Sofia Hayat on Rohit Sharma: ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ್ದೆ. ಆದರೆ ಬೆಡ್‌ರೂಂ ಅನುಭವ… ನಟಿ ಸೋಪಿಯಾ ಹಯಾತ್ ಡೇಟಿಂಗ್ ದಿನಗಳ ಶಾಕಿಂಗ್ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಹೇಳಿದ್ದೇನು? ಇಲ್ಲಿದೆ ವಿವರ.
Sofia Hayat on Rohit Sharma: ರೋಹಿತ್ ಜೊತೆ ಡೇಟಿಂಗ್ ಮಾಡಿದ್ದೆ ಆದರೆ..
ಸ್ಟ್ರೈಟ್ ಟಾಕ್ ಕ್ವೈರ್ ವಿಸ್ಡಮ್’ ಪಾಡ್‌ಕಾಸ್ಟ್‌ನಲ್ಲಿ ನಟಿ ಸೋಫಿಯಾ ಹಯಾತ್(Sofia hayat) ತಮ್ಮ ಹಿಂದಿನ ಜೀವನದ ಬಗ್ಗೆ ಮಾತನಾಡುವ ವೇಳೆ ರೋಹಿತ್ ಶರ್ಮಾ(Rohit sharma) ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಅದೀಗ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಯಲ್ಲಿದೆ. ಪಾಡ್‌ಕಾಸ್ಟ್‌ನಲ್ಲಿ ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡುವಾಗಿನ ಪರ್ಸನಲ್ ಲೈಫ್ ಬಗ್ಗೆ ಸೋಫಿಯಾ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿವರ.
24
Sofia Hayat on Rohit Sharma ಸ್ಟ್ರೈಟ್ ಟಾಕ್ ಕ್ವೈರ್ ವಿಸ್ಡಮ್’ ಪಾಡ್‌ಕಾಸ್ಟ್ ಹೇಳಿದ್ದೇನು?
ಪಾಡ್‌ಕಾಸ್ಟ್‌ನಲ್ಲಿ ಸೋಫಿಯಾ ಹಯಾತ್ ಮಾತನಾಡುತ್ತಾ, ನನಗೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ನಮ್ಮ ಮ್ಯಾನೇಜರ್ ಮೂಲಕವೇ ಕ್ರಿಕೆಟ್ ಜಗತ್ತಿನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾಗಿ ನಟಿ ತಿಳಿಸಿದ್ದಾರೆ. ಆ ಸಮಯದಲ್ಲಿ ಪ್ರಚಾರ ಪಡೆಯಲು ತಾವು ಕೆಲವು ಸುಳ್ಳು ಹೇಳಿಕೆಗಳನ್ನೂ ನೀಡಿದ್ದಾಗಿ ಸೋಫಿಯಾ ಹೇಳಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ತಾವು ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ ವಿಚಾರವಾಗಿ ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ್ದಾರೆ.
34
ಸೋಫಿಯಾ ರೋಹಿತ್ ಶರ್ಮಾರ ಡೇಟಿಂಗ್ ಅನುಭವ
ನಟಿ ಸೋಪಿಯಾ ಹಯಾತ್ ರೋಹಿತ್ ಬಗ್ಗೆ ಮಾತನಾಡುತ್ತಾ ವೈಯಕ್ತಿಕ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಅವರೊಂದಿಗಿನ ಬೆಡ್ ರೂಂನಲ್ಲಿನ ಖಾಸಗಿ ಅನುಭವ ಉತ್ತಮವಾಗಿರಲಿಲ್ಲ ಎಂದು ಹೇಳಿರುವುದು ಇಂಟರ್‌ನೆಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವುದಲ್ಲದೆ ಹಳೆಯ ಸಂಬಂಧದಿಂದಾಗಿ ಪರ್ಸನಲ್ ಲೈಫ್ ಬಹಿರಂಗವಾಗಿ ರೋಹಿತ್ ಶರ್ಮಾ ಮುಜುಗರ ಅನುಭವಿಸುವಂತಾಗಿದೆ. ಆದರೆ ಸೋಫಿಯಾ ಅವರ ಹೇಳಿಕೆ ವೈಯಕ್ತಿಕವಾಗಿದ್ದು, ಅದೆಲ್ಲವೂ ನಿಜ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.
2012ರಲ್ಲಿ ಆರಂಭವಾಗಿತ್ತು ಸೋಫಿಯಾ-ರೋಹಿತ್ ಡೇಟಿಂಗ್
ರೋಹಿತ್ ಶರ್ಮಾ ಜೊತೆಗಿನ ಸಂಬಂಧದ ಬಗ್ಗೆ ಸೋಫಿಯಾ ಮುಕ್ತವಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ಮಾತನಾಡಿದ್ದರು. ಆದರೆ ಅವರ ಹಿಂದಿನ ಹೇಳಿಕೆಯ ಪ್ರಕಾರ, 2012ರಲ್ಲಿ ಇಬ್ಬರೂ ಡೇಟಿಂಗ್ ಆರಂಭಿಸಿದ್ದರು. ಈ ಸಂಬಂಧ ಸುಮಾರು ಒಂದು ವರ್ಷ ಮುಂದುವರಿದಿತ್ತು ಎನ್ನಲಾಗಿದೆ. ನಂತರ ಕೆಲವು ವಿಚಾರಗಳಿಂದ ಇಬ್ಬರ ನಡುವೆ ಸಂಬಂಧದಲ್ಲಿ ಬಿರುಕು ಮೂಡಿತು ಎಂದು ಸೋಫಿಯಾ ಹೇಳಿದ್ದರು. ಒಮ್ಮೆ ಮಾಧ್ಯಮಗಳ ಮುಂದೆ ರೋಹಿತ್ ಶರ್ಮಾ ಸೋಫಿಯಾರನ್ನ ಕೇವಲ ಅಭಿಮಾನಿ ಎಂದು ಪರಿಚಯಿಸಿದ್ದರಿದ್ದರು. ಇದರಿಂದ ಬೇಸರವಾಗಿತ್ತು ಎಂದು ಸೋಫಿಯಾ ಹೇಳಿದ್ದಾರೆ. ಇದೇ ಇಬ್ಬರ ನಡುವಿನ ಸಂಬಂಧ ದೂರವಾಗುವಂತೆ ಮಾಡಿತಾ? ಅಥವಾ ಬೆಡ್‌ರೂಂ ನಲ್ಲಿನ ಅನುಭವವೇ ದೂರವಾಗುವಂತೆ ಮಾಡಿತಾ? ಸ್ಪಷ್ಟವಾಗಿ ಹೇಳಿಲ್ಲ.
ಆ ಘಟನೆ ಬಳಿಕ ರೋಹಿತ್ ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಬ್ಲಾಕ್ ಮಾಡಿದ್ದಾಗಿ, ತಮ್ಮ ಸಂಬಂಧ ಅಲ್ಲಿಗೆ ಅಂತ್ಯಗೊಂಡಿತು ಎಂಬುದಾಗಿ ಸೋಪಿಯಾ ಹೇಳಿಕೊಂಡಿದ್ದಾರೆ.
ಇನ್ನು ರೋಹಿತ್ ಶರ್ಮಾ 2015ರಲ್ಲಿ ತಮ್ಮ ಮ್ಯಾನೇಜರ್ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾದರು. 2018ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತು. ಅವರ ಮಗಳ ಹೆಸರು ಸಮೈರಾ. ಸ್ಟೇಡಿಯಂಗಳಲ್ಲಿ ಮಗಳೊಂದಿಗೆ ಓಡಾಡುವ ವಿಡಿಯೋ ನೋಡಿಯೇ ಇರುತ್ತೀರಿ. ಪತ್ನಿ ಮಗಳೊಂದಿಗೆ ರೋಹಿತ್ ಶರ್ಮಾ ಈಗ ತುಂಬಾ ಖುಷಿಯಾಗಿ ಜೀವನ ಕಳೆಯುತ್ತಿದ್ದಾರೆ. ಈ ನಡುವೆ ಸೋಫಿಯಾ ಹೇಳಿಕೆ ಅಲ್ಲೋಲ ಕಲ್ಲೋಲ ಎಬ್ಬಿಸಿದೆ.
ಸದ್ಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಟಿವಿ ಕಾರ್ಯಕ್ರಮವೊಂದರ ಮೂಲಕ ಹೊಸ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.