ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌: ಟೀಂ ಇಂಡಿಯಾ ಪರ ಎರಡನೇ ಅತಿವೇಗದ ಶತಕ ಸಿಡಿಸಿದ ಸಂಜು ಸ್ಯಾಮ್ಸನ್!

First Published | Oct 13, 2024, 1:06 PM IST

ಹೈದರಾಬಾದ್​ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಶತಕ ಸಿಡಿಸಿ ಮಿಂಚಿದ್ರು. 40 ಎಸೆತಗಳಲ್ಲಿ ಶತಕ ಬಾರಿಸಿದ ಅವರು, ಹಲವು ದಾಖಲೆಗಳನ್ನು ಬರೆದ್ರು. ಒಂದು ಓವರ್​ನಲ್ಲಿ ಸತತ 4 ಬೌಂಡರಿ, ಇನ್ನೊಂದು ಓವರ್​ನಲ್ಲಿ ಸತತ 5 ಸಿಕ್ಸರ್​ ಬಾರಿಸಿದ್ದು ಇನ್ನಿಂಗ್ಸ್​ನ ಹೈಲೈಟ್​ ಆಗಿದೆ.

ಹೈದರಾಬಾದ್​ನಲ್ಲಿ ನಡೆದ ಭಾರತ-ಬಾಂಗ್ಲಾದೇಶ 3ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ದಸರಾ ಹಬ್ಬದಂದು ರನ್​ಗಳ ಸಿಡಿಮದ್ದನ್ನೇ ಸಿಡಿಸಿದ ಸಂಜು ಸ್ಯಾಮ್ಸನ್​ 40 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಒಂದು ಓವರ್​ನಲ್ಲಿ ಸತತ 4 ಬೌಂಡರಿ, ಇನ್ನೊಂದು ಓವರ್​ನಲ್ಲಿ ಸತತ 5 ಸಿಕ್ಸರ್​ ಬಾರಿಸಿದ್ದು ಇನ್ನಿಂಗ್ಸ್​ನ ಮತ್ತೊಂದು ಹೈಲೈಟ್​.

ಹೈದರಾಬಾದ್​ನಲ್ಲಿ ಸಂಜು ಸ್ಯಾಮ್ಸನ್​ ರನ್​ಗಳ ಸುನಾಮಿ ಎಬ್ಬಿಸಿದರು. ಕಳೆದ ನಾಲ್ಕು ಪಂದ್ಯಗಳಲ್ಲಿ ವೈಪಲ್ಯ ಅನುಭವಿಸಿದ್ದ ಸ್ಯಾಮ್ಸನ್​, ಈ ಬಾರಿ ರನ್​ ಮಳೆ ಸುರಿಸಿ ಅಬ್ಬರದ ಇನ್ನಿಂಗ್ಸ್​ ಆಡಿದರು. ದಸರಾ ಹಬ್ಬದಂದು ಬೌಂಡರಿ, ಸಿಕ್ಸರ್​ಗಳ ಸಿಡಿಮದ್ದನ್ನೇ ಹೊಡೆದರು.

Tap to resize

40 ಎಸೆತಗಳಲ್ಲಿ ಶತಕ ಸಿಡಿಸಿದ ಸಂಜು ಸ್ಯಾಮ್ಸನ್​, 2ನೇ ಓವರ್​ನಲ್ಲಿ ಬಾಂಗ್ಲಾ ಬೌಲರ್​ ಟಸ್ಕಿನ್​ ಅವರ ಎಸೆತದಲ್ಲಿ ಸತತ 4 ಬೌಂಡರಿ ಬಾರಿಸಿದರು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಸತತ ನಾಲ್ಕು ಇನ್ನಿಂಗ್ಸ್​ಗಳಲ್ಲಿ ವಿಫಲರಾಗಿದ್ದ ಅವರು ಈ ಪಂದ್ಯದಲ್ಲಿ 50 ರನ್​ಗಳ ಮೈಲಿಗಲ್ಲು ತಲುಪಿದರು.

ಸಂಜು ಸ್ಯಾಮ್ಸನ್​ ಟಿ20 ದಾಖಲೆಗಳು

236.17 ಸ್ಟ್ರೈಕ್​ ರೇಟ್​ನೊಂದಿಗೆ ರನ್​ ಕಲೆ ಹಾಕಿದ ಸಂಜು ಸ್ಯಾಮ್ಸನ್​ 47 ಎಸೆತಗಳಲ್ಲಿ 111 ರನ್​ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 11 ಬೌಂಡರಿ, 8 ಸಿಕ್ಸರ್​ ಸಿಡಿಸಿದರು. 

ಹೈದರಾಬಾದ್​ನಲ್ಲಿ ಸಂಜು ಸ್ಯಾಮ್ಸನ್​ ಅಬ್ಬರದ ಇನ್ನಿಂಗ್ಸ್​ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ಸಿಡಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದರು. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್​ಮನ್​ ಆಗಿ ಹೊರಹೊಮ್ಮಿದರು.

ಭಾರತದ ಪರ ಎರಡನೇ ಅತಿವೇಗದ ಶತಕ

ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. 2017ರಲ್ಲಿ ಲಂಕಾ ಎದುರು ಇಂದೋರ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ರೋಹಿತ್ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಇದೀಗ ಸಂಜು 40 ಎಸೆತಗಳಲ್ಲಿ ಶತಕ ಸಿಡಿಸಿ ಎರಡನೇ ಸ್ಥಾನಕ್ಕೇರಿದ್ದಾರೆ.

Latest Videos

click me!