ಸೆಮೀಸ್-ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಆತಿಥೇಯರ ಶಾಪ, ಕಳೆದ 3 ವಿಶ್ವಕಪ್ ಟೂರ್ನಿಯಲ್ಲೂ ಸೋಲು!

First Published | Nov 14, 2023, 4:08 PM IST

ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಕಂಟಕವೊಂದಿದೆ. ಕಳೆದ 3 ವಿಶ್ವಕಪ್ ಟೂರ್ನಿಯಲ್ಲೂ ಈ ಶಾಪ ಮುಂದುವರಿದಿದೆ. ಕಾರಣ 2011ರ ವಿಶ್ವಕಪ್ ಟೂರ್ನಿಯಿಂದ ಸೆಮಿಫೈನಲ್, ಅಥವಾ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆತಿಥೇಯ ತಂಡಕ್ಕೆ ತಲೆಬಾಗುತ್ತಿದೆ. 

ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮುಂಬೈನಲ್ಲಿ ನಡೆಯಲಿರುವ ಈ ರೋಚಕ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಹೋರಾಟ ನಡೆಸಲಿದೆ.

ಭಾರತ 9 ಲೀಗ್ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ತಂಡವಾಗಿದ್ದರೆ, ನ್ಯೂಜಿಲೆಂಡ್ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಂಪಾದಿಸಿ ಸೆಮಿಫೈನಲ್ ಪ್ರವೇಶ ಪಡೆದಿದೆ.
 

Latest Videos


ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಕಂಟಕವೊಂದು ಪದೇ ಪದೇ ಎದುರಾಗುತ್ತಿದೆ. ಕಳೆದ 4 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಮಹತ್ವದ ಪಂದ್ಯದಲ್ಲಿ ಆತಿಥೇಯರಿಗೆ ತಲೆಬಾಗುತ್ತಿದೆ.

2011ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿತ್ತು. ಈ ವೇಳೆ ಭಾರತದ ಜೊತೆ ಶ್ರೀಲಂಕಾ ಕೂಡ ಆತಿಥೇಯ ತಂಡವಾಗಿತ್ತು. ಲಂಕಾ ವಿರುದ್ಧ ಹೋರಾಡಿದ ನ್ಯೂಜಿಲೆಂಡ್ ಸೋಲು ಕಂಡಿತ್ತು.

2015ರಲ್ಲಿ ನ್ಯೂಜಿಲೆಂಡ್ ತಂಡ ದಿಟ್ಟ ಹೋರಾಟದ ಮೂಲಕ ಫೈನಲ್ ಪ್ರವೇಶಿಸಿತ್ತು. ನ್ಯೂಜಿಲೆಂಡ್ ಕೂಡ ಆತಿಥೇಯ ತಂಡವಾಗಿತ್ತು. ಆದರೆ ಮತ್ತೊಂದು ಆತಿಥ್ಯ ತಂಡ ಆಸ್ಟ್ರೇಲಿಯಾ ವಿರುದ್ದ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿತ್ತು. ಈ ಮೂಲಕ ಟ್ರೋಫಿ ಕೈಚೆಲಿತ್ತು.

2019ರ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಮತ್ತೆ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಮುಗ್ಗರಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

2023ರ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ನ್ಯೂಜಿಲೆಂಡ ಆತಿಥೇಯ ಭಾರತ ವಿರುದ್ದ ಹೋರಾಟ ನಡೆಸಲಿದೆ. ಸದ್ಯ ಟೀಂ ಇಂಡಿಯಾ ಫಾರ್ಮ್ ಮುಂದೆ ನ್ಯೂಜಿಲೆಂಡ್ ಫಲಿತಾಂಶ ಊಹಿಸಲು ಸಾಧ್ಯ.

2023ರ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ನ್ಯೂಜಿಲೆಂಡ ಆತಿಥೇಯ ಭಾರತ ವಿರುದ್ದ ಹೋರಾಟ ನಡೆಸಲಿದೆ. ಸದ್ಯ ಟೀಂ ಇಂಡಿಯಾ ಫಾರ್ಮ್ ಮುಂದೆ ನ್ಯೂಜಿಲೆಂಡ್ ಫಲಿತಾಂಶ ಊಹಿಸಲು ಸಾಧ್ಯ.

click me!