ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!

Published : Dec 08, 2025, 01:17 PM IST

Smriti Mandhana: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮುರಿದು ಬಿದ್ದಿದ್ದು ಅಧಿಕೃತವಾಗಿದೆ. ಇದರ ಬೆನ್ನಲ್ಲಿಯೇ ಟೀಮ್‌ ಇಂಡಿಯಾದ 10 ಆಟಗಾರ್ತಿಯರು ಪಲಾಶ್‌ ಮಚ್ಚಲ್‌ ವಿರುದ್ಧ ಮಹಾ ನಿರ್ಧಾರ ತೆಗೆದುಕೊಂಡಿದ್ದಾರೆ. 

PREV
15

ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ರದ್ದಾಗಿದೆ. ಸ್ಮೃತಿ ಮತ್ತು ಪಲಾಶ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡು ವಿವಾಹ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ನಂತರ, ಮಹಿಳಾ ಕ್ರಿಕೆಟ್ ತಂಡದ ಕ್ರಿಕೆಟಿಗರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

25

ವಿವಾಹ ಮುಂದೂಡಿಕೆ ಆದ ಬಳಿಕ ಕಳೆದ ಕೆಲವು ವಾರಗಳಿಂದ ಸ್ಮೃತಿ ಮತ್ತು ಪಲಾಶ್ ಅವರ ವಿವಾಹ ನಡೆಯುವ ಬಗ್ಗೆ ವದಂತಿಗಳಿದ್ದವು. ಆದ್ದರಿಂದ ಈ ವಿಚಾರದ ಬಗ್ಗೆ ಸ್ಮೃತಿ ಹಾಗೂ ಪಲಾಶ್‌ ಮಾತನಾಡುವುದು ಬಹಳ ಮುಖ್ಯವಾಗಿತ್ತು. ಭಾನುವಾರ ಇಬ್ಬರೂ ಕೂಡ ಪೋಸ್ಟ್‌ ಹಂಚಿಕೊಂಡು ವಿವಾಹ ರದ್ದಾಗಿರುವುದಾಗಿ ತಿಳಿಸಿದ್ದು, ತಮ್ಮ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

35

ಮದುವೆ ರದ್ದಾದ ಬಗ್ಗೆ ಅಧಿಕೃತ ಘೋಷಣೆ ಈಗ ಬಂದಿದ್ದರೂ, ವದಂತಿಗಳು ಪ್ರಾರಂಭವಾದಾಗಿನಿಂದ ಭಾರತೀಯ ಮಹಿಳಾ ಕ್ರಿಕೆಟಿಗರು ಪಲಾಶ್ ಮುಚ್ಚಲ್ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದರು. ಅವರು ಸೋಶಿಯಲ್‌ ಮೀಡಿಯಾದಲ್ಲಿ ಪಲಾಶ್ ಅವರನ್ನು ಅನ್‌ಫಾಲೋ ಮಾಡಲು ಪ್ರಾರಂಭಿಸಿದ್ದರು.

45

ವರದಿಯ ಪ್ರಕಾರ, ಭಾರತೀಯ ಮಹಿಳಾ ತಂಡದ 10 ಆಟಗಾರ್ತಿಯರು ಪಲಾಶ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಅವರೆಲ್ಲರೂ ಸ್ಮೃತಿ ಮಂಧಾನಾಗೆ ತುಂಬಾ ಆಪ್ತರು ಎಂದು ಪರಿಗಣಿಸಲಾಗಿದೆ. ಈ ಆಟಗಾರ್ತಿಯರಲ್ಲಿ ಸ್ಮೃತಿ ಮಂಧಾನ (ಸ್ವತಃ), ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಶಿಫಾಲಿ ವರ್ಮಾ (ಶಿವಾಲಿ ಶಿಂಧೆ), ಯಸ್ತಿಕಾ ಭಾಟಿಯಾ, ರಿಚಾ ಘೋಷ್, ದೀಪ್ತಿ ಶರ್ಮಾ ಸೇರಿದ್ದಾರೆ.

55

"ಟೀಮ್ ಸ್ಮೃತಿ" ಸೋಶಿಯಲ್‌ ಮೀಡಿಯಾದಲ್ಲಿ ಪಲಾಶ್ ಮುಚ್ಚಲ್ ಅವರನ್ನು ಅನ್‌ಫಾಲೋ ಮಾಡುವ ಮೂಲಕ ಏಕತೆಯನ್ನು ಪ್ರದರ್ಶಿಸಿದೆ ಮತ್ತು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಪಲಾಶ್ ಇನ್ನೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಈಗ ಸ್ಮೃತಿ ತನ್ನ ಜೀವನದಲ್ಲಿ ಎಲ್ಲವನ್ನೂ ಮರೆತು ಮುಂದೆ ಸಾಗಲು ನಿರ್ಧಾರ ಮಾಡಿದ್ದಾರೆ.

Read more Photos on
click me!

Recommended Stories