WPL 2023: ಹೋಳಿ ಬಣ್ಣದಲ್ಲಿ ಮಿಂದೆದ್ದ ಆರ್‌ಸಿಬಿ ಮಹಿಳೆಯರು!

Published : Mar 07, 2023, 05:02 PM IST

ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರೂ, ಚೊಚ್ಚಲ ಆವೃತ್ತಿಯ ವುಮೆನ್ಸ್‌ ಐಪಿಎಲ್‌ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಜೋಶ್‌ಗೆ ಯಾವುದೇ ಸಮಸ್ಯೆಯಾಗಿಲ್ಲ. ತಂಡದ ಆಟಗಾರ್ತಿಯರು ಮಂಗಳವಾರ ಟೀಮ್‌ ಹೋಟೆಲ್‌ನಲ್ಲಿ ಸಂಭ್ರಮದಿಂದ ಹೋಳಿ ಆಚರಿಸಿದ್ದಾರೆ.

PREV
19
WPL 2023: ಹೋಳಿ ಬಣ್ಣದಲ್ಲಿ ಮಿಂದೆದ್ದ ಆರ್‌ಸಿಬಿ ಮಹಿಳೆಯರು!

ಆರ್‌ಸಿಬಿ ತಂಡದ ಆಟಗಾರ್ತಿರು ಮಂಗಳವಾರ ಮುಂಬೈನ ಟೀಮ್‌ ಹೋಟೆಲ್‌ನಲ್ಲಿ ಸಂಭ್ರಮದಿಂದ ಹೋಳಿ ಆಚರಿಸಿದರು. ಈ ವೇಳೆ ಆಸೀಸ್ ಆಲ್ರೌಂಡರ್‌ ಎಲ್ಲೀಸ್‌ ಪೆರ್ರಿ ಕಾಣಿಸಿಕೊಂಡ ರೀತಿ.

29

ಹೋಳಿ ಸಂಭ್ರಮದಲ್ಲಿ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದನಾ. ತಂಡದ ಆಟಗಾರ್ತಿಯರು ಹೋಳಿ ಆಡಿದ ಚಿತ್ರಗಳನ್ನು ಆರ್‌ಸಿಬಿ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

39

ವುಮೆನ್ಸ್ ಪ್ರೀಮಿಯರ್‌ ಲೀಗ್‌ನ ಮೊದಲ ಪಂದ್ಯದಲ್ಲ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ದೊಡ್ಡ ಅಂತರದ ಸೋಲು ಕಂಡಿದ್ದರೂ, ಇದು ತಂಡದ ಮೂಡ್‌ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

49

ಸ್ಮೃತಿ ಮಂದನಾ, ಎಲ್ಲೀಸ್‌ ಪೆರ್ರಿ ಅಲ್ಲದೆ, ತಂಡದ ವಿಕೆಟ್‌ ಕೀಪರ್‌ ರಿಚಾ ಘೋಷ್‌ ಕೂಡ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿ, ವಿದೇಶಿ ಆಟಗಾರ್ತಿಯರಿಗೆ ಬಣ್ಣ ಮೆತ್ತಿದರು.

59

ಹೋಳಿ ಬಣ್ಣದ ಸಂಭ್ರಮದಲ್ಲಿ ನ್ಯೂಜಿಲೆಂಡ್‌ ತಂಡದ ಅಟಗಾರ್ತಿ ಸೋಫಿ ಡಿವೈನ್‌. ಈ ಬಾರಿ ಆರ್‌ಸಿಬಿ ಅಗ್ರಕ್ರಮಾಂಕದ ಪ್ರಮುಖ ಬ್ಯಾಟರ್‌ ಇವರಾಗಿದ್ದಾರೆ.

69

ಆರ್‌ಸಿಬಿ ನಾಯಕಿ ಸ್ಮೃತಿ ಅವರು ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಗಳಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ಜೊತೆಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

 

 

79

ಗೆಲುವಿನ ಲಯ ಕಂಡುಕೊಳ್ಳುವ ಗುರಿಯಲ್ಲಿರುವ ಆರ್‌ಸಿಬಿ ತಂಡ ತನ್ನ ಮೂರನೇ ಮುಖಾಮುಖಿಯಲ್ಲಿ ಬುಧವಾರ ಗುಜರಾತ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ.

89

ಆರ್‌ಸಿಬಿಯೊಂದಿಗೆ ಗುಜರಾತ್‌ ಜೈಂಟ್ಸ್‌ ಕೂಡ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಗೆಲುವಿನ ಖಾತೆ ತೆರೆಯುವ ಗುರಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದೆ.

 

99

ತಂಡದ ಆಟಗಾರ್ತಿಯರು ಮಾತ್ರವಲ್ಲದೆ, ಸಿಬ್ಬಂದಿ ಕೂಟ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇದರ ಚಿತ್ರಗಳನ್ನು ಆಟಗಾರ್ತಿಯರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read more Photos on
click me!

Recommended Stories