ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಶಾಕ್, ಜನವರಿ 11ರಿಂದ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿ ಆರಂಭಗೊಳ್ಳುತ್ತಿದೆ. ಆದರೆ ಪ್ಲೇಯಿಂಗ್ 11 ಆಯ್ಕೆ ಬಹುತೇಕ ಅಂತಿಮಗೊಂಡ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗ ಹೊರಬಿದ್ದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಇಂದಿನಿಂದ ಆರಂಭಗೊಳ್ಳುತ್ತಿದೆ. ಇಂದು (ಜ.11) ಮಧ್ಯಾಹ್ನ 1.30ಗೆ ಪಂದ್ಯ ಆರಭಗೊಳ್ಳುತ್ತಿದೆ. ಈಗಾಗಲೇ ಟೀಂ ಇಂಡಿಯಾಗ ಪ್ಲೇಯಿಂಗ್ 11 ಕೂಡ ಅಂತಿಮಗೊಂಡಿತ್ತು. ಆದರೆ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರ ರಿಷಬ್ ಪಂತ್ ತಂಡದಿಂದ ಹೊರಬಿದ್ದಿದ್ದಾರೆ.
26
ರಿಷಬ್ ಪಂತ್ ಹೊರಿದ್ದಿದ್ದೇಕೆ?
ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯ ಅಭ್ಯಾಸದ ವೇಳೆ ರಿಷಬ್ ಪಂತ್ ಗಾಯಗೊಂಡಿದ್ದಾರೆ. ಹಲವು ಗಾಯಗಳಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ರಿಷಬ್ ಪಂತ್ ಇದೀಗ ಪಂದ್ಯ ಆರಂಭಕ್ಕೂ ಮೊದಲೇ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಗಾಯ ಗಂಭೀರವಾಗಿದೆ. ಹೆಚ್ಚಿನ ದಿನಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಟೀಂ ಇಂಡಿಯಾ ವೈದ್ಯರು ಹೇಳಿದ್ದಾರೆ.
36
ಥ್ರೋಡೌನ್ ಬಿದ್ದು ಗಂಭೀರ ಗಾಯ
ರಿಷಬ್ ಪಂತ್ ನೆಟ್ ಪ್ರಾಕ್ಟೀಸ್ ವೇಳೆ ಥ್ರೋಡೌನ್ ಎಸೆದ ಚೆಂಡು ರಿಷಬ್ ಪಂತ್ ಸೊಂಟಕ್ಕೆ ಬಡಿದಿದೆ. ಕುಸಿದು ಬಿದ್ದ ರಿಷಬ್ ಪಂತ್ ಚೇತರಿಸಿಕೊಂಡು ಮತ್ತೆ ಬ್ಯಾಟಿಂಗ್ ಇಳಿಯುವ ಪ್ರಯತ್ನದಲ್ಲಿದ್ದರು. ಆದರೆ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ವೈದ್ಯರು ಆಗಮಿಸಿ ಪರಿಶೀಲಿಸಿದ್ದಾರೆ. ಬಳಿಕ ಸ್ಕ್ಯಾನಿಂಗ್ ವೇಳೆ ರಿಷಬ್ ಗಂಭೀರ ಗಾಯಗೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ಸರಣಿಯಿಂದ ಹೊರಗುಳಿದಿದ್ದಾರೆ.
ರಿಷಬ್ ಪಂತ್ ಟೀಂ ಇಂಡಿಯಾ ಕರಿಯರ್ ಹೆಚ್ಚು ಕಡಿಮೆ ಇಂಜುರಿಯಿಂದಲೇ ಸಾಗಿದೆ. ಕರಿಯರ್ ಉತ್ತುಂಗದಲ್ಲಿರುವಾಗಲೇ 2022ರಲ್ಲಿ ನಡೆದ ರಸ್ತೆ ಅಫಘಾತದದಲ್ಲಿ ರಿಷಬ್ ಪಂತ್ ಬದುಕುಳಿದಿದ್ದೇ ಪವಾಡವಾಗಿತ್ತು. ಸುದೀರ್ಘ ದಿನಗಳ ಬಳಿಕ ಚೇತರಿಸಿಕೊಂಡು ತಂಡಕ್ಕೆ ಮರಳಿದ ರಿಷಬ್ ಪಂತ್, ಕಳದ ವರ್ಷ ಐಪಿಎಲ್ ಟೂರ್ನಿಯಲ್ಲಿ ಮತ್ತೆ ಗಾಯಗೊಂಡು ವಿಶ್ರಾಂತಿಗೆ ಜಾರಿದ್ದರು.
56
ಪಂತ್ ಆಯ್ಕೆ ಚರ್ಚೆ
ನ್ಯೂಜಿಲೆಂಡ್ ವಿರುದ್ಧದ ತಂಡದ ಆಯ್ಕೆ ವೇಳೆ ರಿಷಬ್ ಪಂತ್ ಆಯ್ಕೆ ಅನುಮಾನವಾಗಿತ್ತು. ಕಾರಣ ರಿಷಬ್ ಪಂತ್ ಕೊನೆಯದಾಗಿ ಟೀಂ ಇಂಡಿಯಾ ಪರ ಆಡಿದ್ದ 2024ರಲ್ಲಿ ಶ್ರೀಲಂಕಾ ವಿರುದ್ಧ. ಸುದೀರ್ಘ ದಿನಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ರಿಷಬ್ ಪಂತ್ ನ್ಯೂಡಿಲೆಂಡ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇತ್ತು. ಆದರೆ ರಿಷಬ್ ಪಂತ್ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು.
ಪಂತ್ ಆಯ್ಕೆ ಚರ್ಚೆ
66
ಮೂರು ಏಕದಿನ ಪಂದ್ಯಗಳ ಸರಣಿ
ನ್ಯೂಜಿಲೆಂಡ್ ವಿರುದ್ದ ಭಾರತ ತವರಿನಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ. ಮೊದಲ ಪಂದ್ಯ ಇಂದು ವಡೋದರಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 14 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಇನ್ನು ಮೂರನೇ ಏಕದಿನ ಪಂದ್ಯ ಜನವರಿ 18 ರಂದು ಇಂದೋರ್‌ನಲ್ಲಿ ನಡೆಯಲಿದೆ.
ಮೂರು ಏಕದಿನ ಪಂದ್ಯಗಳ ಸರಣಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.