Shubman Gill: ನ್ಯೂಜಿಲೆಂಡ್ ಎದುರು ಗಿಲ್ ಒಂದು ಶತಕ, ಹಲವು ದಾಖಲೆಗಳು ನುಚ್ಚುನೂರು..!

Published : Feb 02, 2023, 11:23 AM IST

ಅಹಮದಾಬಾದ್(ಫೆ.02): ಶುಭ್‌ಮನ್‌ ಗಿಲ್‌ ಅಬ್ಬರದ ಶತಕ, ವೇಗಿಗಳ ಮಾರಕ ದಾಳಿ ನೆರವಿನಿಂದ ನ್ಯೂಜಿಲೆಂಡ್‌ 3ನೇ ಟಿ20 ಪಂದ್ಯದಲ್ಲಿ ಭಾರತ ಬರೋಬ್ಬರಿ 168 ನ್‌ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ತವರಿನಲ್ಲಿ ಸತತ 13ನೇ ಟಿ20 ಸರಣಿಯಲ್ಲೂ ಭಾರತ ಅಜೇಯವಾಗಿ ಉಳಿಯಿತು. ಶುಭ್‌ಮನ್‌ ಗಿಲ್ ಬಾರಿಸಿದ ಒಂದು ಶತಕ, ಹಲವು ದಾಖಲೆ ನುಚ್ಚುನೂರಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
15
Shubman Gill: ನ್ಯೂಜಿಲೆಂಡ್ ಎದುರು ಗಿಲ್ ಒಂದು ಶತಕ, ಹಲವು ದಾಖಲೆಗಳು ನುಚ್ಚುನೂರು..!

* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ವೈಯುಕ್ತಿಕ ಸ್ಕೋರ್:

ಅಜೇಯ 126 ರನ್‌ ಗಳಿಸಿದ ಗಿಲ್‌ ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಪರ ವೈಯಕ್ತಿಕ ಗರಿಷ್ಠ ಮೊತ್ತದ ಸಾಧನೆ ಮಾಡಿದರು. ಅವರು ಕೊಹ್ಲಿ(122)ಯನ್ನು ಹಿಂದಿಕ್ಕಿದರು.
 

25

* ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ 5ನೇ ಬ್ಯಾಟರ್:

ಶುಭ್‌ಮನ್ ಗಿಲ್‌ ಎಲ್ಲಾ 3 ಮಾದರಿಯಲ್ಲಿ ಶತಕ ಬಾರಿಸಿದ ಭಾರತದ 5ನೇ ಬ್ಯಾಟರ್‌. ಈ ಮೊದಲು ಸುರೇಶ್‌ ರೈನಾ, ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್ ಕೊಹ್ಲಿ ಕೂಡಾ ಈ ಸಾಧನೆ ಮಾಡಿದ್ದಾರೆ.
 

35

* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಚಚ್ಚಿದ ಅತಿ ಕಿರಿಯ ಭಾರತೀಯ ಗಿಲ್‌:

ಇಲ್ಲಿಯವರೆಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಭಾರತೀಯ ಬ್ಯಾಟರ್ ಎನ್ನುವ ದಾಖಲೆ ಸುರೇಶ್ ರೈನಾ ಅವರ ಹೆಸರಿನಲ್ಲಿತ್ತು. ರೈನಾ, 2010ರಲ್ಲಿ ತಾವು 23 ವರ್ಷ 156 ದಿನದವರಿದ್ದಾಗ ಶತಕ ಚಚ್ಚಿದ್ದರು. ಇದೀಗ ಗಿಲ್, ತಾವು 23 ವರ್ಷ 146 ದಿನಗಳಿದ್ದಾಗ ಟಿ20 ಕ್ರಿಕೆಟ್‌ನಲ್ಲಿ ಶತಕ ಪೂರೈಸಿದ್ದಾರೆ.
 

45
Gill

* 3 ತಿಂಗಳ ಅವಧಿಯಲ್ಲಿ 3 ಮಾದರಿಯಲ್ಲಿ ಶತಕ

ಶುಭ್‌ಮನ್ ಗಿಲ್‌ ಕಳೆದ ಡಿಸೆಂಬರ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಇದಾದ ಬಳಿಕ ಜನವರಿಯಲ್ಲಿ ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದರು. ಇದಾದ ಬಳಿಕ ಫೆಬ್ರವರಿ 01ರಂದು ಕಿವೀಸ್ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ ಶತಕ ಚಚ್ಚುವ ಮೂಲಕ, ಕಳೆದ ಮೂರು ತಿಂಗಳ ಅವಧಿಯಲ್ಲಿ ಮೂರು ಮಾದರಿಯಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
 

55

* ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಶತಕ ಸಿಡಿಸಿದ ಜಗತ್ತಿನ ಅತಿಕಿರಿಯ ಬ್ಯಾಟರ್ ಗಿಲ್‌:

ಪಂಜಾಬ್ ಮೂಲದ ಶುಭ್‌ಮನ್ ಗಿಲ್, ಇದೀಗ ನ್ಯೂಜಿಲೆಂಡ್ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ, ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಚಚ್ಚಿದ ಅತಿಕಿರಿಯ ಬ್ಯಾಟರ್ ( 23 ವರ್ಷ 146 ದಿನ) ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

Read more Photos on
click me!

Recommended Stories