ಧೋನಿ ನಿವೃತ್ತಿ, ರಿಷಭ್ ಪಂತ್ ಎಂಟ್ರಿ? ಋತುರಾಜ್ ನಾಯಕತ್ವ ಭವಿಷ್ಯ - ಸಿಎಸ್‌ಕೆಯಲ್ಲಿ ಹೊಸ ಬದಲಾವಣೆ!

First Published | Sep 12, 2024, 2:26 PM IST

ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂ.ಎಸ್.ಧೋನಿ ಮುಂದುವರಿಯುತ್ತಾರೆಯೇ? ನಿವೃತ್ತಿ ಹೊಂದಿದರೆ ಅವರ ಸ್ಥಾನದಲ್ಲಿ ಯಾರು ಆಡುತ್ತಾರೆ? ನಾಯಕ ಯಾರು? ಎಂಬುದರ ಕುರಿತಾದ ಒಂದು ನೋಟ ಇಲ್ಲಿದೆ

2022ರ ಐಪಿಎಲ್ ಬಳಿಕ ಇದೇ  ಮೊದಲ ಬಾರಿಗೆ ಮೆಗಾ ಹರಾಜು ನಡೆಯಲಿದೆ. ಐಪಿಎಲ್ 2025 ರ ತಯಾರಿ ಈಗಾಗಲೇ ಆರಂಭವಾಗಿದೆ. ಪ್ರತಿಯೊಂದು ತಂಡವೂ ತಮ್ಮನ್ನು ಬಲಪಡಿಸಿಕೊಳ್ಳಲು ಯಾರನ್ನು ಉಳಿಸಿಕೊಳ್ಳಬಹುದು, ಯಾರನ್ನು ಬಿಡುಗಡೆ ಮಾಡಬಹುದು ಎಂಬ ತೀವ್ರ ಚರ್ಚೆಯಲ್ಲಿ ತೊಡಗಿದೆ.

ಲಖನೌ ಸೂಪರ್ ಜೈಂಟ್ಸ್ ತಂಡವು 2024 ರಲ್ಲಿ ನಡೆದ ಘಟನೆಯನ್ನು ಮರೆತು ಮತ್ತೆ ನಾಯಕ ಕೆಎಲ್ ರಾಹುಲ್ ಅವರನ್ನು ತಂಡದಲ್ಲಿಯೇ ಉಳಿಸಿಕೊಳ್ಳಿದೆ ಎನ್ನಲಾಗುತ್ತಿದ್ದರೂ, ರಾಹುಲ್ ನಡೆ ಏನು ಎನ್ನುವುದು ಇನ್ನು ಗುಟ್ಟಾಗಿಯೇ ಉಳಿದಿದೆ. 

Tap to resize

ಇದಷ್ಟೇ ಅಲ್ಲದೆ, ಲಖನೌ ತಂಡದ ಸಲಹೆಗಾರರಾಗಿ ಭಾರತ ತಂಡದ ಅನುಭವಿ ಬೌಲರ್ ಜಹೀರ್ ಖಾನ್ ಸ್ಥಾನ ಪಡೆದಿದ್ದಾರೆ. ಇನ್ನು, ರೋಹಿತ್ ಶರ್ಮಾ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮುಂತಾದವರನ್ನು ಆಯಾ ತಂಡಗಳು ಬಿಡುಗಡೆ ಮಾಡಲಿವೆ ಎಂಬ ಮಾಹಿತಿ ಸಾಕಷ್ಟು ಸದ್ದು ಮಾಡುತ್ತಿದೆ

ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಈಗ ಚೆನ್ನೈ ಸೂಪರ್ ಕಿಂಗ್ಸ್ ಕಡೆಗೆ ತಿರುಗಿದೆ. ಇದಕ್ಕೆ ಕಾರಣ ಒಬ್ಬರೇ ಎಂ.ಎಸ್.ಧೋನಿ. ಐಪಿಎಲ್ 2025 ಕ್ಕೆ ಮುನ್ನ ಸಿಎಸ್‌ಕೆಯಲ್ಲಿ ಏನು ಬದಲಾವಣೆ ಆಗುತ್ತದೆ, ಧೋನಿ ಆಡುತ್ತಾರೆಯೇ? ನಿವೃತ್ತಿ ಬಗ್ಗೆ ಘೋಷಿಸುತ್ತಾರೆಯೇ ಎಂಬ ಪ್ರಶ್ನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ

ಚೆನ್ನೈ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ವೇಳೆ ನಿವೃತ್ತಿ ಘೋಷಿಸಿದರೆ ಅವರ ಸ್ಥಾನಕ್ಕೆ ಹೊಸ ವಿಕೆಟ್ ಕೀಪರ್ ಆಗಿ ಸಿಎಸ್‌ಕೆಯಲ್ಲಿ ಸ್ಥಾನ ಪಡೆಯುವ ಆಟಗಾರ ಯಾರು ಎಂಬುದು ಅಭಿಮಾನಿಗಳ ಮನದಲ್ಲಿ  ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2024 ರ ಐಪಿಎಲ್ ಋತುವಿನಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ 14 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಮತ್ತು 7 ರಲ್ಲಿ ಸೋಲು ಕಂಡು ಪಾಯಿಂಟ್ ಪಟ್ಟಿಯಲ್ಲಿ 5 ನೇ ಸ್ಥಾನ ಪಡೆದುಕೊಂಡಿತು. ಈ ಹಿನ್ನೆಲೆಯಲ್ಲಿ 2025 ರ ಋತುವಿನಲ್ಲಿ ಸಿಎಸ್‌ಕೆಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬುದನ್ನು ವಿವರವಾಗಿ ನೋಡೋಣ ಬನ್ನಿ

ಧೋನಿ ನಿವೃತ್ತಿ ಖಂಡಿತವಾಗಿಯೂ ಶತಸಿದ್ದ. ಆದರೆ, ಧೋನಿಯನ್ನು ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳಲು ಚೆನ್ನೈ ಬಳಿ ಹೆಚ್ಚಿನ ಅವಕಾಶಗಳಿವೆ ಎನ್ನಲಾಗುತ್ತಿದೆ. ಹೇಗಾದರೂ ಒಂದು ದಿನ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸುತ್ತಾರೆ. ಹಾಗೆ ಘೋಷಿಸಿದಾಗ ಸಿಎಸ್‌ಕೆ ತಂಡಕ್ಕೆ ಖಂಡಿತಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೇಕಾಗುತ್ತದೆ.

ಧೋನಿಗೆ ಸರಿಸಮಾನವಾಗಿ ಸಿಎಸ್‌ಕೆ ಆಯ್ಕೆ ಮಾಡುವ ಬೇರೆ ಆಟಗಾರ ಯಾರೂ ಅಲ್ಲ. ಹೀಗಾಗಿ ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಿದರೆ, ಸಿಎಸ್‌ಕೆ ಅವರನ್ನು ಹರಾಜಿನಲ್ಲಿ ಖರೀದಿಸಲಿದೆ ಎನ್ನಲಾಗುತ್ತಿದೆ.

ಈಗಾಗಲೇ ಮುಖ್ಯ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಅವರ ತಲೆದಂಡವನ್ನು ಡೆಲ್ಲಿ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಪಂತ್‌ಗೂ ತಂಡದಿಂದ ಗೇಟ್‌ಪಾಸ್ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಧೋನಿ ಬದಲಿಗೆ ರಿಷಭ್ ಪಂತ್ ಅವರನ್ನು ಸಿಎಸ್‌ಕೆ ಹರಾಜಿನಲ್ಲಿ ಖರೀದಿಸಿದರೆ, ನಾಯಕತ್ವದಲ್ಲಿ ಬದಲಾವಣೆ ಮಾಡಲು ಸಿಎಸ್‌ಕೆ ಯೋಚಿಸಬಹುದು. ಐಪಿಎಲ್ 2024 ರ ಋತುವಿನಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ನಾಯಕರನ್ನಾಗಿ ನೇಮಿಸಲಾಯಿತು, ಆದರೆ ಇತಿಹಾಸದಲ್ಲಿ ಮೂರನೇ ಬಾರಿಗೆ ಚೆನ್ನೈ ಪ್ಲೇ ಆಫ್‌ಗೆ ತಲುಪಲು ವಿಫಲವಾದ ಕಾರಣ ಅವರು ನಾಯಕತ್ವದ ಮೇಲೆ ತೂಗುಗತ್ತಿ ನೇತಾಡಲಾರಂಭಿಸಿದೆ.

ರಿಷಭ್ ಪಂತ್ ಅವರನ್ನು ಸಿಎಸ್‌ಕೆ ಹರಾಜಿನಲ್ಲಿ ಖರೀದಿಸಿದರೆ, ಪಂತ್ ಚೆನ್ನೈ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.  ಏಕೆಂದರೆ ಅವರು ಡೆಲ್ಲಿ ತಂಡದಲ್ಲಿ ನಾಯಕರಾಗಿಯೇ ಕಾಣಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 32 ಪಂದ್ಯಗಳಿಗೆ ನಾಯಕರಾಗಿದ್ದ ರಿಷಭ್ ಪಂತ್, 16 ಪಂದ್ಯಗಳಲ್ಲಿ ಗೆಲುವು ಮತ್ತು 15 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಒಂದು ಪಂದ್ಯಕ್ಕೆ ಫಲಿತಾಂಶವಿಲ್ಲ.

Latest Videos

click me!