IPL 2021: ಆರು ನಗರದಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧಾರ!

First Published | Feb 28, 2021, 2:46 PM IST

ಐಪಿಎಲ್ 2021 ಆಯೋಜನೆಗೆ ಬಿಸಿಸಿಐ ಭರ್ಜರಿ ತಯಾರಿ ನಡೆಸುತ್ತಿದೆ. ಕಳೆದ ಬಾರಿ ಕೊರೋನಾ ಕಾರಣ ದುಬೈನಲ್ಲಿ ಐಪಿಎಲ್ ಆಯೋಜಿಸಿದ ಬಿಸಿಸಿಐ ಈ ಬಾರಿ ಭಾರತದಲ್ಲಿ ಟೂರ್ನಿ ಆಯೋಜಿಸಲು ಸಿದ್ಧತೆ ನಡೆಸಿದೆ. 6 ನಗರಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿದೆ. ಯಾವ ನಗರಕ್ಕೆ ಐಪಿಎಲ್ ಭಾಗ್ಯ ದೊರೆಯಲಿದೆ? ಇಲ್ಲಿದೆ ವಿವರ.

ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ತಯಾರಿ ನಡೆಸುತ್ತಿದೆ. ಇತ್ತ ಬಿಸಿಸಿಐ ಕೂಡ ವೇಳಾಪಟ್ಟಿ, ಕೊರೋನಾ ಮಾರ್ಗಸೂಚಿಗಳ ಕುರಿತು ಸಭೆ ನಡೆಸುತ್ತಿದೆ. ಭಾರತದಲ್ಲೇ ಟೂರ್ನಿ ನಡೆಸಲು ಬಿಸಿಸಿಐ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.
ಭಾರತದ 6 ನಗರಗಳಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದೆ.ಕೊರೋನಾ ಹೆಚ್ಚಾಗುತ್ತಿರುವ ಕಾರಣ ಕೆಲ ರಾಜ್ಯಗಳಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ.
Tap to resize

ಬೆಂಗಳೂರು, ಮುಂಬೈ, ಕೋಲ್ಕತಾ, ಅಹಮ್ಮದಾಬಾದ್, ದೆಹಲಿ ಹಾಗೂ ಬೆಂಗಳೂರು ನರಗಳನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದ್ದು, ಈ ನಗರದಲ್ಲಿ ಸಂಪೂರ್ಣ ಐಪಿಎಲ್ ಟೂರ್ನಿ ಆಯೋಜಿಸಲು ನಿರ್ಧರಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸುವ ಐಪಿಎಲ್ ಪಂದ್ಯಗಳಿಗೆ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ, ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಾತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನಳಿದ 5 ನಗರಗಳಲ್ಲಿ ಶೇಕಡಾ 50 ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಆದರೆ ಅಭಿಮಾನಿಗಳು ಕಟ್ಟು ನಿಟ್ಟಾಗಿ ಕೊರೋನಾ ಮಾರ್ಗಸೂಚಿ ಪಾಲಿಸಬೇಕು ಎಂದು ಬಿಸಿಸಿಐ ಹೇಳಿದೆ.
ಪುಣೆಯಲ್ಲಿ ಆಯೋಜಿಸುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಗೆ ಅಭಿಮಾನಿಗಳ ಪ್ರವೇಶಕ್ಕೆ ಮಹಾರಾಷ್ಟ್ರ ಸರ್ಕಾರ ನಿರ್ಬಂಧ ವಿದಿಸಿದೆ. ಹೀಗಾಗಿ ಮುಂಬೈನಲ್ಲಿ ಐಪಿಎಲ್ ಮತ್ತಷ್ಟು ಕಷ್ಟವಾಗಿದೆ.
6 ನಗರಗಳಲ್ಲಿ ಬಯೋಬಲ್ ಸರ್ಕಲ್, ಕೊರೋನಾ ಮುಂಜಾಗ್ರತ ಕ್ರಮಗಳನ್ನು ಬಿಸಿಸಿಐ ಯಾವ ರೀತಿ ಜಾರಿಗೊಳಿಸುತ್ತೆ ಅನ್ನೋ ಗೊಂದಲ ಇದೀಗ ಫ್ರಾಂಚೈಸಿಗಳ ಮನದಲ್ಲಿದೆ.
ಕೊರೋನಾ ವೈರಸ್ ಕಾರಣ 2020ರ ಐಪಿಎಲ್ ಟೂರ್ನಿಯಲ್ಲಿ ದುಬೈನಲ್ಲಿ ಆಯೋಜಿಸಲಾಗಿತ್ತು ಅಬು ಧಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲಾಗಿತ್ತು

Latest Videos

click me!