ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಸುಂದರ ಫೋಟೋ ಹಂಚಿ ಮಹತ್ವದ ಸುಳಿವು ನೀಡಿದ್ರಾ ಸಾರಾ?

Published : Nov 14, 2023, 11:42 PM ISTUpdated : Nov 14, 2023, 11:43 PM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಅಖಾಡ ರೆಡಿಯಾಗಿದೆ. ಈ ಪಂದ್ಯಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಇಷ್ಟೇ ಕೆಲ ಸುಳಿವು ನೀಡಿದ್ದಾರೆ.  

PREV
18
ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಸುಂದರ ಫೋಟೋ ಹಂಚಿ ಮಹತ್ವದ ಸುಳಿವು ನೀಡಿದ್ರಾ ಸಾರಾ?

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಶುಭಮನ್ ಗಿಲ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡಿದೆ.

28

ಮುಂಬೈನಲ್ಲಿ ಕಾರ್ಯಕ್ರಮದಲ್ಲಿ ಸಾರಾ ಹಾಗೂ ಗಿಲ್ ಜೊತೆಯಾಗಿ ಕಾಣಿಸಿಕೊಂಡಿದ್ದರು.. ಟೂರ್ನಿಯುದ್ದಕ್ಕೂ ಗಿಲ್‌ನನ್ನು ಸಾರಾ ಅಭಿನಂದಿಸುತ್ತಾ, ಹುರಿದುಂಬಿಸಿತ್ತಾ ಬಂದಿದ್ದಾರೆ. 

38

ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೂ ಮುನ್ನ ಸಾರಾ ತೆಂಡೂಲ್ಕರ್ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಸುಂದರವಾಗಿ, ಸೊಗಸಾಗಿ. ವಾವ್ ರೀತಿ ಕಾಣುತ್ತಿದೆ ಎಂದು ಬರೆದುಕೊಂಡಿದ್ದಾರೆ. 

48

ಕಳೆದ ಪಂದ್ಯದಲ್ಲಿ ಶುಭಮನ್ ಗಿಲ್ ಉತ್ತಮ ಪ್ರದರ್ಶನಕ್ಕೆ ಸಾರಾ ತೆಂಡೂಲ್ಕರ್ ಟ್ವೀಟ್ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಗಿಲ್ ಫೋಟೋ ಹಂಚಿಕೊಂಡು ಶುಭಕೋರಿದ್ದರು.

58

ಭಾರತದ ಸೆಮಿಫೈನಲ್ ಪಂದ್ಯ ಮುಂಬೈನಲ್ಲಿ ನಡೆಯುತ್ತಿದೆ.ಹೀಗಾಗಿ ಸಾರಾ ತೆಂಡೂಲ್ಕರ್ ಈ ಪಂದ್ಯಕ್ಕೆ ತಪ್ಪದೇ ಹಾಜರಾಗುತ್ತಾರೆ. ಈಗಾಗಲೇ ಟೀಂ ಇಂಡಿಯಾ ಬಹುತೇಕ ಪಂದ್ಯದಲ್ಲಿ ಹಾಜರಾಗಿ ತಂಡವನ್ನು ಹುರಿದುಂಬಿಸಿದ್ದಾರೆ.
 

68

ಗಿಲ್ ಹಾಗೂ ಸಾರಾ ತೆಂಡೂಲ್ಕರ್ ರಹಸ್ಯವಾಗಿ ಭೇಟಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದರ ಬೆನ್ನಲ್ಲೇ ಇವರ ಮದುವೆ ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

78

ಯುಎಇ ಕ್ರಿಕೆಟಿಗ ಚಿರಾಗ್ ಸೂರಿ ಸ್ಫೋಟಕ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದ್ದರು. ಗಿಲ್ ಹಾಗೂ ಸಾರ ಮದುವೆಯಾಗಲಿದ್ದಾರೆ ಎಂಬ ಮಾತು ಭಾರಿ ವೈರಲ್ ಆಗಿತ್ತು.

88

ಹಲವು ಚರ್ಚೆ, ವೈರಲ್ ವಿಡಿಯೋಗಳು ಹರಿದಾಡುತ್ತಿದೆ. ಆದರೆ ಶುಬಮನ್ ಗಿಲ್ ಅಥವಾ ಸಾರಾ ತೆಂಡೂಲ್ಕರ್ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 

Read more Photos on
click me!

Recommended Stories