IPL 2024 ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರರಿವರು..!

First Published | Feb 27, 2024, 5:20 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾರೆಲ್ಲಾ ಒಂದು ಸೀಸನ್‌ ಐಪಿಎಲ್‌ಗೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನೋಡೋಣ ಬನ್ನಿ
 

1. ರೋಹಿತ್ ಶರ್ಮಾ:

ಮುಂಬೈ ಇಂಡಿಯನ್ಸ್‌ಗೆ 5 ಬಾರಿ ಐಪಿಎಲ್ ಕಪ್ ಗೆದ್ದುಕೊಟ್ಟ ನಾಯಕ, ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಪ್ರತಿ ಸೀಸನ್ ಐಪಿಎಲ್‌ಗೆ ಬರೋಬ್ಬರಿ 16 ಕೋಟಿ ರುಪಾಯಿ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
 

2. ಇಶಾನ್ ಕಿಶನ್:

ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದು, ಕಿಶನ್, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ 15.25 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.
 

Tap to resize

3. ಹಾರ್ದಿಕ್ ಪಾಂಡ್ಯ:

ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ, ಈ ಬಾರಿ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಪಾಂಡ್ಯ 15 ಕೋಟಿ ರುಪಾಯಿ ಪಡೆಯುತ್ತಿದ್ದಾರೆ.
 

4. ಜಸ್ಪ್ರೀತ್ ಬುಮ್ರಾ:

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗದ ಅಸ್ತ್ರ ಜಸ್ಪ್ರೀತ್ ಬುಮ್ರಾ ಪ್ರತಿ ಸೀಸನ್‌ ಐಪಿಎಲ್‌ಗೆ ಫ್ರಾಂಚೈಸಿಯಿಂದ 12 ಕೋಟಿ ರುಪಾಯಿ ಪಡೆಯುತ್ತಿದ್ದಾರೆ. ಬುಮ್ರಾ ಮುಂಬೈ ಪಡೆಯ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ.
 

5. ಟಿಮ್ ಡೇವಿಡ್:

ಆಸ್ಟ್ರೇಲಿಯಾ ಮೂಲದ ಸ್ಪೋಟಕ ಬ್ಯಾಟರ್ ಹಾಗೂ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಟಿಮ್ ಡೇವಿಡ್ ಅವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ 8.25 ಕೋಟಿ ರುಪಾಯಿ ಪಡೆಯುತ್ತಿದ್ದಾರೆ.
 

6. ಸೂರ್ಯಕುಮಾರ್ ಯಾದವ್:

ಭಾರತದ ಮಿಸ್ಟರ್ 360 ಖ್ಯಾತಿಯ, ನಂ.1 ಟಿ20 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಬ್ಯಾಟಿಂಗ್ ಬೆನ್ನೆಲುಬು ಆಗಿ ಗುರುತಿಸಿಕೊಂಡಿದ್ದಾರೆ. ಸೂರ್ಯ 8 ಕೋಟಿ ರುಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ.
 

7. ಗೆರಾಲ್ಡ್ ಕೋಟ್ಜೀ:

ದಕ್ಷಿಣ ಆಫ್ರಿಕಾ ಮೂಲದ ಬೌಲಿಂಗ್ ಆಲ್ರೌಂಡರ್ ಗೆರಾಲ್ಡ್ ಕೋಟ್ಜೀ, ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 5 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
 

8. ನುವಾನ್ ತುಷಾರ:

ಶ್ರೀಲಂಕಾ ಮೂಲದ ವೇಗದ ಬೌಲರ್ ನುವಾನ್ ತುಷಾರ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 4.8 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಲಂಕಾ ವೇಗಿ ಈ ಬಾರಿ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
 

Latest Videos

click me!