WTC ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ, ಪವಾಡ ನಿರೀಕ್ಷೆಯಲ್ಲಿ ಕಾಂಗರೂ ಪಡೆ

Published : Jun 14, 2025, 11:14 AM IST

WTC ಫೈನಲ್‌ನ 3ನೇ ದಿನ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತು, ಗೆಲ್ಲಲು 69 ರನ್‌ಗಳ ಅಗತ್ಯವಿದೆ. ಏಯ್ಡನ್ ಮಾರ್ಕ್ರಮ್ ಶತಕ ಮತ್ತು ಗಾಯದ ನಡುವೆಯೂ ಬವುಮಾ ಅರ್ಧಶತಕ, ಅವರ ಮೊದಲ WTC ಪ್ರಶಸ್ತಿಯತ್ತ ಕೊಂಡೊಯ್ದಿದೆ. ಇನ್ನು ಆಸೀಸ್ ಪವಾಡದ ನಿರೀಕ್ಷೆಯಲ್ಲಿದೆ.

PREV
16
Day 3 highlights of WTC Final 2025

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ 2025ರ ಮೂರನೇ ದಿನ ಆಸ್ಟ್ರೇಲಿಯಾಗೆ ತಿರುಗೇಟು ನೀಡುವಲ್ಲಿ ಹರಿಣಗಳ ಪಡೆ ಯಶಸ್ವಿಯಾಗಿದೆ

ಆರಂಭಿಕ ಬ್ಯಾಟರ್ ಏಯ್ಡನ್ ಮಾರ್ಕ್‌ರಮ್ (102*) ಮತ್ತು ನಾಯಕ ತೆಂಬಾ ಬವುಮಾ (65*) ದಕ್ಷಿಣ ಆಫ್ರಿಕಾ ತಮ್ಮ ಮೊದಲ WTC ಪ್ರಶಸ್ತಿಯತ್ತ ಮುನ್ನಡೆಸಿದರು.

ಈ ಸಂದರ್ಭದಲ್ಲಿ, ಲಾರ್ಡ್ಸ್ ಪಂದ್ಯದ 3ನೇ ದಿನದ 5 ಪ್ರಮುಖ ಅಂಶಗಳನ್ನು ನೋಡೋಣ.

26
1. ಮಿಚೆಲ್ ಸ್ಟಾರ್ಕ್ ದಿಟ್ಟ ಹೋರಾಟ

ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಪರ ಮೂರನೇ ದಿನದಾಟದಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿ ತಂಡ ಬೃಹತ್ ಮುನ್ನಡೆ ಸಾಧಿಸಲು ನೆರವಾದರು. ಸ್ಟಾರ್ಕ್ 9 ಮತ್ತು 10ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಐಸಿಸಿ ನಾಕೌಟ್ ಪಂದ್ಯಾವಳಿಯಲ್ಲಿ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು.

36
2. ಒತ್ತಡದ ಸಂದರ್ಭದಲ್ಲಿ ಮಾರ್ಕ್‌ರಮ್ ಶತಕ

ಏಯ್ಡನ್ ಮಾರ್ಕ್‌ರಮ್ ಒತ್ತಡದಲ್ಲಿ ಅದ್ಭುತ ಶತಕ ಬಾರಿಸಿ ದಕ್ಷಿಣ ಆಫ್ರಿಕಾಗೆ ಚೊಚ್ಚಲ ಟೆಸ್ಟ್ ವಿಶ್ವಕಪ್ ಗೆಲ್ಲುವ ಕನಸಿಗೆ ಜೀವ ತುಂಬಿದ್ದಾರೆ. ಐಸಿಸಿ ಟೂರ್ನಮೆಂಟ್ ಫೈನಲ್‌ನಲ್ಲಿ ಶತಕ ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾದ ಆಟಗಾರ ಮತ್ತು ಒಟ್ಟಾರೆ 16ನೇ ಆಟಗಾರ ಎನ್ನುವ ಶ್ರೇಯಕ್ಕೆ ಏಯ್ಡನ್ ಮಾರ್ಕ್‌ರಮ್ ಪಾತ್ರರಾದರು.

46
3. ಸ್ನಾಯು ಸೆಳೆತದ ನಡುವೆಯೂ ತೆಂಬಾ ನಾಯಕನ ಆಟ

ತೆಂಬಾ ಬವುಮಾ ಹ್ಯಾಮ್‌ಸ್ಟ್ರಿಂಗ್ ಗಾಯದ ನಡುವೆಯೂ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾದರು. 25ನೇ ಟೆಸ್ಟ್ ಅರ್ಧಶತಕ ಬಾರಿಸಿದರು.

56
4. ಹರಿಣಗಳ ಮೇಲೆ ಒತ್ತಡ ಹೇರಲು ಕಾಂಗರೂ ಬೌಲರ್‌ಗಳು ಫೇಲ್

ಆಸ್ಟ್ರೇಲಿಯಾದ ಬೌಲಿಂಗ್ ದಾಳಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವಿಭಾಗದ ಮೇಲೆ ಒತ್ತಡ ಹೇರಲು ವಿಫಲವಾಯಿತು. ಸ್ಟೀವ್ ಸ್ಮಿತ್ ಬವುಮಾ ಕ್ಯಾಚ್ ಬಿಟ್ಟರು. ಇದು ತಂಡದ ಪಾಲಿಗೆ ದೊಡ್ಡ ಹಿನ್ನಡೆ ಎನಿಸಿಕೊಂಡಿತು.

66
5. ರೋಚಕ ಗೆಲುವಿನತ್ತ ದಾಪುಗಾಲು

ನಾಲ್ಕನೆ ದಿನದಾಟದಲ್ಲಿ 69 ರನ್‌ಗಳ ಅಗತ್ಯವಿದ್ದು, 8 ವಿಕೆಟ್‌ಗಳು ಕೈಯಲ್ಲಿರುವ ದಕ್ಷಿಣ ಆಫ್ರಿಕಾ ತಮ್ಮ ಮೊದಲ ಟೆಸ್ಟ್ ಐಸಿಸಿ ಪ್ರಶಸ್ತಿ ಗೆಲ್ಲುವ ಅವಕಾಶ ಪಡೆದಿದೆ. ಇನ್ನು ನಾಲ್ಕನೇ ದಿನ ಉಳಿದ ಎಂಟು ವಿಕೆಟ್ ಕಬಳಿಸಿ ಪವಾಡ ರೀತಿಯಲ್ಲಿ ಗೆಲುವು ಸಾಧಿಸಲು ಕಾಂಗರೂ ಪಡೆ ಕನಸು ಕಾಣುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories