ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರ ಪಟ್ಟಿಯಲ್ಲಿ ಕೊಹ್ಲಿ, ಧೋನಿಗಿಲ್ಲ ಮೊದಲ ಸ್ಥಾನ!

First Published | Sep 12, 2024, 3:29 PM IST

ಬೆಂಗಳೂರು: 2008 ರಿಂದ 2024 ರವರೆಗೆ ಇದುವರೆಗೂ 17 ಯಶಸ್ವಿ ಐಪಿಎಲ್ ಆವೃತ್ತಿಗಳು ಮುಕ್ತಾಯ ಕಂಡಿವೆ. ಜಗತ್ತಿನ ಶ್ರೀಮಂತ ಟಿ20 ಲೀಗ್ ಎಂದೇ ಕರೆಸಿಕೊಳ್ಳುವ ಐಪಿಎಲ್‌ನಲ್ಲಿ ಇದುವರೆಗೂ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರ ಯಾರು ಎನ್ನುವುದನ್ನು ನೋಡೋಣ ಬನ್ನಿ
 

ಪ್ರತಿ ವರ್ಷವೂ ಐಪಿಎಲ್ ಕ್ರಿಕೆಟ್ ಟೂರ್ನಿ ಅದ್ದೂರಿಯಾಗಿ ನಡೆಯುತ್ತಿದೆ. ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ 2008 ರಲ್ಲಿ ಪ್ರಾರಂಭವಾಯಿತು. ಚೊಚ್ಚಲ ಆವೃತ್ತಿಯಿಂದಲೂ ಲೀಗ್ ಪಂದ್ಯಗಳು ಕ್ರಿಕೆಟ್‌ನ ಸ್ವರೂಪವನ್ನು ಬದಲಾಯಿಸುವುದಲ್ಲದೆ, ಆಟಗಾರರ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ಐಪಿಎಲ್‌ನಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಆಟಗಾರನ ಕನಸು ಎಂದರೇ ತಪ್ಪಲ್ಲ

ಏಕೆಂದರೆ, ಇದು ಆಟಗಾರರಿಗೆ ಖ್ಯಾತಿಯ ಜತೆಗೆ ಹೆಚ್ಚಿನ ಆದಾಯವನ್ನು ನೀಡುತ್ತಾ ಬಂದಿದೆ. ಆ ನಿಟ್ಟಿನಲ್ಲಿ, 2008 ರಿಂದ 2024 ರವರೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಅವರು ಅತಿ ಹೆಚ್ಚು ಒಟ್ಟು ಸಂಭಾವನೆ ಪಡೆದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

Tap to resize

ಅಂದರೆ, ಭಾರತ ತಂಡದ ಈ ಮೂವರು ದಿಗ್ಗಜರು 2008 ರಿಂದ 2024 ರವರೆಗೆ ಪ್ರತಿ ಐಪಿಎಲ್ ಟೂರ್ನಿಯಲ್ಲಿ ಆಡುವ ಮೂಲಕ ಈ 17 ವರ್ಷಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಐಪಿಎಲ್ ಸಂಭಾವನೆಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದರೆ, ಧೋನಿ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 

2011 ರಿಂದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಬಾರಿ ಟ್ರೋಫಿ ಗೆದ್ದುಕೊಟ್ಟ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. 

ಅದರಂತೆ, ಐಪಿಎಲ್ ಟೂರ್ನಿಯ ಮೂಲಕ ಅತಿ ಹೆಚ್ಚು ಸಂಪಾದಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ ಇದುವರೆಗೆ 257 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 43 ಅರ್ಧಶತಕಗಳು, 2 ಶತಕಗಳ ಸಹಿತ ಒಟ್ಟು 6,628 ರನ್ ಗಳಿಸಿದ್ದಾರೆ. ಇದರಲ್ಲಿ 15 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಅತಿ ಹೆಚ್ಚು 109* ರನ್ ಗಳಿಸಿದ್ದಾರೆ. 

2013 ರಿಂದ 2023 ರವರೆಗೆ 10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕನಾಗಿ 165 ಪಂದ್ಯಗಳಲ್ಲಿ ಆಡಿ 28.62 ಸರಾಸರಿಯೊಂದಿಗೆ 4,236 ರನ್ ಗಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಟ್ಟು 17 ಸೀಸನ್‌ಗಳಲ್ಲಿ ಆಡಿರುವ ರೋಹಿತ್ ಶರ್ಮಾ 178.6 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

2 ನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ.

ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ, ಕೂಡಾ ಐಪಿಎಲ್‌ ಸಂಭಾವನೆ ಪಡೆಯುವ ವಿಚಾರದಲ್ಲಿ ತುಂಬಾ ಹಿಂದೆಯೇನೂ ಉಳಿದಿಲ್ಲ. ಮುಂಬೈ ಇಂಡಿಯನ್ಸ್ ತಂಡದಂತೆಯೇ ಸಿಎಸ್‌ಕೆ ತಂಡಕ್ಕೆ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ ಮಹಿ. ಸಿಎಸ್‌ಕೆ ಪರ ಆಡಿರುವ ಧೋನಿ ಒಟ್ಟು 176.8 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. 

ಇದುವರೆಗೆ ಐಪಿಎಲ್‌ನಲ್ಲಿ 264 ಪಂದ್ಯಗಳನ್ನು ಆಡಿರುವ ಧೋನಿ 24 ಅರ್ಧಶತಕಗಳೊಂದಿಗೆ 5234 ರನ್ ಗಳಿಸಿದ್ದಾರೆ. ಇದರಲ್ಲಿ ಅತಿ ಹೆಚ್ಚು 84* ರನ್ ಗಳಿಸಿದ್ದಾರೆ. ಆದರೆ ನಾಯಕನಾಗಿ ಧೋನಿ 4,660 ರನ್ ಗಳಿಸಿರುವುದು ಗಮನಾರ್ಹ. ಧೋನಿಯವರ ನಿವ್ವಳ ಮೌಲ್ಯ 1040 ಕೋಟಿ ರೂ.

ವಿರಾಟ್ ಕೊಹ್ಲಿ 2008 ರಿಂದ 2024 ರವರೆಗೆ ಒಂದೇ ತಂಡಕ್ಕೆ ಆಡಿದವರು ಕೊಹ್ಲಿ:

2008 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದು ಆಡುತ್ತಿರುವ ವಿರಾಟ್ ಕೊಹ್ಲಿ, ಹರಾಜಿಗೆ ಹೋಗಿದ್ದರೆ ಒಂದು ದಾಖಲೆಯನ್ನೇ ಸೃಷ್ಟಿಸುವಷ್ಟು ಸಾಧನೆ ಮಾಡುತ್ತಿದ್ದರು. ಆದರೆ ಇದುವರೆಗೆ ಅವರು ಹರಾಜಿಗೆ ಹೋಗಿಲ್ಲ. ಆದಾಗ್ಯೂ, ವಿರಾಟ್ ಕೊಹ್ಲಿ 17 ವರ್ಷಗಳಲ್ಲಿ ಒಟ್ಟು 173.2 ಕೋಟಿ ರೂಪಾಯಿ ಸಂಪಾದಿಸಿದ್ದಾರೆ.

ಇದುವರೆಗೆ ಆರ್‌ಸಿಬಿ ಪರ  252 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 8004 ರನ್ ಗಳಿಸಿದ್ದಾರೆ. ಇದರಲ್ಲಿ 55 ಅರ್ಧಶತಕಗಳು ಮತ್ತು 8 ಶತಕಗಳು ಸೇರಿವೆ. ಅತಿ ಹೆಚ್ಚು 113 ರನ್ ಗಳಿಸಿದ್ದಾರೆ. ಅವರ ನಿವ್ವಳ ಮೌಲ್ಯ 1050 ಕೋಟಿ ರೂ. ಹೆಚ್ಚಿನ ಸಂಪಾದನೆ ಹೊಂದಿರುವ ವಿರಾಟ್ ಕೊಹ್ಲಿ ಐಪಿಎಲ್ ಮೂಲಕ 17 ವರ್ಷಗಳಲ್ಲಿ 173.2 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿದ್ದಾರೆ. 

ಆದರೆ, ಅವರು ಹರಾಜಿಗೆ ಹೋಗಿದ್ದರೆ ಅವರ ಲೆಕ್ಕವೇ ಬೇರೆಯಾಗಿರುತ್ತಿತ್ತು. ಇದರಿಂದಾಗಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಪಾದಿಸಿದ ಭಾರತೀಯ ದಿಗ್ಗಜರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನ ಪಡೆದಿದ್ದಾರೆ. ಧೋನಿ 2ನೇ ಸ್ಥಾನ ಮತ್ತು ವಿರಾಟ್ ಕೊಹ್ಲಿ 3ನೇ ಸ್ಥಾನ ಪಡೆದಿದ್ದಾರೆ.

Latest Videos

click me!