ಸ್ಮೃತಿ ಮಂಧನಾ ಈಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ರನ್ ಮೆಷಿನ್. ದೇಶ-ವಿದೇಶಗಳಲ್ಲಿ ಅವರ ಬ್ಯಾಟ್ ಅಬ್ಬರಿಸುತ್ತಿದೆ. ಮಂಧನಾ ODI ಕ್ರಿಕೆಟ್‌ನಲ್ಲಿ ನಂ.1 ಬ್ಯಾಟರ್ ಆಗೋಕೆ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.
ಸ್ಮೃತಿ ಮಂಧನಾ ಬ್ಯಾಟ್ ಮೈದಾನದಲ್ಲಿ ಸದ್ದು ಮಾಡ್ತಿದೆ. ಮಂಧನಾ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ರನ್ ಮಳೆ ಸುರಿಸುತ್ತಿದ್ದಾರೆ.
27
ರನ್ ಮೆಷಿನ್ ಸ್ಮೃತಿ
ಸ್ಮೃತಿ ಮಂಧನಾ ಭಾರತೀಯ ತಂಡದ ರನ್ ಮೆಷಿನ್ ಆಗಿದ್ದಾರೆ. ಯಾವುದೇ ತಂಡದ ವಿರುದ್ಧ ಅನಾಯಾಸವಾಗಿ ರನ್ ಕಲೆಹಾಕ್ತಾರೆ. ಟರ್ನಿಂಗ್ ಪಿಚ್ ಆಗಿರಲಿ, ಫ್ಲಾಟ್ ಪಿಚ್ ಆಗಿರಲಿ, ಅವರ ಬ್ಯಾಟಿಂಗ್ ಮಿಂಚುತ್ತದೆ.
37
ಶ್ರೀಲಂಕಾ ವಿರುದ್ಧ ಶತಕ
ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ 116 ರನ್ ಗಳಿಸಿದ್ರು. 101 ಎಸೆತಗಳಲ್ಲಿ ಅವರು 15 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ್ರು.
ಇದು ಸ್ಮೃತಿ ಮಂಧನಾ ಅವರ 11ನೇ ಅಂತಾರಾಷ್ಟ್ರೀಯ ಏಕದಿನ ಶತಕ. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಎಡಗೈ ಬ್ಯಾಟರ್ ಪಾತ್ರರಾಗಿದ್ದಾರೆ.
57
ನಂ.1 ಬ್ಯಾಟರ್ ಆಗ್ತಾರಾ?
ಸ್ಮೃತಿ ಮಂಧನಾ ನಂ.1 ODI ಬ್ಯಾಟರ್ ಆಗೋಕೆ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ. ICC ODI ರ‍್ಯಾಂಕಿಂಗ್‌ನಲ್ಲಿ ಸದ್ಯ ಅವರು 2ನೇ ಸ್ಥಾನದಲ್ಲಿದ್ದಾರೆ.
67
ಯಾರಿದ್ದಾರೆ ನಂ.1ರಲ್ಲಿ?
ದಕ್ಷಿಣ ಆಫ್ರಿಕಾದ ಲಾರಾ ವೋಲ್ವರ್ಟ್ 738 ರೇಟಿಂಗ್‌ನೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ಸ್ಮೃತಿ ಮಂಧಾನ 727 ರೇಟಿಂಗ್ ಹೊಂದಿದ್ದಾರೆ.
77
ನಂ.1 ಸ್ಥಾನ ಗಳಿಸುತ್ತಾರಾ?
ಮುಂದಿನ ಪಂದ್ಯದಲ್ಲಿ ಅವರು ಶತಕ ಗಳಿಸಿದರೆ, ಐಸಿಸಿ ಮಹಿಳಾ ಏಕದಿನ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮೃತಿ ಮಂಧನಾ ನಂ.1 ಸ್ಥಾನ ಗಳಿಸಬಹುದು.