ಐಪಿಎಲ್ 2026: ಸಂಜು ಸ್ಯಾಮ್ಸನ್ ಜೊತೆ 5 ಆಟಗಾರರು ಔಟ್? ಈ ಲಿಸ್ಟ್‌ನಲ್ಲಿವೆ ಅಚ್ಚರಿಯ ಹೆಸರುಗಳು

Published : Aug 11, 2025, 09:16 AM IST

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುವ ಸುದ್ದಿ ಇದೆ. ಸಂಜು ಸ್ಯಾಮ್ಸನ್ ಜೊತೆಗೆ ಇನ್ನೂ ಐದು ಜನ ಆಟಗಾರರನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ.

PREV
16
ಐಪಿಎಲ್ 2025ರಲ್ಲಿ RR ಕಳಪೆ ಪ್ರದರ್ಶನ

ಐಪಿಎಲ್ 2025 ರಾಜಸ್ಥಾನ ರಾಯಲ್ಸ್‌ಗೆ ನಿರಾಸೆ ತಂದಿತು. 14 ಪಂದ್ಯಗಳಲ್ಲಿ ಕೇವಲ 8 ಅಂಕಗಳೊಂದಿಗೆ 9ನೇ ಸ್ಥಾನ ಪಡೆಯಿತು. ಪ್ಲೇ ಆಫ್ ತಲುಪಲಿಲ್ಲ. ಹೀಗಾಗಿ, 2026ರಲ್ಲಿ ದೊಡ್ಡ ಬದಲಾವಣೆಗಳಿಗೆ ತಂಡ ಸಜ್ಜಾಗಿದೆ. ಪ್ರಮುಖ ಆಟಗಾರರು ತಂಡ ಬಿಡಬಹುದು.

26
ಸಂಜು RR ಬಿಡ್ತಾರ?

ನಾಯಕ ಸಂಜು ತಂಡ ಬಿಡುವ ಬಗ್ಗೆ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಎಂದು ವರದಿಗಳಿವೆ. ESPN ವರದಿಯಂತೆ, ಐಪಿಎಲ್ 2025 ಮುಗಿದ ನಂತರ ಸಂಜು ತಮ್ಮನ್ನು ಬಿಡುಗಡೆ ಮಾಡಲು ಅಥವಾ ವರ್ಗಾವಣೆ ಮಾಡಲು ಕೇಳಿದ್ದಾರಂತೆ. RR ಜೊತೆ ಸಂಬಂಧ ಹಳಸಿದೆ ಎನ್ನಲಾಗಿದೆ.

36
ತುಷಾರ್ ದೇಶಪಾಂಡೆ

6.50 ಕೋಟಿಗೆ ತುಷಾರನ್ನ ಖರೀದಿಸಿದ RRಗೆ ನಿರಾಸೆ. 10 ಪಂದ್ಯಗಳಲ್ಲಿ ಕೇವಲ 9 ವಿಕೆಟ್ ಮಾತ್ರ ಪಡೆದರು. 10.62 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು.  

46
ಶಿಮ್ರಾನ್ ಹೆಟ್ಮೇಯರ್

11 ಕೋಟಿಗೆ ಉಳಿಸಿಕೊಂಡ ಶಿಮ್ರಾನ್ ಹೆಟ್ಮೇಯರ್ ನಿರೀಕ್ಷೆ ಹುಸಿ ಮಾಡಿದರು. 14 ಪಂದ್ಯಗಳಲ್ಲಿ 21.72 ಸರಾಸರಿಯಲ್ಲಿ ಕೇವಲ 239 ರನ್ ಗಳಿಸಿದ್ದರು. ಹೀಗಾಗಿ ರಾಯಲ್ಸ್‌ ಹೆಟ್ಮೇಯರ್‌ಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.

56
ವನಿಂದು ಹಸರಂಗ

5.25 ಕೋಟಿಗೆ ಖರೀದಿಸಿದ ಹಸರಂಗದಿಂದ RRಗೆ ನಿರಾಸೆ ಎದುರಾಯಿತು. 11 ಪಂದ್ಯಗಳಲ್ಲಿ 9.04 ಎಕನಮಿಯಲ್ಲಿ ರನ್ ನೀಡಿ ಕೇವಲ 11 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಹಸರಂಗಗೆ ಗೇಟ್‌ಪಾಸ್ ಸಿಗುವ ಸಾಧ್ಯತೆಯಿದೆ.

66
ಫಜಲ್ಹಾಕ್ ಫಾರೂಕಿ

2 ಕೋಟಿಗೆ ಖರೀದಿಸಿದ ಫಾರೂಕಿ 5 ಪಂದ್ಯಗಳಲ್ಲಿ ವಿಕೆಟ್ ಪಡೆಯಲಿಲ್ಲ. ಹೀಗಾಗಿ ಆಫ್ಘಾನ್ ಮೂಲದ ವೇಗಿಗೆ ಬಿಡುಗಡೆ ಖಚಿತ.

Read more Photos on
click me!

Recommended Stories