ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 10,000 ರನ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು..!

First Published Jun 2, 2021, 5:36 PM IST

ಬೆಂಗಳೂರು: ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳ ಪಾಲಿಗೆ ಟೆಸ್ಟ್ ಕ್ರಿಕೆಟ್ ಸಾಕಷ್ಟು ಸವಾಲಿನ ಕ್ರಿಕೆಟ್ ಮಾದರಿ ಎನಿಸಿದೆ. ಸಾಂಪ್ರದಾಯಿಕ ಕ್ರಿಕೆಟ್ ಮೂಲಕ ಇಡೀ ಕ್ರಿಕೆಟ್‌ ಆಳಿದ ಕೆಲವು ದಿಗ್ಗಜ ಆಟಗಾರರನ್ನು ನಾವು ಕಂಡಿದ್ದೇವೆ. ಸಾಕಷ್ಟು ಯುವ ಕ್ರಿಕೆಟಿಗರು ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಬಾರಿಸುವ ಕನಸು ಕಾಣುತ್ತಿದ್ದಾರೆ. ಈ ಸಂದರ್ಭದಲ್ಲಿ ಅತಿವೇಗವಾಗಿ 10 ಸಾವಿರ ರನ್ ಬಾರಿಸಿದ ಟಾಪ್ ಆಟಗಾರರ ಪರಿಚಯ ಇಲ್ಲಿದೆ ನೋಡಿ.

5. ರಾಹುಲ್ ದ್ರಾವಿಡ್: ಭಾರತ-206 ಇನಿಂಗ್ಸ್
undefined
ದ ವಾಲ್ ಖ್ಯಾತಿಯ ದ್ರಾವಿಡ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 13,288 ರನ್ ಬಾರಿಸಿದ್ದಾರೆ. ಇದರಲ್ಲಿ 36 ಶತಕ ಹಾಗೂ 63 ಅರ್ಧಶತಕಗಳು ಸೇರಿವೆ. ಇನ್ನು ದ್ರಾವಿಡ್ 206 ಇನಿಂಗ್ಸ್‌ಗಳನ್ನಾಡಿ 10 ಸಾವಿರ ರನ್ ಪೂರೈಸಿದ್ದಾರೆ.ದ ವಾಲ್ ಖ್ಯಾತಿಯ ದ್ರಾವಿಡ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 13,288 ರನ್ ಬಾರಿಸಿದ್ದಾರೆ. ಇದರಲ್ಲಿ 36 ಶತಕ ಹಾಗೂ 63 ಅರ್ಧಶತಕಗಳು ಸೇರಿವೆ. ಇನ್ನು ದ್ರಾವಿಡ್ 206 ಇನಿಂಗ್ಸ್‌ಗಳನ್ನಾಡಿ 10 ಸಾವಿರ ರನ್ ಪೂರೈಸಿದ್ದಾರೆ.
undefined
4. ರಿಕಿ ಪಾಂಟಿಂಗ್: ಆಸ್ಟ್ರೇಲಿಯಾ- 196 ಇನಿಂಗ್ಸ್
undefined
ಆಸ್ಟ್ರೇಲಿಯಾ ಮಾಜಿ ನಾಯಕ ಪಾಂಟಿಂಗ್ 13, 778 ರನ್‌ ಬಾರಿಸಿದ್ದಾರೆ. ಇದರಲ್ಲಿ 41 ಶತಕ ಹಾಗೂ 62 ಅರ್ಧಶತಕಗಳು ಸೇರಿವೆ. 196 ಇನಿಂಗ್ಸ್‌ಗಳನ್ನಾಡಿ ಪಾಂಟಿಂಗ್ 10 ಸಾವಿರ ರನ್ ಪೂರೈಸಿ ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
undefined
3. ಕುಮಾರ ಸಂಗಕ್ಕರ: ಶ್ರೀಲಂಕಾ- 195 ಇನಿಂಗ್ಸ್
undefined
ಲಂಕಾ ದಿಗ್ಗಜ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಗಕ್ಕರ ಅತಿವೇಗವಾಗವಾಗಿ 10 ಸಾವಿರ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಹೊಂದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 12,400 ರನ್‌ ಬಾರಿಸಿರುವ ಸಂಗಾ, 195 ಇನಿಂಗ್ಸ್‌ಗಳನ್ನಾಡಿ ಹತ್ತು ಸಾವಿರ ರನ್‌ ಪೂರೈಸಿದ್ದಾರೆ.
undefined
2. ಸಚಿನ್ ತೆಂಡುಲ್ಕರ್: ಭಾರತ- 195 ಇನಿಂಗ್ಸ್
undefined
ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಸಹಾ 195 ಇನಿಂಗ್ಸ್‌ಗಳನ್ನಾಡಿ 10 ಸಾವಿರ ರನ್‌ ಪೂರೈಸಿ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅಂದಹಾಗೆ ಸಚಿನ್ ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳನ್ನಾಡಿದ ಮೊದಲ ಹಾಗೂ ಏಕೈಕ ಆಟಗಾರ ಕೂಡಾ ಹೌದು.
undefined
1. ಬ್ರಿಯನ್ ಲಾರಾ: ವೆಸ್ಟ್ ಇಂಡೀಸ್‌- 195
undefined
ವಿಂಡೀಸ್‌ ಕ್ರಿಕೆಟ್‌ ಸಾಮ್ರಾಟ ಬ್ರಿಯನ್ ಲಾರಾ ಕೂಡಾ ಕೇವಲ 195 ಇನಿಂಗ್ಸ್‌ಗಳನ್ನಾಡಿ 10 ಸಾವಿರ ರನ್‌ ಬಾರಿಸಿ ಜಂಟಿ ಅಗ್ರಸ್ಥಾನ ಹೊಂದಿದ್ದಾರೆ. ಲಾರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಜೇಯ 400 ರನ್‌(ವೈಯುಕ್ತಿಕ ಗರಿಷ್ಠ ಸ್ಕೋರ್) ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
undefined
click me!