ರೋಹಿತ್ ಶರ್ಮಾ ತೆಗೆದುಕೊಂಡ ಆ ಒಂದು ಕೆಟ್ಟ ನಿರ್ಧಾರದಿಂದ 36 ವರ್ಷಗಳ ಬಳಿಕ ಭಾರತಕ್ಕೆ ಸೋಲಾಗುತ್ತಾ?

First Published | Oct 20, 2024, 11:13 AM IST

ಬೆಂಗಳೂರು ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತೆಗೆದುಕೊಂಡ ದೊಡ್ಡ ನಿರ್ಧಾರ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಅದೇನು, ಅದರಿಂದ ಏನು ಪರಿಣಾಮ ಅನ್ನೋದನ್ನ ನೋಡೋಣ.

36 ವರ್ಷಗಳ ಹಿಂದೆ 1988 ರಲ್ಲಿ ಭಾರತ ನೆಲದಲ್ಲಿ ನ್ಯೂಜಿಲೆಂಡ್ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಮತ್ತೊಮ್ಮೆ ಭಾರತದ ಮೇಲೆ ಬೆಂಗಳೂರು ಟೆಸ್ಟ್​ನಲ್ಲಿ ಕಿವೀಸ್ ಗೆಲ್ಲುವಂತೆ ಕಣಕ್ಕಿಳಿದಿದೆ. ಆದರೆ, ಪಂದ್ಯದ ವಿಷಯದಲ್ಲಿ ರೋಹಿತ್ ಶರ್ಮಾ ತೆಗೆದುಕೊಂಡ ದೊಡ್ಡ ನಿರ್ಧಾರ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. 

ಕ್ರಿಕೆಟ್ ಮೈದಾನದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದು ಹೊಸದೇನಲ್ಲ. ಹಲವು ಬಾರಿ ಗೆಲ್ಲಬಹುದಾದ ಪಂದ್ಯಗಳನ್ನು ಸೋತ ಉದಾಹರಣೆಗಳಿವೆ. ಅದೇ ರೀತಿ, ಸೋಲಬಹುದಾದ ಪಂದ್ಯಗಳು ಅನಿರೀಕ್ಷಿತವಾಗಿ ಗೆದ್ದ ಉದಾಹರಣೆಗಳೂ ಇವೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಬೆಂಗಳೂರು ಟೆಸ್ಟ್​ನಲ್ಲಿ ಭಾರತ ತಂಡದ ಜೊತೆ ಇದೇ ರೀತಿಯ ಘಟನೆ ನಡೆದಿದೆ.

Latest Videos


ಒಂದು ತಪ್ಪು ನಿರ್ಧಾರ ತಂಡಕ್ಕೆ ದೊಡ್ಡ ನಷ್ಟವನ್ನುಂಟು ಮಾಡುವಂತೆ ಕಾಣುತ್ತಿದೆ. ಈಗ ನಾಯಕ ರೋಹಿತ್ ಶರ್ಮಾ ತೆಗೆದುಕೊಂಡ ಒಂದು ದೊಡ್ಡ ನಿರ್ಧಾರ ತಪ್ಪು ಎಂದು ಭಾಸವಾಗುವುದರ ಜತೆಗೆ ಚರ್ಚೆಯ ವಿಷಯವಾಗಿದ್ದಾರೆ. ರೋಹಿತ್ ಶರ್ಮಾ ಹೀಗೆ ದೊಡ್ಡ ತಪ್ಪು ಮಾಡಿದ್ರು ಅಂತ ನಂಬೋಕೆ ಆಗ್ತಿಲ್ಲ. ನಿಜಕ್ಕೂ ಏನಾಯ್ತು ಅನ್ನೋದನ್ನ ನೋಡೋಣ…

ಕ್ರಿಕೆಟ್​ನಲ್ಲಿ ಅಥವಾ ಬೇರೆ ಯಾವುದೇ ಕ್ರೀಡೆಯಲ್ಲಿ ಕೆಲವೊಮ್ಮೆ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಕೆಲವೊಮ್ಮೆ ಅವು ತಪ್ಪಾಗಿರುತ್ತವೆ. ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್ ಪಂದ್ಯದಲ್ಲೂ ರೋಹಿತ್ ಶರ್ಮಾ ಅವರ ನಿರ್ಧಾರ ತಂಡಕ್ಕೆ ತಪ್ಪು ಎಂದು ಸಾಬೀತಾಯಿತು.

ಬೆಂಗಳೂರು ಪಿಚ್​ ಅನ್ನು ನಾಯಕ ತಪ್ಪಾಗಿ ಅಂದಾಜು ಮಾಡಿದ್ದರಿಂದ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದು ತಂಡಕ್ಕೆ ದೊಡ್ಡ ನಷ್ಟವನ್ನುಂಟುಮಾಡಿತು. ಇದು ತುಂಬಾ ದುಬಾರಿ ತಪ್ಪು ನಿರ್ಧಾರವಾಗಿ ಪರಿಣಮಿಸಿದೆ.

ಬೆಂಗಳೂರಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ರನ್ ಗಳಿಸುವಲ್ಲಿ ಸಂಪೂರ್ಣ ವಿಫಲವಾಯಿತು. ವಿಶ್ವ ಕ್ರಿಕೆಟ್​ನ ಟಾಪ್ -10 ಕಡಿಮೆ ಒಟ್ಟು ಸ್ಕೋರ್​ಗಳಲ್ಲಿ ಒಂದನ್ನು ದಾಖಲಿಸಿ ಕೇವಲ 46 ರನ್​ಗಳಿಗೆ ಆಲೌಟ್ ಆಯಿತು. ಭಾರತೀಯ ಬ್ಯಾಟ್ಸ್​ಮನ್​ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಬಂದಷ್ಟೇ ಬೇಗ ಪೆವಿಲಿಯನ್‌ಗೆ ವಾಪಾಸ್ಸಾಗಿದ್ದರು.

ಐದು ಭಾರತೀಯ ಬ್ಯಾಟ್ಸ್​ಮನ್​ಗಳು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದರಲ್ಲಿ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಸೇರಿದ್ದಾರೆ. ಭಾರತದ ಇನ್ನಿಂಗ್ಸ್ ಒಟ್ಟು 46 ರನ್​ಗಳಿಗೆ ಕುಸಿಯಿತು, ಈಗ ಅದೇ ಪಿಚ್​ನಲ್ಲಿ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 402 ರನ್​ಗಳ ಬೃಹತ್ ಸ್ಕೋರ್ ಗಳಿಸಿತು

ಭಾರತದ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರದಿಂದ 36 ವರ್ಷಗಳ ಕ್ರಿಕೆಟ್ ಇತಿಹಾಸ ಬದಲಾಗುವಂತೆ ಕಾಣುತ್ತಿದೆ. 

ಪಿಚ್​ ಅನ್ನು ಅಂದಾಜು ಮಾಡುವಲ್ಲಿ ತಪ್ಪು ಮಾಡಿದ್ದಾಗಿ ಸ್ವತಃ ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ. 36 ವರ್ಷಗಳ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡರೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ರೋಹಿತ್ ಶರ್ಮಾ ಅವರ ನಿರ್ಧಾರ ಭಾರತ ತಂಡಕ್ಕೆ ದೊಡ್ಡ ಹಿನ್ನಡೆ ಎಂಬುದರಲ್ಲಿ ಸಂದೇಹವಿಲ್ಲ.

ರೋಹಿತ್ ಶರ್ಮಾ ಅವರ ತಪ್ಪು ನಿರ್ಧಾರದಿಂದ ನ್ಯೂಜಿಲೆಂಡ್ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಆ ತಂಡದ ನಿರ್ಧಾರ ಈಗ 36 ವರ್ಷಗಳ ಇತಿಹಾಸವನ್ನು ಪುನಃ ಬರೆಯುತ್ತದೆ ಎಂಬ ಭರವಸೆಯನ್ನು ಮೂಡಿಸಿದೆ. ಹೌದು, ನ್ಯೂಜಿಲೆಂಡ್ ತಂಡವು ಭಾರತದ ನೆಲದಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆಲ್ಲುವ ಕನಸು ಕಾಣುತ್ತಿದೆ

ಭಾರತ vs ನ್ಯೂಜಿಲೆಂಡ್ 1ನೇ ಟೆಸ್ಟ್

ನ್ಯೂಜಿಲೆಂಡ್ ಕೊನೆಯದಾಗಿ 36 ವರ್ಷಗಳ ಹಿಂದೆ ಅಂದರೆ 1988 ರಲ್ಲಿ ಭಾರತ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಈಗ ಕಿವೀಸ್ ಮತ್ತೊಮ್ಮೆ ಭಾರತದಲ್ಲಿ ಭಾರತ ತಂಡದ ವಿರುದ್ಧ ಗೆಲ್ಲಲು ಎದುರು ನೋಡುತ್ತಿದೆ. ಪ್ರಸ್ತುತ ಬೆಂಗಳೂರು ಟೆಸ್ಟ್​ನಲ್ಲಿ ನ್ಯೂಜಿಲೆಂಡ್ ಬಲಿಷ್ಠ ಸ್ಥಿತಿಯಲ್ಲಿದೆ. 

ರೋಹಿತ್ ಶರ್ಮಾ vs ನ್ಯೂಜಿಲೆಂಡ್

ಬೆಂಗಳೂರು ಟೆಸ್ಟ್ ಪಂದ್ಯವನ್ನು ಗೆಲ್ಲಲು ನ್ಯೂಜಿಲೆಂಡ್‌ಗೆ ಕೊನೆಯ ದಿನ 107 ರನ್‌ಗಳ ಸ್ಪರ್ಧಾತ್ಮಕ ಗುರಿ ಸಿಕ್ಕಿದೆ. ಈ ಗುರಿಯನ್ನು ಕಿವೀಸ್ ಪಡೆ ಯಶಸ್ವಿಯಾಗಿ ಬೆನ್ನತ್ತಿ ಇತಿಹಾಸ ನಿರ್ಮಿಸುತ್ತದೆಯೋ ಅಥವಾ ಟೀಂ ಇಂಡಿಯಾ ಬೌಲರ್‌ಗಳು, ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಶಾಕ್ ನೀಡುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

click me!