ಸಚಿನ್ ತೆಂಡೂಲ್ಕರ್ ಭಾವೀ ಅಳಿಯ ಎಂದೇ ಕರೆಯೋ ಗಿಲ್ ಜರ್ಸಿ ನಂ. 77 ರ ಹಿಂದಿನ ಕಥೆ ಇದು!

First Published Nov 18, 2023, 5:16 PM IST

ಭಾರತೀಯ ಕ್ರಿಕೆಟ್ ತಂಡದ ಓಪನರ್ ಶುಬ್ಮನ್ ಗಿಲ್ (Shubman Gill) ಅವರು ವಿಶ್ವದ ನಂಬರ್ 1 ODI ಬ್ಯಾಟರ್ ಆಗಿದ್ದಾರೆ. ಈ ಸಮಯದಲ್ಲಿ ಗಿಲ್‌ ಅವರ ಸಂದರ್ಶನವೊಂದು ವೈರಲ್‌ ಆಗಿದೆ. ಅಲ್ಲಿ  ಅವರು ತಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರ ಬಗ್ಗೆ ಕೆಲವು ವೈಯಕ್ತಿಕ ಮತ್ತು ವೃತ್ತಿಪರ ಸಂಗತಿಗಳ ವಿವರ ಇಲ್ಲಿದೆ.

ಕೇವಲ 24ನೇ ವಯಸ್ಸಿನಲ್ಲಿ ಪಂಜಾಬ್‌ನ ಯುವಕ ಶುಬ್ಮನ್ ಗಿಲ್‌ ವಿಶ್ವದ ನಂಬರ್ 1 ODI ಬ್ಯಾಟರ್ ಆಗಿ ಹೊರ ಹೊಮ್ಮಿದ್ದಾರೆ. ಶುಬ್ಮನ್ ಗಿಲ್‌ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಯುವ ಕ್ರಿಕೆಟಿಗರಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ.

ವಿರಾಟ್ ಅವರ 50 ಏಕದಿನ ಶತಕಗಳ ದಾಖಲೆಯನ್ನು ಮುರಿಯುವ ಸಾಮರ್ಥ್ಯವನ್ನು ಶುಬ್ಮನ್ ಗಿಲ್ ಹೊಂದಿದ್ದಾರೆ ಎಂಬ ಮಾತುಗಳು ಮಾಜಿ ಕ್ರಿಕೆಟಿಗರು ಮತ್ತು ವಿಮರ್ಶಕರಿಂದ  ಕೇಳಿಬರುತ್ತಿವೆ.   

2023 ರ ವರ್ಷವು ಇದುವರೆಗಿನ ಶುಬ್ಮನ್ ಅವರ ವೃತ್ತಿಜೀವನದಲ್ಲಿ ಪ್ರಮುಖವಾಗಿದೆ. ಗಿಲ್‌ 2023 ರಲ್ಲಿ ಸುಮಾರು 1580 ರನ್ ಗಳಿಸಿದ್ದಾರೆ. ಇದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ODI ರನ್‌ಗಳ ಪಟ್ಟಿಯಲ್ಲಿ ಅವರನ್ನು 7 ನೇ ಸ್ಥಾನದಲ್ಲಿರುವಂತೆ ಮಾಡಿದೆ. 

ಸದ್ಯಕ್ಕೆ, ಶುಬ್ಮನ್ 43 ODI ಪಂದ್ಯಗಳಲ್ಲಿ 6 ODI ಶತಕಗಳನ್ನು ಹೊಂದಿದ್ದಾರೆ. ಈ ಅಂಕಿಅಂಶಗಳನ್ನು ನೋಡಿದರೆ  ಶುಬ್ಮನ್ ಗಿಲ್ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಅಲ್ಲದೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಜೊತೆ ಅವರ ಹೆಸರು ಥಳಕು ಹಾಕಿಕೊಂಡಿದ್ದು, ಇವರ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. 

ಸೆಪ್ಟೆಂಬರ್ 8, 1999 ರಂದು ಪಂಜಾಬ್‌ನ ಫಾಜಿಲ್ಕಾದಲ್ಲಿ ಜನಿಸಿದ  ಶುಭಮನ್ ಗಿಲ್ ಅವರ ತಂದೆ ಲಖ್ವಿಂದರ್ ಸಿಂಗ್ ಅವರು ಕೃಷಿಕರಾಗಿದ್ದರು, ಅವರ ತಾಯಿ ಕೆರ್ಟ್ ಗಿಲ್ ಅವರ ವೃತ್ತಿಯ ಬಗ್ಗೆ ಹೆಚ್ಚು ತಿಳಿದಿಲ್ಲ. 

ಲಖ್ವಿಂದರ್ ಸಿಂಗ್ ಅವರಿಗೇ ಖುದ್ದು  ಕ್ರಿಕೆಟಿಗನಾಗಬೇಕೆಂಬ ಆಸೆ ಇತ್ತು. ಆದರೆ ಅವರು ಆಗ ಆರ್ಥಿಕವಾಗಿ ಸದೃಢರಾಗಿರಲಿಲ್ಲ.ಪರಿಣಾಮವಾಗಿ, ಲಖ್ವಿಂದರ್ ಸಿಂಗ್ ಅವರ ಮಗ ಕ್ರಿಕೆಟ್‌ನಲ್ಲಿ ಆಸಕ್ತಿ ತೋರಿಸಿದಾಗ, ಶುಭಮನ್ ಗಿಲ್ ಅವರನ್ನು ವೃತ್ತಿಪರ ಕ್ರಿಕೆಟಿಗನನ್ನಾಗಿ ಮಾಡಲು ಅನೇಕ ವಿಷಯಗಳನ್ನು ಕಲಿಸಿದರು. ಅವರ ಮೊದಲ ತರಬೇತುದಾರರಾಗುವವರೆಗೆ ತಂದೆ ಎಲ್ಲವನ್ನೂ ಮಾಡಿದರು. ಲಖ್ವಿಂದರ್ ಸಿಂಗ್ 2007 ರಲ್ಲಿ ಶುಬ್ಮನ್‌ಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಅವರ ಇಡೀ ಕುಟುಂಬವನ್ನು ಮೊಹಾಲಿಗೆ ಸ್ಥಳಾಂತರಿಸಿದರು.

2019 ರ ಜನವರಿ 31 ರಂದು ನ್ಯೂಜಿಲೆಂಡ್ ವಿರುದ್ಧದ ODI ನಲ್ಲಿ ಶುಭಮನ್ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದಾಗ ಲಖ್ವಿಂದರ್ ಅವರ ಎಲ್ಲಾ ಕಠಿಣ ಪರಿಶ್ರಮ ಮತ್ತು ತಾಳ್ಮೆ ಫಲ ನೀಡಿತು.

ಶುಬ್ಮನ್ ಗಿಲ್ ಅವರ ಜರ್ಸಿ ಸಂಖ್ಯೆ 77  ಇದರ ಹಿಂದಿನ ಕಾರಣದ ಬಗ್ಗೆ ಹೇಳಿದ ಶುಬ್‌ಮನ್ ಅವರು U-19 ವಿಶ್ವಕಪ್‌ನಲ್ಲಿ ಆಡುವಾಗ, ಅವರು 7 ನೇ ಸಂಖ್ಯೆಯನ್ನು ಕೇಳಿದರು, ಆದರೆ ಅದು ಸಿಗದ  ಪರಿಣಾಮವಾಗಿ, ಅವರು ಎರಡು ಸೆವೆನ್‌ಗಳನ್ನು ಹೊಂದಿರುವ 77 ಸಂಖ್ಯೆಯನ್ನು ಆಯ್ಕೆ ಮಾಡಿರುವ ವಿಷಯವನ್ನು ಹಂಚಿಕೊಂಡರು.
 

ಸ್ಟಾರ್ ಸ್ಪೋರ್ಟ್ಸ್ ಇಂಡಿಯಾದ ಸಂದರ್ಶನದಲ್ಲಿ, ಶುಭಮನ್ ಗಿಲ್ ತನ್ನ ಕುಟುಂಬದ ಸದಸ್ಯರು ಕಾಕಾ ಎಂಬ ಹೆಸರಿನಿಂದ ಕರೆಯುತ್ತಾರೆ ಎಂದು ಹಂಚಿಕೊಂಡಿದ್ದಾರೆ. ಪಂಜಾಬಿಯಲ್ಲಿ 'ಕಾಕಾ' ಎಂದರೆ 'ಮಗು' ಎಂದೂ ಗಿಲ್‌ ಸೇರಿಸಿದ್ದಾರೆ.  

ಭಾರತೀಯ ಕ್ರಿಕೆಟ್ ತಂಡದಲ್ಲಿ ತನ್ನ 'ಬೆಸ್ಟ್ ಫ್ರೆಂಡ್' ಎಂದು ಇಶಾನ್ ಕಿಶನ್ ಅವರ ಹೆಸರನ್ನು ತೆಗೆದುಕೊಂಡರೆ, ವಿರಾಟ್ ಕೊಹ್ಲಿಯನ್ನು 'ಪ್ರಸ್ತುತ ನೆಚ್ಚಿನ ಆಟಗಾರ' ಎಂದು  ಶುಭಮನ್ ಗಿಲ್ ಹೇಳಿದ್ದಾರೆ.

ಅವರು ಬೆಳೆಯುತ್ತಿರುವಾಗ ಅವರ ಆರಾಧ್ಯ ದೈವಸಚಿನ್ ತೆಂಡೂಲ್ಕರ್ ಎಂದು ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಶುಭಮನ್ ಗಿಲ್‌ಗೆ ಸ್ಫೂರ್ತಿ ಎಂದು ಹೇಳಿದ್ದಾರೆ,

ಪ್ರತಿ ಪಂದ್ಯ ಮುಗಿದ ನಂತರ ನೀವು ಯಾರಿಗೆ ಕರೆ ಮಾಡುತ್ತೀರಿ ಎಂದು ಶುಭಮನ್ ಗಿಲ್ ಅವರನ್ನು ಕೇಳಿದಾಗ, ತಮ್ಮ ತಂದೆ ಲಖ್ವಿಂದರ್ ಸಿಂಗ್ ಅವರ ಹೆಸರನ್ನು ತೆಗೆದುಕೊಂಡರು. ಪ್ರತಿ ಪಂದ್ಯದ ನಂತರ ಅವರು ತನ್ನ ತಂದೆಗೆ ಕರೆ ಮಾಡುತ್ತೇನೆ ಎಂದು  ಒಪ್ಪಿಕೊಂಡಿದ್ದಾರೆ.

ಬಹು ವರದಿಗಳ ಪ್ರಕಾರ, ಶುಬ್ಮನ್ ಗಿಲ್ ಅವರು ಬಿಸಿಸಿಐನಿಂದ ಪಡೆಯುವ ವಾರ್ಷಿಕ ವೇತನ  ಸುಮಾರು ರೂ. 1 ಕೋಟಿ. ಒಂದು ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ ರೂ. 6 ಲಕ್ಷ ಮತ್ತು ರೂ. ಒಂದು ಟಿ20ಗೆ 3 ಲಕ್ಷ ರೂ ಸಂಭಾವನೆ ಪಡೆಯುತ್ತಾರೆ

ಶುಬ್ಮನ್ ಗಿಲ್ ಐಪಿಎಲ್‌ನಿಂದ 23 ಕೋಟಿ ಗಳಿಸಿದರೆ ಬಹಳಷ್ಟು ಬ್ರಾಂಡ್ ಕೆಲಸಗಳಲ್ಲಿ ಸಹ ಕೆಲಸ ಮಾಡುತ್ತಾರೆ. ಶುಭಮನ್ ಗಿಲ್ ಅವರ ನಿವ್ವಳ ಮೌಲ್ಯ ಅಂದಾಜು ರೂ. 31 ಕೋಟಿ ಎಂದು ವರದಿಗಳು ಹೇಳುತ್ತವೆ.

click me!