ಪಶ್ಚಿಮ ಬಂಗಾಳದಲ್ಲಿ ಕ್ಷಿಪ್ರ ಬೆಳವಣಿಗೆ; ರಾಜ್ಯಪಾಲರ ಭೇಟಿ ಮಾಡಿದ ಸೌರವ್ ಗಂಗೂಲಿ!

First Published | Dec 27, 2020, 5:34 PM IST

ಕಳೆದ ಕೆಲ ತಿಂಗಳುಗಳಿಂದ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆ, ಗುದ್ದಾಟಗಳು ತಾರಕಕ್ಕೇರಿದೆ. ಜೆಪಿ ನಡ್ಡಾ ಬೆಂಗಾವಲು ಪಡೆ ಮೇಲೆ ದಾಳಿ,  ಅಮಿತ್ ಶಾ ಭೇಟಿ, ತೃಣಮೂಲ ಕಾಂಗ್ರೆಸ್ ನಾಯಕು ಬಿಜೆಪಿ ಸೇರ್ಪಡೆ ಸೇರಿದಂತೆ ಹಲವು ಘಟನೆಗಳು ನಡೆದಿವೆ. ಇದೀಗ ಮತ್ತೊಂದು ಕುತೂಹಲ ಕಾರಿ ಘಟನೆ ನಡೆದಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನಡುವೆ ನೇರಾ ನೇರಾ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಕುರಿತು ಈಗಾಗಲೇ ಹಲವು ಘಟನೆಗಳು ನಡೆದಿದೆ. ಇದೀಗ ಮತ್ತೊಂದು ಕ್ಷಿಪ್ರ ಬೆಳವಣಿಗೆಯಾಗಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದಿಢೀರ್ ಆಗಿ ಬಂಗಾಳ ರಾಜ್ಯಪಾಲ ಜಗದೀಪ್ ದನ್ಕರ್ ಭೇಟಿಯಾಗಿದ್ದಾರೆ. ಇದು ಈ ಭೇಟಿಯಿಂದ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
Tap to resize

2021ರ ಪಶ್ಚಿಮ ಬಂಗಾಳ ಚುನಾವಣೆ ಬೆನ್ನಲ್ಲೇ ಸೌರವ್ ಗಂಗೂಲಿ, ರಾಜ್ಯಪಾಲರ ಭೇಟಿ ಮಹತ್ವದ ಪಡೆದುಕೊಂಡಿದೆ. ಗಂಗೂಲಿ ಭೇಟಿ ಸ್ಪಷ್ಟ ಕಾರಣಗಳು ಲಭ್ಯವಾಗಿಲ್ಲ.
ಇತ್ತೀಚೆಗೆ ಬಂಗಾಳ ಮಾಧ್ಯಮಗಳು ಸೌರವ್ ಗಂಗೂಲಿ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿತ್ತು. ಇದೇ ವೇಳೆ ಕಲ ಮಾಧ್ಯಮಗಲು ಕ್ರಿಕೆಟ್ ಆಡಳಿತದಲ್ಲಿ ಗಂಗೂಲಿ ಮುಂದುವರಿಯಲಿದ್ದಾರೆ. ರಾಜಕೀಯದತ್ತ ಹೆಜ್ಜೆ ಹಾಕುವ ಸಾಧ್ಯತೆ ಕಡಿಮೆ ಎಂದಿತ್ತು.
ಕಳೆದ ವರ್ಷ ಸೌರವ್ ಗಂಗೂಲಿ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭೇಟಿಯಾಗಿದ್ದರು. ಈ ಭೇಟಿ ಬಳಿಕ ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆ ಕುರಿತು ಮಾತುಗಳು ಕೇಳಿ ಬಂದಿತ್ತು.
ಬಿಸಿಸಿಐ ಕುರಿತು ಮಾತುಕತೆ ನಡೆಸಿದ್ದೇವೆ. ಆದರೆ ಇದು ರಾಜಕೀಯ ಭೇಟಿ ಅಲ್ಲ ಎಂದು ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದರು. ಇದೀಗ ದಿಢೀರ್ ರಾಜ್ಯಪಾಲರ ಬೇಟಿಯಿಂದ ಮುಂಬರುವ ಚುನಾವಣೆ ಕುತೂಹಲ ಮತ್ತಷ್ಟು ಗರಿಗೆದರಿದೆ.
ರಾಜ್ಯಪಾಲರ ಭೇಟಿಗಾಗಿ ಈಗಾಗಲೇ ರಾಜಭನಕ್ಕೆ ತೆರಳಿರುವ ಸೌರವ್ ಗಂಗೂಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಮುಂಬರುವ ಚುನಾವಣೆ ಸೇರಿದಂತೆ ಹಲವು ವಿಚಾರಗಳು ಇದೀಗ ಮತ್ತೆ ಚರ್ಚೆಯಾಗುತ್ತಿದೆ.
2021ರ ವಿಧಾನಾ ಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. 200 ಸ್ಥಾನ ಗೆಲ್ಲುವ ನಿರ್ಣಯ ಮಾಡಿದೆ. ಇದರ ನಡುವೆ ಗಂಗೂಲಿ ಗರ್ವನ್ ಭೇಟಿ ಸಹಜವಾಗಿ ಅನುಮಾನಕ್ಕೆ ಕಾರಣವಾಗಿದೆ.

Latest Videos

click me!