘಾರ್(2017), ಕಾಫ್ ಕಂಗನಾ(2019) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಕೆಲ ಮೂಲಗಳ ಪ್ರಕಾರ, ಆಯೆಷಾ ಒಮರ್ ಗರಿಷ್ಠ ಸಂಭಾವನೆ ಪಡೆಯುವ ನಟಿಯಾಗಿದ್ದು, ಯೂಟ್ಯೂಬ್‌ನಲ್ಲೂ ಸಾಕಷ್ಟು ಅಭಿಮಾನಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 
 

ಆಯೆಷಾ ಒಮರ್ ತಮ್ಮ ಚೊಚ್ಚಲ ಸಿನೆಮಾವಾದ 'ಕರಾಚಿ ಸೆ ಲಾಹೋರ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಚಿತ್ರವು ರೊಮ್ಯಾಂಟಿಕ್ ಹಾಗೂ ಹಾಸ್ಯಮಯ ಕಥಾ ಹಂದರವನ್ನು ಒಳಗೊಂಡಿದೆ.

ಇನ್ನು ಆಯೆಷಾ ಒಮರ್, ತಾರಾ ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆ ಬೋಲ್ಡ್ ಆಗಿ ಫೋಟೊ ಕ್ಲಿಕ್ಕಿಸಿಕೊಂಡು ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು. ಇದೇ ಈಗ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನ ಬೇರ್ಪಡಲು ಕಾರಣ ಎನ್ನಲಾಗುತ್ತಿದೆ.
 

Latest Videos

click me!