ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿ: ಗರಿಷ್ಠ ರನ್ ಬಾರಿಸಿದವರಲ್ಲಿ ಭಾರತೀಯರದ್ದೇ ಸಿಂಹಪಾಲು!

Published : Aug 03, 2025, 02:58 PM IST

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟಾಪ್ 4 ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತೀಯ ಆಟಗಾರರೇ ಮೇಲುಗೈ ಸಾಧಿಸಿದ್ದಾರೆ. ಒಂದು ಟೆಸ್ಟ್ ಸರಣಿಯಲ್ಲಿ ಮೂವರು ಭಾರತೀಯ ಆಟಗಾರರು 500ಕ್ಕೂ ಹೆಚ್ಚು ರನ್ ಗಳಿಸಿರುವುದು ಇದೇ ಮೊದಲು.

PREV
18

ಒಂದು ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಎಂಬ ಸುನಿಲ್ ಗವಾಸ್ಕರ್ (774) ದಾಖಲೆ ಮುರಿಯಲು ಸಾಧ್ಯವಾಗದಿದ್ದರೂ, 754 ರನ್‌ಗಳೊಂದಿಗೆ ಶುಭ್‌ಮನ್ ಗಿಲ್ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ರನ್‌ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಗಿಲ್ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ.

28

ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿ ಭಾರತದ ಕೆ ಎಲ್ ರಾಹುಲ್ ಇದ್ದಾರೆ. ಇಂಗ್ಲೆಂಡ್‌ ಎದುರು ಆರಂಭಿಕ ಆಟಗಾರನಾಗಿ ಒಂದು ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಎಂಬ ಗವಾಸ್ಕರ್ (542) ದಾಖಲೆ ಕೈತಪ್ಪಿದರೂ, 532 ರನ್‌ಗಳೊಂದಿಗೆ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ.

38

ಮಧ್ಯಮ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬಾಗಿ ನಿಂತ ಆಲ್ರೌಂಡರ್ ರವೀಂದ್ರ ಜಡೇಜಾ ಸರಣಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಐದು ಟೆಸ್ಟ್‌ಗಳಲ್ಲಿ ಐದು ಅರ್ಧಶತಕ ಮತ್ತು ಒಂದು ಶತಕ ಸೇರಿದಂತೆ 516 ರನ್‌ಗಳನ್ನು ಜಡೇಜಾ ಗಳಿಸಿದ್ದಾರೆ.

48

ಕೊನೆಯ ಟೆಸ್ಟ್‌ನಲ್ಲಿ ಗಾಯದಿಂದಾಗಿ ಆಡದಿದ್ದರೂ, ರನ್ ಗಳಿಕೆಯಲ್ಲಿ ರಿಷಭ್ ಪಂತ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 479 ರನ್‌ಗಳನ್ನು ರಿಷಭ್ ಪಂತ್ ಗಳಿಸಿದ್ದಾರೆ.

58

ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ನಂತರ ಯಶಸ್ವಿ ಜೈಸ್ವಾಲ್, ಕೊನೆಯ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸುವ ಮೂಲಕ ಐದು ಪಂದ್ಯಗಳಲ್ಲಿ 411 ರನ್‌ಗಳೊಂದಿಗೆ ರನ್ ಗಳಿಕೆಯಲ್ಲಿ ಎಂಟನೇ ಸ್ಥಾನಕ್ಕೆ ಏರಿದರು.

68

ನಾಲ್ಕು ಟೆಸ್ಟ್‌ಗಳಲ್ಲಿ ಪರಿಣಿತ ಬ್ಯಾಟ್ಸ್‌ಮನ್ ಆಗಿ ಆಡಿದ ಕರುಣ್ ನಾಯರ್ ಅವರನ್ನು ಆಲ್‌ರೌಂಡರ್ ಆಗಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್ ರನ್ ಗಳಿಕೆಯಲ್ಲಿ ಹಿಂದಿಕ್ಕಿದರು. ನಾಲ್ಕು ಪಂದ್ಯಗಳಿಂದ ಕರುಣ್ ಒಂದು ಅರ್ಧಶತಕ ಸೇರಿದಂತೆ 205 ರನ್ ಗಳಿಸಿದರೆ, ಸುಂದರ್ ನಾಲ್ಕು ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 284 ರನ್ ಗಳಿಸಿ ರನ್ ಗಳಿಕೆಯಲ್ಲಿ ಹನ್ನೆರಡನೇ ಸ್ಥಾನಕ್ಕೆ ಏರಿದರು.

78

ಐಪಿಎಲ್ ರನ್ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದ ಸಾಯಿ ಸುದರ್ಶನ್ ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸೇರಿದಂತೆ ಕೇವಲ 140 ರನ್‌ಗಳನ್ನು ಮಾತ್ರ ಸಾಯಿ ಸುದರ್ಶನ್ ಗಳಿಸಿದರು.

88

ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಅವಕಾಶ ಸಿಗದ ಜುರೆಲ್‌ಗೆ ಕೊನೆಯ ಟೆಸ್ಟ್‌ನಲ್ಲಿ ರಿಷಭ್ ಪಂತ್ ಬದಲಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಕ್ಕಿದರೂ, ಎರಡೂ ಇನ್ನಿಂಗ್ಸ್‌ಗಳಿಂದ ಕೇವಲ 53 ರನ್‌ಗಳನ್ನು ಮಾತ್ರ ಗಳಿಸಿದರು.

Read more Photos on
click me!

Recommended Stories