2023ರ ಐಪಿಎಲ್ ಟೂರ್ನಿಗೂ ಮುನ್ನ ಈ 5 ಆಟಗಾರರಿಗೆ ಆರ್‌ಸಿಬಿಯಿಂದ ಗೇಟ್‌ಪಾಸ್ ಗ್ಯಾರಂಟಿ..!

First Published | Jun 3, 2022, 12:35 PM IST

ಬೆಂಗಳೂರು: ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಮತ್ತೊಮ್ಮೆ ಬರಿಗೈನಲ್ಲೇ ಐಪಿಎಲ್ ಅಭಿಯಾನ ಮುಗಿಸಿದೆ. 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಆಸೆ ಮೂಡಿಸಿತ್ತಾದರೂ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಪ್ರಶಸ್ತಿ ಸುತ್ತು ಪ್ರವೇಶಿಸುವ ಮುನ್ನವೇ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿತ್ತು. ಹೀಗಾಗಿ ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಈ ಐವರು ಆಟಗಾರರಿಗೆ ಗೇಟ್‌ ಪಾಸ್ ನೀಡುವುದು ಬಹುತೇಕ ಖಚಿತ ಎನಿಸಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Sherfane Rutherford

1. ಶೆರ್ಫಾನೆ ರುದರ್‌ಫೋರ್ಡ್‌

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಮೂರು ಪಂದ್ಯದಲ್ಲಿ ಆಲ್ರೌಂಡರ್ ಶೆರ್ಫಾನೆ ರುದರ್‌ಫೋರ್ಡ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದರು. ಆದರೆ ಮ್ಯಾಕ್ಸ್‌ವೆಲ್, ಆರ್‌ಸಿಬಿ ತಂಡ ಕೂಡಿಕೊಳ್ಳುತ್ತಿದ್ದಂತೆಯೇ ರುದರ್‌ಫೋರ್ಡ್‌ ಬೆಂಚ್ ಕಾಯಿಸಬೇಕಾಯಿತು.
 

Suvarna IPL 2022-Sherfane Rutherford

ಒಂದು ಕೋಟಿ ರುಪಾಯಿಗೆ ಆರ್‌ಸಿಬಿ ಸೇರಿಕೊಂಡಿದ್ದ ರುದರ್‌ಫೋರ್ಡ್‌ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾದರು. ಆರ್‌ಸಿಬಿ ಪರ ಮೊದಲ 3 ಪಂದ್ಯಗಳಲ್ಲಿ ರುದರ್‌ಫೋರ್ಡ್‌ ಕೇವಲ 66ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ಗಳಿಸಿದ್ದರು. ಹೀಗಾಗಿ ಮುಂದಿನ ಆವೃತ್ತಿಯ ಐಪಿಎಲ್‌ಗೂ ಮುನ್ನ ಆರ್‌ಸಿಬಿ, ವಿಂಡೀಸ್ ಆಟಗಾರನನ್ನು ಕೈಬಿಡೋ ಸಾಧ್ಯತೆ ಹೆಚ್ಚು.
 

Tap to resize

david willey

2. ಡೇವಿಡ್ ವಿಲ್ಲಿ
ಇಂಗ್ಲೆಂಡ್ ಮೂಲದ ಎಡಗೈ ವೇಗಿ ಡೇವಿಡ್ ವಿಲ್ಲಿ, 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರ 4 ಪಂದ್ಯಗಳನ್ನಾಡಿದ್ದರು. ಈ ಪೈಕಿ ಕೇವಲ ಒಮ್ಮೆ ಮಾತ್ರ ತಮ್ಮ ಕೋಟಾದ 4 ಓವರ್‌ ಬೌಲಿಂಗ್ ಮಾಡಿದ್ದರು. ವಿಲ್ಲಿ ಆರ್‌ಸಿಬಿ ಪರ 4 ಪಂದ್ಯಗಳಿಂದ ಕೇವಲ 11 ಓವರ್‌ಗಳನ್ನು ಬೌಲಿಂಗ್‌ ಮಾಡಿ ಕೇವಲ ಒಂದು ವಿಕೆಟ್ ಮಾತ್ರ ಕಬಳಿಸಿದ್ದರು.

David willey

ಆಸ್ಟ್ರೇಲಿಯಾದ ಅನುಭವಿ ವೇಗಿ ಜೋಸ್ ಹೇಜಲ್‌ವುಡ್, ಆರ್‌ಸಿಬಿ ತಂಡವನ್ನು ಕೂಡಿಕೊಳ್ಳುತ್ತಿದ್ದಂತೆಯೇ, ಡೇವಿಡ್ ವಿಲ್ಲಿ ಬೆಂಚ್ ಕಾಯಿಸಲಾರಂಭಿಸಿದರು. ವಿಲ್ಲಿ ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರ ಕಾಣಿಸಿಕೊಳ್ಳುವುದು ಅನುಮಾನ ಎನಿಸಿದೆ.
 

Siddarth Kaul

3. ಸಿದ್ದಾರ್ಥ್‌ ಕೌಲ್‌
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ ದುಬಾರಿಯಾಗಿದ್ದರಿಂದ ಸಿದ್ದಾರ್ಥ್‌ ಕೌಲ್‌ಗೆ ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಮಣೆಹಾಕಲಾಗಿತ್ತು. ಆದರೆ ಕೌಲ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾಗಿದ್ದರು.

siddarth kaul

32 ವರ್ಷದ ಸಿದ್ದಾರ್ಥ್‌ ಕೌಲ್‌, ಗುಜರಾತ್ ಟೈಟಾನ್ಸ್ ವಿರುದ್ದ 4 ಓವರ್‌ ಬೌಲಿಂಗ್ ಮಾಡಿ 43 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಇದಾದ ಬಳಿಕ ಕೌಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಕೌಲ್ ಕೂಡಾ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ರತಿನಿಧಿಸೋದು ಅನುಮಾನ.

Suvarna IPL 2022-Jason Behrendorff

4. ಜೇಸನ್‌ ಬೆಹ್ರೆನ್‌ಡಾರ್ಫ್‌
ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವಿದೇಶಿ ವೇಗದ ಬೌಲರ್‌ ರೂಪದಲ್ಲಿ ಡೇವಿಡ್ ವಿಲ್ಲಿ ಹಾಗೂ ಜೋಸ್ ಹೇಜಲ್‌ವುಡ್‌ ಕಣಕ್ಕಿಳಿದಿದ್ದರಿಂದ, ಆಸ್ಟ್ರೇಲಿಯಾದ ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್‌ ಅವರಿಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನಾಡಲು ಅವಕಾಶ ಸಿಕ್ಕಿರಲಿಲ್ಲ.
 

ಈ ಮೊದಲು ಐಪಿಎಲ್‌ನಲ್ಲಿ ಬೆಹ್ರೆನ್‌ಡಾರ್ಫ್‌ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2019ರ ಐಪಿಎಲ್‌ನಲ್ಲಿ ಬೆಹ್ರೆನ್‌ಡಾರ್ಫ್‌, ಮುಂಬೈ ಇಂಡಿಯನ್ಸ್ ಪರ 5 ಪಂದ್ಯಗಳನ್ನಾಡಿ 8.68ರ ಎಕಾನಮಿಯಲ್ಲಿ 5 ವಿಕೆಟ್ ಕಬಳಿಸಿದ್ದರು. ಮುಂದಿನ ಆವೃತ್ತಿಯ ಐಪಿಎಲ್‌ಗೂ ಮುನ್ನ ಬೆಹ್ರೆನ್‌ಡಾರ್ಫ್‌ ಅವರನ್ನು ಆರ್‌ಸಿಬಿ ಕೈಬಿಡುವ ಸಾಧ್ಯತೆಯಿದೆ.

Suvarna IPL 2022-Karn Sharma

5. ಕರ್ಣ್‌ ಶರ್ಮಾ
ನೀಳಕಾಯದ ಲೆಗ್ ಸ್ಪಿನ್ನರ್ ಕರ್ಣ್ ಶರ್ಮಾ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಮೆಗಾ ಹರಾಜಿನಲ್ಲಿ ಮೂಲ ಬೆಲೆ 50 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ವನಿಂದು ಹಸರಂಗ ಆರ್‌ಸಿಬಿ ಪರ ಜವಾಬ್ದಾರಿಯುತ ಪ್ರದರ್ಶನ ತೋರಿದ್ದರಿಂದ ಕರ್ಣ್ ಶರ್ಮಾಗೆ ಬೆಂಗಳೂರು ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲು ಅವಕಾಶ ದೊರೆಯಲಿಲ್ಲ.
 

ಕರ್ಣ್ ಶರ್ಮಾ 2020ರ ಐಪಿಎಲ್‌ನಲ್ಲಿ ಕೆಕೆಆರ್ ಎದುರು ಸಿಎಸ್‌ಕೆ ತಂಡದ ಪರ ಕೊನೆಯ ಬಾರಿಗೆ ಐಪಿಎಲ್ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಕರ್ಣ್ ಶರ್ಮಾ ಬೆಂಚ್ ಕಾಯಿಸುತ್ತಲೇ ಬಂದಿದ್ದು, ಮುಂದಿನ ಆವೃತ್ತಿಯ ಐಪಿಎಲ್‌ಗೂ ಮುನ್ನ ಈ ಲೆಗ್ ಸ್ಪಿನ್ನರ್‌ಗೆ ಆರ್‌ಸಿಬಿ ಗೇಟ್ ಪಾಸ್ ನೀಡುವ ಸಾಧ್ಯತೆ ಹೆಚ್ಚು.

Latest Videos

click me!