ಅರ್ಜುನ್ ಎಂಗೇಜ್‌ಮೆಂಟ್ ಬೆನ್ನಲ್ಲೇ ಲವ್ವಲ್ಲಿ ಬಿದ್ರಾ ಸಾರಾ? ತೆಂಡೂಲ್ಕರ್ ಮಗಳ ಜತೆಗಿರುವ ಹುಡುಗ ಯಾರು?

Published : Sep 08, 2025, 04:55 PM IST

ಬೆಂಗಳೂರು: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಸಾರಾ ತೆಂಡೂಲ್ಕರ್ ಲವ್‌ನಲ್ಲಿ ಬಿದ್ರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಯಾಕಂದ್ರೆ ಎನ್ನುವ ಕುತೂಹಲ ತಿಳಿಯಲು ಈ ಆರ್ಟಿಕಲ್ ಓದಿ. 

PREV
110

ಕೆಲದಿನಗಳ ಹಿಂದಷ್ಟೇ ಅರ್ಜುನ್ ತೆಂಡೂಲ್ಕರ್, ಮುಂಬೈನ ಖ್ಯಾತ ಉದ್ಯಮಿಯ ಪುತ್ರಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

210

ಇದರ ಬೆನ್ನಲ್ಲೇ ಮತ್ತೆ ಸಾರಾ ತೆಂಡೂಲ್ಕರ್ ಹೊಸ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

310

ಸಾರಾ ತೆಂಡೂಲ್ಕರ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಲೇ ಬಂದಿದ್ದಾರೆ.

410

ಸಾರಾ ತೆಂಡೂಲ್ಕರ್ ಭಾರತ ಟೆಸ್ಟ್‌ ತಂಡದ ನಾಯಕ ಶುಭ್‌ಮನ್ ಗಿಲ್ ಅವರ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಸಿಫ್ ಇಂದು ನಿನ್ನೆಯದಲ್ಲ. ಆದರೆ ಇದೀಗ ಹೊಸ ಹುಡುಗನ ಜತೆ ಸಾರಾ ತೆಂಡೂಲ್ಕರ್ ಹೆಸರು ಥಳುಕು ಹಾಕಿಕೊಂಡಿದೆ

510

ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಸಾರಾ ತೆಂಡೂಲ್ಕರ್, ಗೋವಾದಲ್ಲಿ ಯಂಗ್ ಮ್ಯಾನ್ ಜತೆ ಕಾಣಿಸಿಕೊಂಡಿದ್ದು, ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

610

ಹೌದು, ಸಾರಾ ತೆಂಡೂಲ್ಕರ್ ಅವರ ಜತೆ ಕಾಣಿಸಿಕೊಂಡಿರುವಾತ ಗೋವಾದ ಆರ್ಟಿಸ್ಟ್ ಸಿದ್ದಾರ್ಥ್ ಕೆರ್ಕರ್ ಎಂದು ಗುರುತಿಸಲಾಗಿದೆ. ಸಿದ್ದಾರ್ಥ್ ತೆಂಡೂಲ್ಕರ್ ಕುಟುಂಬದ ಜತೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ.

710

ಇನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಸಚಿನ್ ತೆಂಡೂಲ್ಕರ್, ಅಂಜಲಿ ತೆಂಡೂಲ್ಕರ್ ಹಾಗೂ ಅರ್ಜುನ್ ತೆಂಡೂಲ್ಕರ್ ಜತೆಗೂ ಸಿದ್ದಾರ್ಥ್ ಕಾಣಿಸಿಕೊಂಡಿದ್ದರು.

810

ಇನ್ನು ಐಪಿಎಲ್ ಸಂದರ್ಭದಲ್ಲಿ ಈ ಸಿದ್ದಾರ್ಥ್ ಹಾಗೂ ಸಾರಾ ತೆಂಡೂಲ್ಕರ್ ಒಟ್ಟಿಗೆ ಸ್ಟೇಡಿಯಂನಲ್ಲಿ ಮ್ಯಾಚ್ ವೀಕ್ಷಿಸುವ ಮೂಲಕ ಎಂಜಾಯ್ ಮಾಡಿದ್ದರು. ಈ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್ ಇರುವುದು ಫೋಟೋಗಳಲ್ಲೂ ಎದ್ದು ಕಾಣುತ್ತಿದೆ.

910

ಸಿದ್ದಾರ್ಥ್ ಆರ್ಟಿಸ್ಟ್ ಜತೆಗೆ ಗೋವಾದಲ್ಲಿ ತನ್ನದೇ ಆದ ರೆಸ್ಟೋರೆಂಟ್‌ ಹೊಂದಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 90 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಇನ್ನು ಸಾರಾ ಹಾಗೂ ಸಿದ್ದಾರ್ಥ್ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ.

1010

ಇನ್ನು ಇವರಿಬ್ಬರ ಸಂಬಂಧದ ಬಗ್ಗೆ ಅವರ ಫ್ಯಾನ್ಸ್ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇವರಿಬ್ಬರದ್ದು ಸ್ನೇಹಕ್ಕೆ ಮಾತ್ರ ಸೀಮಿತವಾಗಿದೆಯೇ ಅಥವಾ ಅದಕ್ಕೂ ಮೀರಿದ ಸಂಬಂಧವೇ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories