IPL 2021 ಟೂರ್ನಿಗೂ ಮುನ್ನ ದಿಯೋರಿ ಮಂದಿರಕ್ಕೆ ಭೇಟಿ; ಹೊಸ ಲುಕ್‌ನಲ್ಲಿ CSK ನಾಯಕ!

Published : Feb 28, 2021, 03:45 PM IST

ಟೀಂ ಇಂಡಿಯಾದಿಂದ ವಿದಾಯ ಹೇಳಿದ ಬಳಿಕ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಸಕ್ರಿಯವಾಗಿರುವ ಎಂ.ಎಸ್.ಧೋನಿ ಇದೀಗ 2021ರ ಐಪಿಎಲ್ ಟೂರ್ನಿಗೆ ತಯಾರಿ ನಡೆಸಿದ್ದಾರೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಧೋನಿ, ರಾಂಚಿಯಲ್ಲಿನ ದಿಯೋರಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.  

PREV
18
IPL 2021 ಟೂರ್ನಿಗೂ ಮುನ್ನ  ದಿಯೋರಿ ಮಂದಿರಕ್ಕೆ ಭೇಟಿ; ಹೊಸ ಲುಕ್‌ನಲ್ಲಿ CSK ನಾಯಕ!

ಪ್ರತಿ ಟೂರ್ನಿ, ಪ್ರತಿ ಪಂದ್ಯಕ್ಕೂ ಮೊದಲು ಎಂ.ಎಸ್.ಧೋನಿ ದಿಯೋರಿ ಮಂದಿರಕ್ಕೆ ಭೇಟಿ ನೀಡುತ್ತಾರೆ. ಧೋನಿ ತನ್ನ ಭಕ್ತಿ, ಸಂಪ್ರದಾಯವನ್ನು ಈಗಲೂ ಮುಂದುವರಿಸಿದ್ದಾರೆ.

28

2021ರ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲು ಧೋನಿ ರಾಂಚಿಯಲ್ಲಿರುವ ಮಾ ದಿಯೋರಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

38

ಸಾಲ್ಟ್ ಅಂಡ್ ಪೆಪ್ಪರ್ ಸ್ಟೈಲ್ ಬಿಯರ್ಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿ ನೋಡಲು ಅಭಿಮಾನಿಗಳು ಮುಗಿಬಿದ್ದರು.

48

2020ರ ಐಪಿಎಲ್ ಟೂರ್ನಿ ಬಳಿಕ ಕುಟುಂಬದ ಜೊತೆ ತಮ್ಮ ರಾಂಚಿಯಲ್ಲಿರುವ ಫಾರ್ಮ್ ಹೌಸ್‌ನಲ್ಲಿರುವ ಧೋನಿ, ವಿಶ್ರಾಂತಿಗೆ ಜಾರಿದ್ದರು. ಇದೀಗ ಮತ್ತೆ ಐಪಿಎಲ್ ಟೂರ್ನಿಗೆ ಅಭ್ಯಾಸ ಆರಂಭಿಸಿದ್ದಾರೆ.

58

ಧೋನಿ ತಮ್ಮ ಬಾಲ್ಯದ ಗೆಳೆಯರ ಜೊತೆಗೂಡಿ ದಿಯೋರಿ ದೇವಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ರಾಂಚಿ ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದರು

68

ಕಳೆದ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಧೋನಿ, ಬಳಿಕ 2020ರ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. 

78

ಕಳೆದ ಐಪಿಎಲ್ ಟೂರ್ನಿಯಲ್ಲಿ ಧೋನಿ ಹಾಗೂ ಸಿಎಸ್‌ಕೆ ತಂಡ ಕಳಪೆ ಪ್ರದರ್ಶನ ನೀಡಿತ್ತು. ಇದೇ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸದೇ ಟೂರ್ನಿಯಿಂದ ಹೊರಬಿದ್ದಿತ್ತು.

88

2020ರ ಐಪಿಎಲ್ ಟೂರ್ನಿಯಲ್ಲಿ ಧೋನಿ 14 ಪಂದ್ಯಗಳಿಂದ 200 ರನ್ ಸಿಡಿಸಿದ್ದರು. 25ರ ಸರಾಸರಿಯಲ್ಲಿ ಧೋನಿ ಬ್ಯಾಟ್ ಬೀಸಿದ್ದಾರೆ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories