'ನಾನು ನಿಮ್ಮ ಅತಿದೊಡ್ಡ ಚಿಯರ್ ಲೀಡರ್..': ಆಗಾಗ ಸುದ್ದಿಯಲ್ಲಿರುವ ಚಹಲ್ ಪತ್ನಿ ಹೀಗೆ ಹೇಳಿದ್ದು ಯಾರಿಗೆ?

First Published | Apr 12, 2024, 3:30 PM IST

ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಪತ್ನಿ ಧನಶ್ರೀ ವರ್ಮಾ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಚಹಲ್ ಪತ್ನಿ ಧನಶ್ರೀ ವರ್ಮಾ ನೀಡಿದ ಹೇಳಿಕೆಯೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಇನ್ನು ಯುಜುವೇಂದ್ರ ಚಹಲ್ ಪ್ರತಿನಿಧಿಸುವ ರಾಜಸ್ಥಾನ ರಾಯಲ್ಸ್ ತಂಡವು ಸದ್ಯ ಅದ್ಭುತ ಪ್ರದರ್ಶನ ತೋರುತ್ತಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
 

ಬಲಗೈ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್, ಇದೀಗ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಪರೂಪದ ಮೈಲಿಗಲ್ಲನ್ನು ನೆಟ್ಟಿದ್ದು, ವೃತ್ತಿಬದುಕಿನ 150ನೇ ಐಪಿಎಲ್ ಪಂದ್ಯವನ್ನಾಡಿದರು.

Tap to resize

ಯುಜುವೇಂದ್ರ ಚಹಲ್, ಇದೀಗ 150ನೇ ಐಪಿಎಲ್ ಪಂದ್ಯವನ್ನಾಡಿದ 26ನೇ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯವು ಚಹಲ್ ಪಾಲಿನ 150ನೇ ಐಪಿಎಲ್ ಪಂದ್ಯ ಎನಿಸಿತು.

ಈ ಪಂದ್ಯಕ್ಕೂ ಮುನ್ನ ಯುಜುವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ, ಒಂದು ವಿಡಿಯೋ ಮೂಲಕ ಪತಿಯ ಸಾಧನೆಗೆ ಶುಭಕೋರಿದ್ದರು. ಈ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೂಡಾ ಶೇರ್ ಮಾಡಿತ್ತು.

ಸ್ವತಃ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿರುವ ಧನಶ್ರೀ ವರ್ಮಾ, "150ನೇ ಐಪಿಎಲ್ ಪಂದ್ಯವನ್ನಾಡುತ್ತಿರುವ ಯುಜಿ ನಿಮಗೆ ಅಭಿನಂದನೆಗಳು. ನಾನು ಈ ಮಾತನ್ನು ಮೊದಲು ಹೇಳಿದ್ದೇ, ಈಗಲೂ ಹೇಳುತ್ತಿದ್ದೇನೆ. ನೀವು ಈ ಹಿಂದಿನ ತಂಡ ಹಾಗೂ ಈಗಿನ ತಂಡದ ಪರ ನೀವು ತೋರುತ್ತಿರುವ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿರುವ ಧನಶ್ರೀ ವರ್ಮಾ, "ನೀವು ಅಮೋಘವಾಗಿ ಆಡುವ ರೀತಿಯ ಬಗ್ಗೆ, ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವ ನಿಮ್ಮ ಗುಣದ ಬಗ್ಗೆ ನಮಗೆ ಹೆಮ್ಮೆಯಿದೆ."

ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸಿಕೊಡುವ ಕ್ಷಮತೆ ಅದ್ಭುತವಾದದ್ದು. ಹೀಗಾಗಿಯೇ ನಾನು ನಿಮ್ಮ ಪಾಲಿನ ಅತಿದೊಡ್ಡ ಚಿಯರ್‌ಲೀಡರ್ ಆಗಿದ್ದೇನೆ" ಎಂದು ಧನಶ್ರೀ ವರ್ಮಾ ಹೇಳಿದ್ದಾರೆ.

ನಾನು ಯಾವಾಗಲೂ ನಿಮ್ಮನ್ನೂ 100% ಸಮರ್ಥಿಸಿಕೊಳ್ಳುತ್ತೇನೆ. ನಿಮ್ಮ ಈ 150ನೇ ಐಪಿಎಲ್ ಪಂದ್ಯವನ್ನು ಭರ್ಜರಿಯಾಗಿಯೇ ಎಂಜಾಯ್ ಮಾಡಿ ಎಂದು ಧನಶ್ರೀ ವರ್ಮಾ ಶುಭ ಕೋರಿದ್ದಾರೆ.

Latest Videos

click me!