'ನಂಗೆ ಹುಡುಗೀರಂದ್ರೆ ಇಷ್ಟ': ಮೂರನೇ ಮದುವೆ ಬೆನ್ನಲ್ಲೇ ಶೋಯೆಬ್ ಮಲಿಕ್ ಹಳೇ ವಿಡಿಯೋ ವೈರಲ್..!

First Published | Jan 31, 2024, 9:55 AM IST

ಪಾಕಿಸ್ತಾನದ ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್. ಇದೀಗ ಮೂರನೇ ಮದುವೆಯಾಗಿದ್ದಾರೆ. ಇದರ ಬೆನ್ನಲ್ಲೇ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 
 

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ 14 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಈ ಇಬ್ಬರು ಸಾಕಷ್ಟು ಚರ್ಚೆಯಲ್ಲಿದ್ದಾರೆ.

ಸಾನಿಯಾ ಮಿರ್ಜಾಗೆ ತಲಾಕ್ ನೀಡಿ ಇದೀಗ ಶೋಯೆಬ್ ಮಲಿಕ್ ಮೂರನೇ ಮದುವೆಯಾಗಿದ್ದಾರೆ. ಪಾಕಿಸ್ತಾನದ ನಟಿ ಸನಾ ಜಾವೆದ್ ಜತೆ ಪಾಕ್ ಅನುಭವಿ ಆಲ್ರೌಂಡರ್ ಮೂರನೇ ಇನಿಂಗ್ಸ್ ಆರಂಭಿಸಿದ್ದಾರೆ. ತಮ್ಮ ಮದುವೆಯ ಫೋಟೋವನ್ನು ಸ್ವತಃ ಮಲಿಕ್ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.

Tap to resize

ಇದೆಲ್ಲದರ ನಡುವೆ 41 ವರ್ಷದ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಈ ಹಿಂದೆ ಟಾಕ್ ಶೋವೊಂದರಲ್ಲಿ ಹುಡುಗಿಯರ ಕುರಿತಾಗಿ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಲಾರಂಭಿಸಿದೆ.

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಜತೆಗಿನ ಒಂದು ಟಾಕ್ ಶೋನಲ್ಲಿ, ಅಖ್ತರ್ ಅವರು ಹುಡುಗಿಯರ ಕುರಿತಾಗಿ ಕೇಳಿದ ಪ್ರಶ್ನೆಗೆ ಮಲಿಕ್ ನೀಡಿದ್ದ ಉತ್ತರ ಈಗ ವೈರಲ್ ಆಗಿದೆ.

ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್, ನೀವು ಇಷ್ಟಪಡುವ, ನಿಮ್ಮ ಹೃದಯವನ್ನು ಕದ್ದಿರುವ ಆ 5 ಹುಡುಗಿಯರ ಹೆಸರನ್ನು ಹೇಳಿ ಎಂದು ಪಾಕ್ ಅನುಭವಿ ಆಲ್ರೌಂಡರ್ ಮಲಿಕ್ ಅವರನ್ನು ಕೇಳುತ್ತಾರೆ. 

5 ಅಲ್ಲ 500 ಜನರಿದ್ದಾರೆ. ಹುಡುಗಿಯರೆಂದರೆ ನನಗೆ ತುಂಬಾ ಇಷ್ಟ. ನನಗೆ ಹುಡುಗರಿಗಿಂತ ಹುಡುಗಿಯರೆಂದರೇ ತುಂಬಾ ಇಷ್ಟ ಎಂದು ಬಲಗೈ ಆಲ್ರೌಂಡರ್ ಮಲಿಕ್ ಹೇಳಿದ್ದರು.

ಇನ್ನು ಇದೇ ವೇಳೆ ಅಖ್ತರ್, ಕೆಲವು ಪಾಕಿಸ್ತಾನಿ ನಟಿಯರ ಹೆಸರು ಕೇಳಿದಾಗ ಯಾರೂ ಬಾಕಿ ಉಳಿದಿಲ್ಲ. ಎಲ್ಲರೂ ಚೆನ್ನಾಗಿದ್ದಾರೆ ಎಂದು ಸಾನಿಯಾ ಮಾಜಿ ಗಂಡ ಮಲಿಕ್ ಹೇಳಿದ್ದಾರೆ.

ಸ್ಪಿನ್ ಆಲ್ರೌಂಡರ್ ಶೋಯೆಬ್ ಮಲಿಕ್ ಪಾಕಿಸ್ತಾನ ಪರ 35 ಟೆಸ್ಟ್, 287 ಏಕದಿನ ಹಾಗೂ 124 ಟಿ20 ಪಂದ್ಯಗಳನ್ನಾಡಿದ್ದಾರೆ. ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವ ಮಲಿಕ್ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್‌ ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ

Latest Videos

click me!