ಲಖನೌ ಸೂಪರ್ ಜೈಂಟ್ಸ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿ ಕೆಟ್ಟ ಕನಸಿನಂತಾಯಿತು. ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲಿಲ್ಲ. ಹೀಗಾಗಿ ಮುಂದಿನ ಆವೃತ್ತಿಯ ಐಪಿಎಲ್ ಹರಾಜಿಗೂ ಮುನ್ನ ಈ ಐದು ಆಟಗಾರರಿಗೆ ಗೇಟ್‌ಪಾಸ್ ಕೊಡುವ ಸಾಧ್ಯತೆ ದಟ್ಟವಾಗಿದೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ನೀರಸ ಪ್ರದರ್ಶನ ತೋರಿತು. 27 ಕೋಟಿ ರೂಪಾಯಿ ಮೌಲ್ಯದ ನಾಯಕ ರಿಷಭ್ ಪಂತ್ ಕೂಡ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. ಹೀಗಾಗಿ ಹಲವು ಆಟಗಾರರ ಮೇಲೆ ಪ್ರಶ್ನೆಗಳು ಉದ್ಭವಿಸಿವೆ.
27
ಮುಂದಿನ ಆವೃತ್ತಿಗೂ ಮುನ್ನ ಈ ಐವರಿಗೆ ಗೇಟ್‌ಪಾಸ್
ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದಿಂದ ಹೊರಬೀಳಬಹುದಾದ 5 ಆಟಗಾರರ ಬಗ್ಗೆ ತಿಳಿಯೋಣ ಬನ್ನಿ
37
1. ರವಿ ಬಿಷ್ಣೋಯಿ
ಸ್ಪಿನ್ ಬೌಲರ್ ರವಿ ಬಿಷ್ಣೋಯಿ ಈ ಪಟ್ಟಿಯಲ್ಲಿರುವ ಮೊದಲಿಗರು. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 11 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು. 11 ಪಂದ್ಯಗಳಲ್ಲಿ ಕೇವಲ 9 ವಿಕೆಟ್ ಪಡೆದರು. 10ಕ್ಕಿಂತ ಹೆಚ್ಚು ಎಕಾನಮಿಯಲ್ಲಿ ರನ್ ನೀಡಿದರು.
ವೇಗದ ಬೌಲರ್ ಮಯಾಂಕ್ ಯಾದವ್ ಈ ಪಟ್ಟಿಯಲ್ಲಿದ್ದಾರೆ. ಗಾಯದ ಕಾರಣ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ. 4 ಪಂದ್ಯಗಳಲ್ಲಿ 7 ವಿಕೆಟ್ ಪಡೆದರು. ಐಪಿಎಲ್ 2025ರಲ್ಲಿ 11 ಕೋಟಿ ರೂಪಾಯಿಗೆ ಉಳಿಸಿಕೊಳ್ಳಲಾಗಿತ್ತು. ಆದರೆ ಗಾಯವು ಅವರಿಗೆ ಸಮಸ್ಯೆಯಾಗಿದೆ.
57
3. ಡೇವಿಡ್ ಮಿಲ್ಲರ್
ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಈ ಪಟ್ಟಿಯಲ್ಲಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 7.5 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 11 ಪಂದ್ಯಗಳಲ್ಲಿ ಕೇವಲ 153 ರನ್ ಗಳಿಸಿದರು.
67
4. ಆವೇಶ್ ಖಾನ್
ವೇಗದ ಬೌಲರ್ ಆವೇಶ್ ಖಾನ್ ಈ ಪಟ್ಟಿಯಲ್ಲಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ 9.75 ಕೋಟಿ ರೂಪಾಯಿಗೆ LSG ಖರೀದಿಸಿತ್ತು. 13 ಪಂದ್ಯಗಳಲ್ಲಿ ಕೇವಲ 13 ವಿಕೆಟ್ ಪಡೆದರು. 10ಕ್ಕಿಂತ ಹೆಚ್ಚು ಎಕಾನಮಿಯಲ್ಲಿ ರನ್ ನೀಡಿದರು.
77
5. ಮೊಹ್ಸಿನ್ ಖಾನ್
ಐಪಿಎಲ್ 2026ರಲ್ಲಿ LSG ತಂಡದಿಂದ ಹೊರಬೀಳಬಹುದಾದ ಆಟಗಾರರ ಪಟ್ಟಿಯಲ್ಲಿ ಮೊಹ್ಸಿನ್ ಖಾನ್ ಕೂಡ ಇದ್ದಾರೆ. ಮೆಗಾ ಹರಾಜಿನಲ್ಲಿ 4 ಕೋಟಿ ರೂಪಾಯಿಗೆ LSG ಖರೀದಿಸಿತ್ತು. ಗಾಯವು ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಈ ತಂಡದಲ್ಲಿ ಆಡುವುದು ಕಷ್ಟ.