'ಆತ ಊಟಿಗೆ ಕರೆದುಕೊಂಡು ಹೋಗಿ..': ಅಪ್ರಾಪ್ತೆ ಮೇಲೆ ಆರ್‌ಸಿಬಿ ಆಟಗಾರ ಲೈಂಗಿಕ ದೌರ್ಜನ್ಯ, ಬೇಲ್ ಕ್ಯಾನ್ಸಲ್! ಶುರುವಾಯ್ತು ಬಂಧನ ಭೀತಿ

Published : Dec 25, 2025, 11:48 AM IST

ಜೈಪುರ: ಬಹುನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಹರಾಜು ಕೂಡಾ ಯಶಸ್ವಿಯಾಗಿ ಮುಕ್ತಾಯವಾಗಿದೆ. ಹೀಗಿರುವಾಗಲೇ ಅರ್‌ಸಿಬಿಗೆ ಬಿಗ್ ಶಾಕ್ ಎದುರಾಗಿದೆ. ಆರ್‌ಸಿಬಿ ಸ್ಟಾರ್ ಆಟಗಾರ ಬಂಧನ ಭೀತಿಗೆ ಒಳಗಾಗಿದ್ದಾರೆ. 

PREV
17
ಆರ್‌ಸಿಬಿಗೆ ಬಿಗ್ ಶಾಕ್

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಇದೀಗ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಹೀಗಿರುವಾಗಲೇ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.

27
ಯಶ್ ದಯಾಳ್ ಮೇಲೆ ಗಂಭೀರ ಆರೋಪ

ಹೌದು, 27 ವರ್ಷದ ಎಡಗೈ ವೇಗಿ ಯಶ್ ದಯಾಳ್, ಘಾಜಿಯಾಬಾದ್ ಮೂಲದ ಯುವತಿಯನ್ನು ಮದುವೆಯಾಗುವುದಾಗಿ ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.

37
ಯಶ್ ದಯಾಳ್ ಮೇಲೆ ಪೋಕ್ಸೋ ಕೇಸ್

ಇದೀಗ ಪೋಕ್ಸೋ ಪ್ರಕರಣದಲ್ಲಿ ಯುವ ಕ್ರಿಕೆಟಿಗ, ಆರ್‌ಸಿಬಿ ತಂಡದ ವೇಗಿ ಯಶ್‌ ದಯಾಳ್‌ಗೆ ಬಂಧನ ಭೀತಿ ಎದುರಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಪುರದ ಪೋಕ್ಸೋ ನ್ಯಾಯಾಲಯವು ಯಶ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

47
ಸಂತ್ರಸ್ಥೆಯ ಹೇಳಿಕೆ

ಸಂತ್ರಸ್ಥ ಯುವತಿ, ನಾನು ಯಶ್ ದಯಾಳ್ ಅವರ ಮನೆಯಲ್ಲಿ 15 ದಿನಗಳ ಕಾಲ ವಾಸವಿದ್ದೆ. ಆತ ನನ್ನನ್ನು ಊಟಿಗೆ ಕರೆದುಕೊಂಡು ಹೋಗಿದ್ದ. ನಾನು ಅವರ ಮನೆಯಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಯಶ್ ಕುಟುಂಬಸ್ಥರು ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ ಎಂದು ದೈನಿಕ್ ಬಾಸ್ಕರ್ ವರದಿ ಮಾಡಿದೆ.

57
ಯಶ್ ದಯಾಳ್ ಮೇಲೆ ಗಂಭೀರ ಆರೋಪ

ಯಶ್ ದಯಾಳ್ ನನ್ನ ಜತೆ ಮಾತ್ರವಲ್ಲದೇ, ಹಲವು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ. ಮೂವರ ಜತೆ ಅಕ್ರಮ ಸಂಬಂಧ ಹೊಂದಿರುವುದು ನನ್ನ ಜತೆ ಗಮನಕ್ಕೆ ಬಂದಿದೆ ಎಂದು ಘಾಜಿಯಾಬಾದ್ ಸಂತ್ರಸ್ಥೆ ಆರೋಪಿಸಿದ್ದಾರೆ.

67
ನಿರೀಕ್ಷಣಾ ಜಾಮೀನು ರದ್ದು!

ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಅವರು ತಮ್ಮ ಆದೇಶದಲ್ಲಿ, ಸಂತ್ರಸ್ತೆಯ ಹೇಳಿಕೆ, ಲಭ್ಯವಿರುವ ಪುರಾವೆ ಮತ್ತು ಪ್ರಕರಣದ ಸಂದರ್ಭ ಪರಿಗಣಿಸಿದರೆ ತನಿಖೆಗೆ ಮುಂಚಿತವಾಗಿ ಆರೋಪಿಗೆ ಬಂಧನದಿಂದ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

77
ಆರ್‌ಸಿಬಿಗೆ ಹಿನ್ನಡೆ?

ಇದರ ಬೆನ್ನಲ್ಲೇ ಯಶ್ ದಯಾಳ್‌ಗೆ ಬಂಧನ ಭೀತಿ ಎದುರಾಗಿದೆ. ಒಂದು ವೇಳೆ ಯಶ್ ದಯಾಳ್ ಅರೆಸ್ಟ್ ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂಬರುವ ಐಪಿಎಲ್‌ನಲ್ಲಿ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories