ಪಾಕಿಸ್ತಾನ ವೇಗಿಗೆ ಗಾಳ ಹಾಕಿದ ರಿಷಭ್ ಪಂತ್ ಪ್ರೇಯಸಿ..! ಊರ್ವಶಿ ಸ್ಟೇಟಸ್ ವೈರಲ್

First Published | Sep 6, 2023, 11:29 AM IST

ಬೆಂಗಳೂರು: ವಿಶ್ವಕಪ್‌ ಹತ್ತಿರವಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಕ್ರಿಕೆಟ್ ಜ್ವರ ಜೋರಾಗಿದೆ. ಹೀಗಿರುವಾಗಲೇ ಬಾಲಿವುಡ್ ನಟಿ ಊರ್ವಸಿ ರೌಟೇಲ್ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ. ಈ ಬಾರಿ ಊರ್ವಸಿ ಜತೆ ಥಳುಕು ಹಾಕಿಕೊಂಡ ಹೆಸರು ರಿಷಭ್ ಪಂತ್ ಅವರದ್ದಲ್ಲ ಬದಲಾಗಿ ಪಾಕಿಸ್ತಾನದ ಯುವ ವೇಗಿಯದ್ದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳಂತೆ ಏಷ್ಯಾದ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದರ ಭಾಗವಾಗಿ ಏಷ್ಯಾದ ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದು, ಪ್ರತಿ ಪಂದ್ಯವು ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿವೆ.
 

ಈಗಾಗಲೇ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತ ಮುಕ್ತಾಯವಾಗಿದ್ದು, ಆಫ್ಘಾನಿಸ್ತಾನ ಹಾಗೂ ನೇಪಾಳ ತಂಡಗಳು ಟೂರ್ನಿಯಿಂದ ಹೊರಬಿದ್ದಿದ್ದು, ನಿರೀಕ್ಷೆಯಂತೆಯೇ ಬಾಂಗ್ಲಾದೇಶ, ಪಾಕಿಸ್ತಾನ, ಭಾರತ ಹಾಗೂ ಶ್ರೀಲಂಕಾ ತಂಡಗಳು ಸೂಪರ್ 4 ಹಂತ ಪ್ರವೇಶಿಸಿವೆ.

Tap to resize

ಇದೆಲ್ಲಾ ಮೈದಾನದೊಳಗಿನ ವಿಚಾರವಾದರೇ, ಮೈದಾನದ ಹೊರಗೆ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್‌ ಶೇರ್ ಮಾಡುವ ಮೂಲಕ ಸೆಂಟರ್ ಆಫ್ ಅಟ್ರ್ಯಾಕ್ಷನ್ ಎನಿಸಿಕೊಂಡಿದ್ದಾರೆ.

ಈ ಮೊದಲು ರಿಷಭ್ ಪಂತ್ ಹಾಗೂ ಊರ್ವಶಿ ರೌಟೇಲಾ ನಡುವಿನ ಗಾಸಿಫ್ ಸದ್ಯ ಗುಟ್ಟಾಗಿ ಏನೂ ಉಳಿದಿಲ್ಲ. ಸ್ವತಃ ರಿಷಭ್ ಪಂತ್ ಹಾಗೂ ಊರ್ವಶಿ ರೌಟೇಲಾ ಕೊನೆಗೂ ನಮ್ಮ ನಡುವೆ ಏನೂ ನಡೆದಿಲ್ಲ ಎನ್ನುವ ಮೂಲಕ ಕೆಲ ಗಾಳಿ ಸುದ್ದಿಗೆ ತೆರೆ ಎಳೆದಿದ್ದರು.

Image: Instagram

ಇದೀಗ ಊರ್ವಶಿ ರೌಟೇಲ್‌, ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಮನೆಯ ಟಿವಿಯಲ್ಲಿ ವೀಕ್ಷಿಸುತ್ತಾ, ಪಾಕಿಸ್ತಾನದ ಕ್ರಿಕೆಟಿಗ ನಸೀಂ ಶಾ ಅವರಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ.

ಇದೀಗ ಊರ್ವಶಿ ರೌಟೇಲಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ರೋಸ್ಟ್ ಮಾಡಿದ್ದಾರೆ. ರಿಷಭ್ ಪಂತ್ ಅವರನ್ನು ಕೈಬಿಟ್ಟು ಇದೀಗ ಪಾಕಿಸ್ತಾನದ ವೇಗಿಗೆ ಗಾಳ ಹಾಕಿದ್ದಾಳೆ ಎಂದು ನೆಟ್ಟಿಗರು ಊರ್ವಶಿಯನ್ನು ಟ್ರೋಲ್ ಮಾಡಿದ್ದಾರೆ.

ಅಂದಹಾಗೆ ಊರ್ವಶಿ ರೌಟೇಲಾ, ನಸೀಂ ಶಾ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಕಳೆದ ವರ್ಷ ನಸೀಂ ಶಾ ಅವರ ರೊಮ್ಯಾಂಟಿಕ್ ಇನ್‌ಸ್ಟಾಗ್ರಾಂ ರೀಲ್ ಶೇರ್ ಮಾಡಿದ್ದರು. ಅದು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಅಗಿತ್ತು.
 

Latest Videos

click me!