ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ ಚಚ್ಚಿದ ಟಾಪ್ 5 ಬ್ಯಾಟ್ಸ್‌ಮನ್‌ಗಳಿವರು..!

First Published Jun 1, 2021, 5:01 PM IST

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಟಿ20 ಕ್ರಿಕೆಟ್‌ ಮಾದರಿಯಲ್ಲಿ ಕೆಲವೊಂದು ಕ್ರಾಂತಿಕಾರಕ ಬದಲಾವಣೆಗಳಾಗಿರುವುದನ್ನು ಗಮನಿಸಿದ್ದೇವೆ. ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳ ಹೊಸ ಹೊಸ ಕೌಶಲ್ಯಗಳನ್ನು ಮೆರೆಯುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಾ ಬಂದಿದ್ದಾರೆ. ಹೊಡಿಬಡಿಯಾಟಕ್ಕೆ ಹೆಸರಾದ ಟಿ20 ಪಂದ್ಯಗಳಲ್ಲಿ ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಯನ್ನು ಕಂಡಿದ್ದೇವೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬೌಲರ್‌ಗಳೆದುರು ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಟಾಪ್ 5 ಸ್ಪೋಟಕ ಬ್ಯಾಟ್ಸ್‌ಮನ್‌ಗಳ ವಿವರವನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ
(* ಈ ಅಂಕಿ ಅಂಶ: ಜೂನ್‌ 01,2021ರವರೆಗೆ ಮಾತ್ರ)
 

5. ಕ್ರಿಸ್‌ ಗೇಲ್‌: ವೆಸ್ಟ್ ಇಂಡೀಸ್‌- 106 ಸಿಕ್ಸರ್‌
undefined
ಯೂನಿವರ್ಸಲ್‌ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌ ವೆಸ್ಟ್ ಇಂಡೀಸ್‌ ಪರ 57 ಇನಿಂಗ್ಸ್‌ಗಳನ್ನಾಡಿ 106 ಸಿಕ್ಸರ್ ಚಚ್ಚಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ.
undefined
4. ಕಾಲಿನ್ ಮನ್ರೊ: ನ್ಯೂಜಿಲೆಂಡ್- 107 ಸಿಕ್ಸರ್
undefined
ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ ಕಾಲಿನ್ ಮನ್ರೊ 62 ಇನಿಂಗ್ಸ್‌ಗಳನ್ನಾಡಿ 107 ಸಿಕ್ಸರ್ ಚಚ್ಚಿ, ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
undefined
3. ಇಯಾನ್ ಮಾರ್ಗನ್‌: ಇಂಗ್ಲೆಂಡ್‌- 113 ಸಿಕ್ಸರ್
undefined
ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಮಾರ್ಗನ್‌ 102 ಪಂದ್ಯಗಳನ್ನಾಡಿ 113 ಸಿಕ್ಸರ್ ಚಚ್ಚಿದ್ದಾರೆ. ಮಾರ್ಗನ್‌ ಇಂಗ್ಲೆಂಡ್ ತಂಡದ ಪರ 100 ಟಿ20 ಪಂದ್ಯಗಳನ್ನಾಡಿದ ಮೊದಲ ಆಟಗಾರ ಕೂಡಾ ಹೌದು.
undefined
2. ರೋಹಿತ್ ಶರ್ಮಾ: ಭಾರತ- 133 ಸಿಕ್ಸರ್
undefined
ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಭಾರತ 103 ಇನಿಂಗ್ಸ್‌ಗಳನ್ನಾಡಿ 133 ಸಿಕ್ಸರ್‌ ಚಚ್ಚುವ ಮೂಲಕ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
undefined
1. ಮಾರ್ಟಿನ್‌ ಗಪ್ಟಿಲ್‌: ನ್ಯೂಜಿಲೆಂಡ್- 147 ಸಿಕ್ಸರ್
undefined
ನ್ಯೂಜಿಲೆಂಡ್ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ 98 ಇನಿಂಗ್ಸ್‌ಗಳನ್ನಾಡಿ 147 ಸಿಕ್ಸರ್ ಸಿಡಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ಕೇವಲ 3 ಸಿಕ್ಸರ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಲಿದ್ದಾರೆ.
undefined
click me!