'ಈ ಇಬ್ಬರು ತುಂಬಾ ಗಲೀಜು': ಟೀಂ ಇಂಡಿಯಾ ಆಟಗಾರರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರೋಹಿತ್ ಶರ್ಮಾ

Published : Apr 13, 2024, 03:57 PM IST

ಇತ್ತೀಚೆಗೆ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಹಲವು ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.    

PREV
18
'ಈ ಇಬ್ಬರು ತುಂಬಾ ಗಲೀಜು': ಟೀಂ ಇಂಡಿಯಾ ಆಟಗಾರರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರೋಹಿತ್ ಶರ್ಮಾ

ಇತ್ತೀಚೆಗಷ್ಟೇ ಪ್ರಸಾರವಾದ ನೆಟ್‌ಫ್ಲಿಕ್ಸ್ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಕಾಣಿಸಿಕೊಂಡು ಮಸ್ತ್ ಎಂಜಾಯ್ ಮಾಡಿದ್ದರು.

28

ಈ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಅವರ ಹಲವು ಪ್ರಶ್ನೆಗಳಿಗೆ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಪಟಾಪಟ್ ಉತ್ತರ ನೀಡಿ ಗಮನ ಸೆಳೆದಿದ್ದರು. ಇದೇ ಶೋನಲ್ಲಿ ಹಿಟ್‌ಮ್ಯಾನ್ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

38

ಕಪಿಲ್ ಶರ್ಮಾ, ಒಂದು ವೇಳೆ ನೀವು ಮತ್ತೊಬ್ಬ ಆಟಗಾರನ ಜತೆ ರೂಮ್ ಶೇರ್ ಮಾಡಿಕೊಳ್ಳುವ ಪರಿಸ್ಥಿತಿ ಬಂದರೆ ಯಾರ ಜತೆ ರೂಮ್ ಹಂಚಿಕೊಳ್ಳಲು ಬಯಸುವುದಿಲ್ಲ? ಯಾಕೆ ಬಯಸುವುದಿಲ್ಲ? ಎಂದು ಕೇಳುತ್ತಾರೆ.

48

ಆಗ ರೋಹಿತ್ ಈಗ ಎಲ್ಲರಿಗೂ ಪ್ರತ್ಯೇಕ ರೂಮ್ ಸಿಗುತ್ತದೆ. ಒಂದು ವೇಳೆ ರೂಮ್ ಹಂಚಿಕೊಳ್ಳುವ ಪರಿಸ್ಥಿತಿ ಬಂದರಂತೂ ಶಿಖರ್ ಧವನ್ ಹಾಗೂ ರಿಷಭ್ ಪಂತ್ ಇವರಿಬ್ಬರ ಜತೆ ರೂಮ್ ಹಂಚಿಕೊಳ್ಳಲು ನಾನು ಬಯಸುವುದಿಲ್ಲ ಎಂದಿದ್ದಾರೆ.

58

ಈ ಇಬ್ಬರು ಆಟಗಾರರು ತುಂಬಾ ಗಲೀಜು. ಪ್ರಾಕ್ಟೀಸ್ ಮುಗಿಸಿಕೊಂಡು ಬಂದ ಬಳಿಕ ಈ ಆಟಗಾರರು ತಮ್ಮ ಬಟ್ಟೆಗಳನ್ನು ಹೋಟೆಲ್ ರೂಂನಲ್ಲಿ ಎಲ್ಲಿಬೇಕಾದರಲ್ಲಿ ಎಸೆಯುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

68

ಧವನ್ ಹಾಗೂ ರಿಷಭ್ ಬಾಗಿಲಲ್ಲಿ Do Not Disturb ಬೋರ್ಡ್ ತೂಗುಹಾಕಿ ತಡರಾತ್ರಿಯವರೆಗೂ ಎಚ್ಚರವಿರುತ್ತಾರೆ. ಹೋಟೆಲ್ ಸಿಬ್ಬಂದಿ ಬೆಳಗ್ಗೆ ರೂಂ ಸ್ವಚ್ಚಗೊಳಿಸುತ್ತಾರೆ. ಒಂದು ವೇಳೆ ಈ ಇಬ್ಬರು 4 ದಿನ ರೂಂ ಒಳಗೆ ಇದ್ದರೇ, ನಾಲ್ಕು ದಿನವೂ ಆ ರೂಂ ಕ್ಲೀನ್ ಆಗಿ ಇರುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

78

ಈ ರೀತಿ ಇರುವವರ ಜತೆ ರೂಮ್ ಶೇರ್ ಮಾಡುವುದಕ್ಕೆ ಯಾರೂ ಬಯಸುವುದಿಲ್ಲ. ಈ ಕಾರಣಕ್ಕಾಗಿಯೇ ನಾನು ಈ ಇಬ್ಬರ ಜತೆ ರೂಮ್ ಶೇರ್ ಮಾಡಲು ಬಯಸುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

88

ಇಷ್ಟೆಲ್ಲಾ ಹೇಳಿದ ಮೇಲೆ ರೋಹಿತ್ ಶರ್ಮಾ, ಆರಂಭಿಕ ಬ್ಯಾಟರ್ ಶಿಖರ್ ಧವನ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ನನ್ನ ಆಪ್ತ ಸ್ನೇಹಿತರು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
 

Read more Photos on
click me!

Recommended Stories