ಸೌರವ್ ಗಂಗೂಲಿ ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿದ ಆಸ್ಪತ್ರೆ, ಹೇಗಿದೆ ದಾದಾ ಆರೋಗ್ಯ?

First Published Jan 27, 2021, 7:01 PM IST

ಎದೆ ನೋವಿನಿಂದ ಆಸ್ಪತ್ರೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೆಡಿಕಲ್ ಬುಲೆಟಿನ್ ಬಿಡುಗಡೆಯಾಗಿದೆ. ಆಪೋಲೋ ಆಸ್ಪತ್ರೆ ವೈದ್ಯರು ದಾದಾ ಆರೋಗ್ಯ ಕುರಿತು ಹೇಳೋದೇನು? ಇಲ್ಲಿದೆ ವಿವರ.
 

ಎರಡನೇ ಬಾರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಇಂದು(ಜ.27) ಬೆಳಗ್ಗೆ ಬಿಸಿಸಿಐ ಅಧ್ಯಕ್ಷ, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
undefined
ಕೋಲ್ಕತಾದ ಅಪೋಲೋ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಗಂಗೂಲಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
undefined
48 ವರ್ಷದ ಸೌರವ್ ಗಂಗೂಲಿ ತಮ್ಮ ಹೃದಯ ಸಂಬಂಧಿ ಆರೋಗ್ಯ ಕುರಿತು ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಬಾರಿ ಆಸ್ಪತ್ರೆ ಬಿಡುಗಡೆಯಾದ ಬಳಿಕ ಇದುವರೆಗೆ ಗಂಗೂಲಿ ಪ್ಯಾರಾಮೀಟರ್‌ನಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಆರೋಗ್ಯ ಸ್ಥಿರವಾಗಿದೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಹೇಳಿದ್ದಾರೆ.
undefined
ಸದ್ಯ ಆಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೌರವ್ ಗಂಗೂಲಿ ಆರೋಗ್ಯದ ಮೇಲೆ ತೀವ್ರ ನಿಘಾ ಇಡಲಾಗಿದೆ. ಗಂಗೂಲಿ ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವು ಸಾಧ್ಯತೆ ಇದೆ.
undefined
ಜನವರಿ 2 ರಂದು ವ್ಯಾಯಾಮ ಮಾಡುತ್ತಿದ್ದ ವೇಳೆ ಸೌರವ್ ಗಂಗೂಲಿಗೆ ಲಘು ಹೃದಯಾಘಾತವಾಗಿತ್ತು. ತಕ್ಷಣವೇ ಆಸ್ಪತ್ರೆ ದಾಖಲಿಸಿ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.
undefined
ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಾದ ಗಂಗೂಲಿಗೆ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿತ್ತು. ಈ ಮೂಲಕ ಹೃದಯದಲ್ಲಿನ ಬ್ಲಾಕೇಜ್ ನಿವಾರಿಸಲಾಗಿತ್ತು.
undefined
5 ದಿನ ವುಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸೌರವ್ ಗಂಗೂಲಿ, ಜನವರಿ 7 ರಿಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಬಳಿಕ ವಿಶ್ರಾಂತಿಗೆ ಜಾರಿದ್ದರು.
undefined
click me!