ಆ್ಯಂಕರ್ ಮದ್ವೆಯಾದ ಜಸ್ಪ್ರೀತ್ ಬುಮ್ರಾ ಮಡದಿ ಮಿಸ್ ಇಂಡಿಯಾ ಫೈನಲಿಸ್ಟ್!

First Published | Dec 8, 2023, 4:59 PM IST

ಟೀಮ್‌ ಇಂಡಿಯಾದ ಬೌಲರ್‌ ಜಸ್‌ಪ್ರೀತ್  ಬುಮ್ರಾ (Jasprit Bumrah) ಇತ್ತೀಚೆಗೆ 30ನೇ ವರ್ಷದ ಹುಟ್ಟಿದಬ್ಬ ಆಚರಿಸಿಕೊಂಡರು. ಈ ಸಂಧರ್ಭದಲ್ಲಿ ಅವರ ಪತ್ನಿ ಸಂಜನಾ ಗಣೇಶ್‌ (Sanjana Ganesan) ಅವರು ಹಂಚಿಕೊಂಡ ಪೋಸ್ಟ್ ಹೃದಯಸ್ಪರ್ಶಿಯಾಗಿದೆ. ಸಂಜನಾ ಗಣೇಶನ್ ಅವರು ಜಸ್ಪ್ರೀತ್ ಬುಮ್ರಾ ಅವರ ಜನ್ಮದಿನದಂದು ಪೋಸ್ಟ್ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ
.

ಖ್ಯಾತ ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರು ತಮ್ಮ ಪತಿ ಜಸ್ಪ್ರೀತ್ ಬುಮ್ರಾ ಅವರ 30 ನೇ ಹುಟ್ಟುಹಬ್ಬದಂದು ಅವರ ಬಗ್ಗೆ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋಗಳ ಸರಣಿಯನ್ನು ಹಂಚಿಕೊಂಡಿದ್ದಾರೆ.

ವೇಗಿ ಬುಮ್ರಾ ಅವರ 30 ನೇ ಹುಟ್ಟುಹಬ್ಬದ ಮಹತ್ವದ ಮೈಲಿಗಲ್ಲಿನಲ್ಲಿ, ಪತ್ನಿ ಸಂಜನಾ ಇನ್‌ಸ್ಟಾಗ್ರಾಮ್‌ ಪೋಸ್ಟ್ ಮೂಲಕ ತಮ್ಮ ಭಾವನೆಗಳನ್ನು ತಿಳಿಸಿದ್ದಾರೆ.

Tap to resize

'ನಾವು ಒಟ್ಟಿಗೆ ಇರುವಾಗ ಸಂತೋಷದ ಕ್ಷಣಗಳು ಅತೀತ ಮತ್ತು ಒಳ್ಳೆಯದಲ್ಲದ ಕ್ಷಣಗಳು ಕೆಟ್ಟದ್ದಲ್ಲ ಎಂದು ಭಾವಿಸುತ್ತೇನೆ. ಪ್ರತಿ ನಗು, ಪ್ರತಿ ಕಣ್ಣೀರು, ಪ್ರತಿ ಸಂತೋಷ, ಎಲ್ಲವೂ, ದೊಡ್ಡದು ಅಥವಾ ಚಿಕ್ಕದು, ನಿಮ್ಮೊಂದಿಗೆ, ಯಾವಾಗಲೂ ಪ್ರೀತಿ. ನಾನು ನಿಮ್ಮೊಂದಿಗೆ ಜೀವನವನ್ನು ಪ್ರೀತಿಸುತ್ತೇನೆ, ಜನ್ಮದಿನದ ಶುಭಾಶಯಗಳು' ಎಂದು ಸಂಜನಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ವಿಶಿಷ್ಟವಾದ ಬೌಲಿಂಗ್‌ಶೈಲಿ ಹೊಂದಿರುವ ಬಲಗೈ ವೇಗದ ಬೌಲರ್, ಬುಮ್ರಾ ಪ್ರಸ್ತುತ ವಿಶ್ವದ ಅತ್ಯುತ್ತಮ ಸೀಮಿತ ಓವರ್ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

6 ಡಿಸೆಂಬರ್ 1993ರಲ್ಲಿ ಜನಿಸಿದ ಜಸ್‌ಪ್ರೀತ್  ಬುಮ್ರಾ  ಅಂತಾರಾಷ್ಟ್ರೀಯ ಕ್ರಿಕೆಟಿಗ. ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಆಟದ ಎಲ್ಲಾ ಸ್ವರೂಪಗಳಲ್ಲಿ ಆಡುತ್ತಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ ಗುಜರಾತ್ ಮತ್ತು ಮುಂಬೈ ಇಂಡಿಯನ್ಸ್‌ಗಾಗಿ ಆಡುತ್ತಾರೆ.

ಪ್ರಸ್ತುತ ಕ್ರಿಕೆಟ್ ಪೀಳಿಗೆಯ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ಜಸ್ಪ್ರೀತ್ ಬುಮ್ರಾ ಅವರು 30 ಟೆಸ್ಟ್, 89 ODIಗಳು ಮತ್ತು 62 T20I ಗಳೊಂದಿಗೆ ಕ್ರಮವಾಗಿ 128, 149 ಮತ್ತು 74 ವಿಕೆಟ್‌ಗಳನ್ನು ಗಳಿಸುವ ಮೂಲಕ ಪ್ರಭಾವ ದಾಖಲೆ ಹೊಂದಿದ್ದಾರೆ.

ಬುಮ್ರಾ ಮತ್ತು ಸಂಜನಾ ಅವರ ವೈವಾಹಿಕ ಪ್ರಯಾಣ ಮಾರ್ಚ್ 2021 ರಲ್ಲಿ ಗೋವಾದಲ್ಲಿ ಪ್ರಾರಂಭವಾಯಿತು.ಈ ದಂಪತಿಗೆ  ಒಬ್ಬ ಮಗ ಇದ್ದಾನೆ.

ಮಹಾರಾಷ್ಟ್ರದ ಪುಣೆಯ ಸಂಜನಾ  ಗಣೇಶನ್ ಅವರು ಮಾಜಿ ಮಿಸ್ ಇಂಡಿಯಾ  ಫೈನಲಿಸ್ಟ್. 2014 ರಲ್ಲಿ MTV ಯ ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಭಾಗವಹಿಸಿದ್ದರು.

ಬುಮ್ರಾ ಅವರ ಜನ್ಮದಿನದ ಜೊತೆಗೆ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್, ಆರ್‌ಪಿ ಸಿಂಗ್, ಗ್ಲೆನ್ ಫಿಲಿಪ್ಸ್, ಆಂಡ್ರ್ಯೂ ಫ್ಲಿಂಟಾಫ್ ಮತ್ತು ಕರುಣ್ ನಾಯರ್ ಸೇರಿದಂತೆ ಇತರ ಕ್ರಿಕೆಟ್ ಆಟಗಾರರು ಡಿಸೆಂಬರ್ 6ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

Latest Videos

click me!