ಕೊಹ್ಲಿ, ಧೋನಿ ಬಳಿ ಇಲ್ಲ, ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರ ಬಳಿ ಇದೆ ಲ್ಯಾಂಬೋರ್ಗಿನಿ ಉರುಸ್!

Published : Aug 28, 2023, 12:55 PM IST

ಕೊಹ್ಲಿ, ಧೋನಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರ ಬಳಿ ಐಷಾರಾಮಿ ಕಾರುಗಳಿವೆ. ಆದರೆ ಲ್ಯಾಂಬೋರ್ಗಿನಿ ಉರುಸ್ ಎಸ್ ಕಾರು ಇಬ್ಬರಲ್ಲಿ ಮಾತ್ರವಿದೆ. ಅದರಲ್ಲೂ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಲ್ಯಾಂಬೋರ್ಗಿನಿ ಉರುಸ್ ಎಸ್ ಐಷಾರಾಮಿ ಕಾರು ಖರೀದಿಸಿದ ಹೆಗ್ಗಳಿಕೆ ಯಾರ ಪಾಲಾಗಿದೆ?

PREV
18
ಕೊಹ್ಲಿ, ಧೋನಿ ಬಳಿ ಇಲ್ಲ, ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರ ಬಳಿ ಇದೆ ಲ್ಯಾಂಬೋರ್ಗಿನಿ ಉರುಸ್!

ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರ ಬಳಿ ಹಲವು ಐಷಾರಾಮಿ ಕಾರುಗಳಿವೆ. ರೋಲ್ಸ್ ರಾಯ್ಸ್, BMW, ಆಡಿ, ಮರ್ಸಡೀಸ್ ಬೆಂಜ್ ಸೇರಿದಂತೆ ದುಬಾರಿ ಕಾರುಗಳು ಕ್ರಿಕೆಟಿಗರ ಬಳಿ ಇದೆ.
 

28

ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಲ್ಯಾಂಬೋರ್ಗಿನಿ ಉರುಸ್ ಕಾರು ಹೊಂದಿರುವ ಕ್ರಿಕೆಟಿಗರು ಕೇವಲ ಇಬ್ಬರು ಮಾತ್ರ. ರೋಹಿತ್ ಶರ್ಮಾ ಹಾಗೂ ಸಚಿನ್ ತೆಂಡುಲ್ಕರ್ ಲ್ಯಾಂಬೋರ್ಗಿನಿ ಉರುಸ್ ಕಾರು ಮಾಲೀಕರಾಗಿದ್ದರೆ. 
 

38

ರೋಹಿತ್ ಹಾಗೂ ಸಚಿನ್ ಹೊರತುಪಡಿಸಿದರೆ ಇನ್ನುಳಿದ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಲ್ಯಾಂಬೋರ್ಗಿನಿ ಉರುಸ್ ಕಾರಿಲ್ಲ. ಧೋನಿ ಬಳಿ ಹಲವು ಕಾರುಗಳಿದ್ದರೂ ಲ್ಯಾಂಬೋರ್ಗಿನಿ ಇಲ್ಲ.
 

48

2022ರಲ್ಲಿ ರೋಹಿತ್ ಶರ್ಮಾ ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಆದರೆ ಸಚಿನ್ ತೆಂಡುಲ್ಕರ್ ಐಷರಾಮಿ ಹಾಗೂ ಅಪ್‌ಡೇಟ್ ವರ್ಶನ್ ಲ್ಯಾಂಬೋರ್ಗಿನಿ ಉರುಸ್ ಎಸ್ ಕಾರನ್ನು 2023ರಲ್ಲಿ ಖರೀದಿಸಿದ್ದಾರೆ.

58

ಸಚಿನ್ ಖರೀದಿಸಿರುವ ಲ್ಯಾಂಬೋರ್ಗಿನಿ ಉರುಸ್ ಎಸ್ ಕಾರಿನ ಎಕ್ಸ್ ಶೋ ರೂಂ ಬೆಲೆ 4.2 ಕೋಟಿ ರೂಪಾಯಿ. ದುಬಾರಿ ಮೊತ್ತದ ಕಾರು ಹಾಗೂ ಲ್ಯಾಂಬೋರ್ಗಿನಿ ಉರುಸ್ ಐಷಾರಾಮಿ ಕಾರು ಹೊಂದಿದ ಕೀರ್ತಿಗೆ ಸಚಿನ್ ಪಾತ್ರರಾಗಿದ್ದಾರೆ.

68

ಸಚಿನ್ ತೆಂಡುಲ್ಕರ್ ಬಳಿ BMW i8, BMM M6ಗ್ರ್ಯಾನ್ ಕೂಪ್, BMW M5, ಫೆರಾರಿ 360 ಮಾಡೆನಾ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಇತ್ತೀಚೆಗೆ ಸಚಿನ್ ತೆಂಡುಲ್ಕರ್ ದುಬಾರಿ ಕಾರುಗಳಲ್ಲಿ ಕಾಣಿಸಿಕೊಂಡಿದ್ದರು.
 

78

ರೋಹಿತ್ ಶರ್ಮಾ ಬಳಿ ಲ್ಯಾಂಬೋರ್ಗಿನಿ ಜೊತೆಗೆ ಮರ್ಸೀಡಿಸ್ ಬೆಂಜ್ GLS 400d, BMW X3, BMW M5, ಆಡಿ ಎ6 ಸೇರಿದಂತೆ ಹಲವು ಐಷರಾಮಿ ಕಾರುಗಳಿವೆ.

88

ಧೋನಿ ಬಳಿ ಐಷಾರಾಮಿ ಕಾರುಗಳಿಗಿಂತ ಹೆಚ್ಚಾಗಿ ವಿಂಟೇಜ್ ಕಾರು ಹಾಗೂ ಬೈಕ್ ಕಲೆಕ್ಷನ್ ಇವೆ. ಧೋನಿ ಕಾರಿಗಿಂತ ಹೆಚ್ಚು ಬೈಕ್ ಇಷ್ಟಪಡುತ್ತಾರೆ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories