ಕೊರೋನಾ ವೈರಸ್ ವಿರುದ್ಧ ಹೋರಾಟ; ಸರ್ಕಾರಕ್ಕೆ 50 ಲಕ್ಷ ರೂ ನೀಡಿದ ಸಚಿನ್ ತೆಂಡುಲ್ಕರ್!

First Published | Mar 27, 2020, 2:41 PM IST

ಕೊರೋನಾ ವೈರಸ್ ತಡೆಯಲು ಭಾರತವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಲಾಗಿದೆ. ಇದು ಸರ್ಕಾರದ ಬೊಕ್ಕಸ ಅತೀ ದೊಡ್ಡ ಹೊಡೆತವಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ಕೊರೋನಾ ಸೋಂಕಿತರ ಚಿಕಿತ್ಸೆ, ವೈರಸ್ ಹರಡದಂತೆ ತಡೆಯಲು ಕ್ರಮ ಹಾಗೂ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಕಾರ್ಯಗಳಿಗೆ ಕೋಟಿ ಕೋಟಿ ಹಣ ಖರ್ಚಾಗಲಿದೆ. ಇದೀಗ ಕೊರೋನಾ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಹಲವರು ಕೈಜೋಡಿಸಿದ್ದಾರೆ. ಪಿವಿ ಸಿಂಧು ಬೆನ್ನಲ್ಲೇ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹಾಯ ಹಸ್ತ ಚಾಚಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬೆನ್ನಲ್ಲೇ ಸರ್ಕಾರಕ್ಕೆ ಹಣ ದೇಣಿಗೆ ನೀಡಿದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್
undefined
ಕೊರೋನಾ ವೈರಸ್ ವಿರದ್ಧದ ಹೋರಾಟಕ್ಕೆ ಒಟ್ಟು 50 ಲಕ್ಷ ರೂಪಾಯಿ ನೀಡಿದ ಮಾಸ್ಟರ್ ಬ್ಲಾಸ್ಟರ್
undefined

Latest Videos


ಕೊರೋನಾ ವೈರಸ್ ತಡೆಯಲು ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಸಚಿನ್
undefined
ಪ್ರಧಾನಿ ಮೋದಿ ಮನವಿಯನ್ನು ಬೆಂಬಲಿಸಿ ಅಭಿಮಾನಿಗಳಲ್ಲಿ ಮನೆಯಿಂದ ಹೊರಬರದಂತೆ ಮನವಿ ಮಾಡಿದ್ದ ಸಚಿನ್
undefined
ವಿಶ್ವ ಆರೋಗ್ಯ ಸಂಸ್ಥೆ ಸಹಭಾಗಿತ್ವದಲ್ಲಿ ಶುಚಿತ್ವ ಅಭಿಯಾನದಲ್ಲಿ ಹಲವು ವರ್ಷಗಳಿಂದ ಸಚಿನ್ ತೊಡಗಿಸಿಕೊಂಡಿದ್ದಾರೆ
undefined
ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರಕ್ಕೆ ಬೆಂಬಲ ನೀಡಿದ ಕ್ರಿಕೆಟಿಗರು, ಕ್ರೀಡಾ ತಾರೆಯರು
undefined
ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರ ಒಟ್ಟು 10 ಲಕ್ಷ ರೂಪಾಯಿ ನೀಡಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು
undefined
ಯೂಸುಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ಬರೋಡಾದಲ್ಲಿ ಪೊಲೀಸರಿಗೆ 4000 ಮಾಸ್ಕ್ ಉಚಿತವಾಗಿ ವಿತರಿಸಿದ್ದಾರೆ
undefined
ರಸ್ಲರ್ ಭಜರಂಗ್ ಪೂನಿಯಾ, ಅಥ್ಲೀಟ್ ಹಿಮಾ ದಾಸ್ ತಮ್ಮ ವೇತನವನ್ನು ಸರ್ಕಾರದ ತುರ್ತು ನಿಧಿಗೆ ನೀಡಿದ್ದಾರೆ
undefined
click me!