ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಈಗಾಗಲೇ ಮೊಹಾಲಿ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಇದೀಗ ಸರಣಿ ಕ್ಲೀನ್ ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಲಿದೆ.
ರೋಹಿತ್ ಶರ್ಮಾ ಬೆಂಗಳೂರು ಟೆಸ್ಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಲಿದ್ದಾರೆ. ಅವರು ಭಾರತ ಪರ ಆಡಲಿರುವ 400ನೇ ಪಂದ್ಯ ಇದಾಗಲಿದೆ. 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು, ಈ ವರೆಗೂ 230 ಏಕದಿನ, 125 ಟಿ20, 44 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಭಾರತ ಪರ 400 ಪಂದ್ಯಗಳನ್ನು ಆಡಿದ 8ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ
28
ಈ ಮೊದಲು ಸಚಿನ್ ತೆಂಡುಲ್ಕರ್(664 ಪಂದ್ಯ), ಎಂ ಎಸ್ ಧೋನಿ(535), ರಾಹುಲ್ ದ್ರಾವಿಡ್(504), ವಿರಾಟ್ ಕೊಹ್ಲಿ(457), ಮೊಹಮ್ಮದ್ ಅಜರುದ್ದೀನ್(433), ಸೌರವ್ ಗಂಗೂಲಿ(421), ಅನಿಲ್ ಕುಂಬ್ಳೆ(401) ಈ ಸಾಧನೆ ಮಾಡಿದ್ದಾರೆ.
38
ಕೊಹ್ಲಿಯ 71ನೇ ಶತಕಕ್ಕೆ ಸಾಕ್ಷಿಯಾಗುತ್ತಾ ಚಿನ್ನಸ್ವಾಮಿ?
ವಿರಾಟ್ ಕೊಹ್ಲಿ ಅವರ 71ನೇ ಶತಕಕ್ಕಾಗಿ ಅಭಿಮಾನಿಗಳ ಕಾಯುವಿಕೆ ಜಾಸ್ತಿಯಾಗುತ್ತಲೇ ಇದೆ. ಕಳೆದ 71 ಇನ್ನಿಂಗ್ಸ್‌ಗಳಲ್ಲಿ (ಟಿ20 ಹೊರತುಪಡಿಸಿದರೆ 49) ಅವರು ಶತಕ ಬಾರಿಸಿಲ್ಲ.
48
ಕೊಹ್ಲಿ ಕೊನೆ ಬಾರಿಗೆ ಶತಕ ಹೊಡೆದಿದ್ದು 2019ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ. ತಮ್ಮ 2ನೇ ತವರು ಎಂದೇ ಕರೆಸಿಕೊಳ್ಳುವ ಬೆಂಗಳೂರಲ್ಲಿ ಶತಕದ ಬರವನ್ನು ನೀಗಿಸಿಕೊಳ್ಳುವ ಕೊಹ್ಲಿ ಕಾತರಿಸುತ್ತಿದ್ದಾರೆ.
58
4 ವರ್ಷದ ಬಳಿಕ ಬೆಂಗಳೂರಲ್ಲಿ ಟೆಸ್ಟ್
ಕೊನೆಯ ಬಾರಿಗೆ ಬೆಂಗಳೂರು ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದು 2018ರಲ್ಲಿ. ಭಾರತ ಹಾಗೂ ಆಫ್ಘಾನಿಸ್ತಾನ ನಡುವೆ ಪಂದ್ಯ ನಡೆದಿತ್ತು. ಅದು ಆಫ್ಘಾನಿಸ್ತಾನದ ಆಡಿದ ಮೊದಲ ಟೆಸ್ಟ್ ಎನ್ನುವುದು ವಿಶೇಷ. 4 ವರ್ಷಗಳ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣ ಟೆಸ್ಟ್ ಪಂದ್ಯಕ್ಕೆ ವೇದಿಕೆಯಾಗಲು ಸಜ್ಜಾಗಿದೆ.
68
ಬೆಂಗಳೂರಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರೆಗೂ ಒಟ್ಟು 23 ಟೆಸ್ಟ್‌ಗಳು ನಡೆದಿವೆ. ಭಾರತ ಇಲ್ಲಿ ಆಡಿರುವ 23 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 6 ಸೋಲು ಕಂಡಿದೆ. 9 ಪಂದ್ಯಗಳು ಡ್ರಾಗೊಂಡಿವೆ. ಇದೀಗ ಮೊದಲ ಬಾರಿಗೆ ಬೆಂಗಳೂರು ಹಗಲು-ರಾತ್ರಿ ಟೆಸ್ಟ್‌ಗೆ ಸಾಕ್ಷಿಯಾಗಲಿದೆ.
78
ಲಂಕಾ ವೇಗಿ ಲಕ್ಮಲ್‌ಗೆ ಕೊನೆ ಅಂತಾರಾಷ್ಟ್ರೀಯ ಪಂದ್ಯ
ಶ್ರೀಲಂಕಾದ ವೇಗದ ಬೌಲರ್ ಸುರಂಗ ಲಕ್ಮಲ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಭಾರತ ಪ್ರವಾಸ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಕಳೆದ ತಿಂಗಳು ಅವರು ಘೋಷಿಸಿದ್ದರು.
88
ಇಂಗ್ಲೆಂಡ್ ಕೌಂಟಿ ತಂಡ ಡರ್ಬಿಶೈರ್ ಜೊತೆ 2 ವರ್ಷ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದಾರೆ. ಲಕ್ಮಲ್ ಈವರೆಗೂ 69 ಟೆಸ್ಟ್‌ಗಳನ್ನಾಡಿದ್ದು 170 ವಿಕೆಟ್ ಕಿತ್ತಿದ್ದಾರೆ. 86 ಏಕದಿನ(109 ವಿಕೆಟ್) ಹಾಗೂ 11 ಅಂ.ರಾ.ಟಿ20 ಪಂದ್ಯ (08 ವಿಕೆಟ್) ಆಡಿದ್ದಾರೆ.