ಯಾವಾಗಲೂ ಸೀರಿಯಸ್ ಆಗಿರುವ ನರೈನ್ ನಗಿಸಿದ ಕೊಹ್ಲಿ..! ನರೈನ್ ಎರಡನೇ ಪತ್ನಿ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ

First Published | Apr 22, 2024, 2:36 PM IST

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಮಾಜಿ ನಾಯಕ ವಿರಾಟ್ ಕೊಹ್ಲಿ, ಕೊನೆಗೂ ಸುನಿಲ್ ನರೈನ್ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಇನ್ನು ನರೈನ್ ಎರಡನೇ ಪತ್ನಿಯ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
 

ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಸುನಿಲ್ ನರೈನ್, 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ಪರ ಮಿಂಚುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ ನರೈನ್ ಬ್ಯಾಟಿಂಗ್‌ನಲ್ಲಿ ಮಂಕಾದರೂ, ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ಪಂದ್ಯದ ದಿಕ್ಕನ್ನೇ ಬದಲಿಸುವಲ್ಲಿ ಯಶಸ್ವಿಯಾದರು.

Tap to resize

ಇನ್ನು ಯಾವಾಗಲೂ ಗಂಭೀರವಾಗಿಯೇ ಇರುವ ಸುನಿಲ್ ನರೈನ್ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ನರೈನ್ ಬ್ಯಾಟಿಂಗ್ ಮಾಡಲು ಇಳಿದಾಗ ಕೊಹ್ಲಿ, ತಮಾಷೆ ಮಾಡಿ ನರೈನ್ ನಗುವಂತೆ ಮಾಡುವಲ್ಲಿ ಸಫಲರಾದರು.

ಇನ್ನು ನರೈನ್ ಆರ್‌ಸಿಬಿ ಎದುರಿನ ಪಂದ್ಯಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ಎದುರು ಕೇವಲ 56 ಎಸೆತಗಳಲ್ಲಿ ಆಕರ್ಷಕ 109 ರನ್ ಚಚ್ಚಿದ್ದರು. ಇದು ಐಪಿಎಲ್‌ನಲ್ಲಿ ನರೈನ್ ಬಾರಿಸಿದ ಮೊದಲ ಶತಕ ಎನಿಸಿಕೊಂಡಿತು.

ಇನ್ನು 35 ವರ್ಷದ ಸುನಿಲ್ ನರೈನ್ ಅವರ ಪರ್ಸನಲ್ ಲೈಪ್ ಕೂಡಾ ಆಗಾಗ ಸುದ್ದಿಯಲ್ಲಿ ಇರುತ್ತಲೇ ಬಂದಿದೆ. ಸುನಿಲ್ ನರೈನ್ ಅವರ ಪತ್ನಿಯ ಹೆಸರು ಏಂಜಲಿಯಾ ಸುಚಿತ ಆಗಿದೆ. ಆಕೆ ವೃತ್ತಿಪರ ಫ್ಯಾಷನ್ ಡಿಸೈನರ್ ಆಗಿದ್ದಾರೆ.

ಸುನಿಲ್ ನರೈನ್ ಹಾಗೂ ಏಂಜಲಿಯಾ ಸುಚಿತ 2020ರಿಂದಲೂ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಸುನಿಲ್ ನರೈನ್ ಕ್ರಿಕೆಟ್ ಆಡಲು ಮೈದಾನಕ್ಕಿಳಿದಾಗಲೆಲ್ಲಾ ಏಂಜಲಿಯಾ ಸುಚಿತ ಸ್ಟೇಡಿಯಂಗೆ ಬಂದು ಪತಿಗೆ ಚಿಯರ್ ಅಪ್ ಮಾಡುತ್ತಾ ಬಂದಿದ್ದಾರೆ.

ಸುನಿಲ್ ನರೈನ್ ಹಾಗೂ ಏಂಜಲಿಯಾ ಸುಚಿತ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಕೆಲವು ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜತೆ ಟಚ್ ನಲ್ಲಿದ್ದಾರೆ.

ಸುನಿಲ್ ನರೈನ್ ಹಾಗೂ ಏಂಜಲಿಯಾ ಸುಚಿತ ಒಂದು ಮುದ್ದಾದ ಗಂಡು ಮಗುವಿನ ಪೋಷಕರಾಗಿದ್ದಾರೆ. 2021ರ ಫೆಬ್ರವರಿಯಲ್ಲಿ ಏಂಜಲಿಯಾ ಸುಚಿತ, ಸಿಲಾಸ್ ನರೈನ್ ಎನ್ನುವ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಏಂಜಲಿಯಾ ಸುಚಿತ ಅವರು ಸುನಿಲ್ ನರೈನ್‌ಗೆ ಎರಡನೇ ಪತ್ನಿಯಾಗಿದ್ದಾರೆ. ಇದಕ್ಕೂ ಮೊದಲು ಮಾಂತ್ರಿಕ ಸ್ಪಿನ್ನರ್ ನರೈನ್ 2013ರಲ್ಲಿ ನಂದಿತಾ ಕುಮಾರ್ ಎನ್ನುವವರನ್ನು ಮದುವೆಯಾಗಿದ್ದರು. ಇದಾಗಿ ಕೆಲ ವರ್ಷಗಳ ಬಳಿಕ ಡೈವರ್ಸ್ ಪಡೆದುಕೊಂಡಿದ್ದರು.

ಸುನಿಲ್ ನರೈನ್ ಯಾವಾಗಲೂ ಗಂಭೀರವಾಗಿಯೇ ಇರುತ್ತಾರೆ ಎಂದು ಹೇಳುತ್ತಲೇ ಬರುತ್ತಿದ್ದರು. ಬಹುತೇಕ ಫೋಟೋಗಳಲ್ಲಿ ನರೈನ್ ನಗುಮುಖ ನೋಡಿದವರೇ ಇಲ್ಲವೇನು ಎನ್ನುವಂತೆ ಇರುತ್ತಾರೆ. ಆದರೆ ಕೊಹ್ಲಿ, ನರೈನ್ ಮುಖದಲ್ಲಿ ನಗು ತರಿಸಿದ್ದಾರೆ.

Latest Videos

click me!